ಕರುಣ್ ನಾಯರ್
ಕರುಣ್ ನಾಯರ್

IPL 2025: 'ಮಾನಸಿಕವಾಗಿ ಸಿದ್ಧನಾಗಿದ್ದೆ, ಆ ಒಂದು ಅವಕಾಶಕ್ಕಾಗಿ ಮೂರು ವರ್ಷದಿಂದ ಕಾಯುತ್ತಿದ್ದೆ'; ಕನ್ನಡಿಗ ಕರುಣ್ ನಾಯರ್

ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದ ಮೊದಲನೇ ಪಂದ್ಯದಲ್ಲೇ 40 ಎಸೆತಗಳಲ್ಲಿ 89 ರನ್ ಗಳಿಸಿದರು. ಜಸ್ಪ್ರೀತ್ ಬುಮ್ರಾ ಸೇರಿದಂತೆ ಮುಂಬೈ ಇಂಡಿಯನ್ಸ್ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಂಡರು.
Published on

ನವದೆಹಲಿ: ಮೂರು ವರ್ಷಗಳ ನಂತರ ಐಪಿಎಲ್‌ಗೆ ಮರಳಿರುವ ಕನ್ನಡಿಗ ಕರುಣ್ ನಾಯರ್ ಡೆಲ್ಲಿ ಕ್ಯಾಪಿಟಲ್ಸ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಎರಡು ಆವೃತ್ತಿಗಳಲ್ಲಿ ಲೀಗ್‌ನಿಂದ ದೂರವಿದ್ದರೂ, ಎದುರಾಳಿಗಳಿಂದ ಏನನ್ನು ನಿರೀಕ್ಷಿಸಬೇಕೆಂದು ಅವರಿಗೆ ಯಾವಾಗಲೂ ತಿಳಿದಿತ್ತು ಮತ್ತು ಅವರು ಈ ಹಿಂದೆಯೇ ಅದನ್ನು ಮಾಡಿದ್ದರು.

ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದ ಮೊದಲನೇ ಪಂದ್ಯದಲ್ಲೇ 40 ಎಸೆತಗಳಲ್ಲಿ 89 ರನ್ ಗಳಿಸಿದರು. ಜಸ್ಪ್ರೀತ್ ಬುಮ್ರಾ ಸೇರಿದಂತೆ ಮುಂಬೈ ಇಂಡಿಯನ್ಸ್ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಆದರೆ, ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 12 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಕರುಣ್ ನಾಯರ್ ಅವರ ಈ ಆಕರ್ಷಕ ನಾಕ್ ವ್ಯರ್ಥವಾಯಿತು.

ಜಸ್ಪ್ರೀತ್ ಬುಮ್ರಾ ಅವರ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿರುವ ಬ್ಯಾಟರ್‌ಗಳು ಕಡಿಮೆಯೇ. ಆದರೆ, ಕರುಣ್ ನಾಯರ್ ಬುಮ್ರಾ ಅವರನ್ನು ಕಾಡಿದರು. ದೇಶೀಯ ಋತುವಿನಲ್ಲಿ ವಿದರ್ಭ ಪರ ಎಲ್ಲ ಸ್ವರೂಪಗಳಲ್ಲಿ 1870 ರನ್‌ಗಳನ್ನು ಗಳಿಸಿರುವ ಕರುಣ್, ತಯಾರಿಯೇ ತಮ್ಮ ಯಶಸ್ಸಿನ ಕೀಲಿ ಎಂದು ಒತ್ತಿ ಹೇಳಿದರು.

'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಮೊದಲು ಐಪಿಎಲ್ ಆಡಿದ್ದೇನೆ ಮತ್ತು ಅದು ಹೇಗೆ ಇರುತ್ತದೆ ಎಂದು ನನಗೆ ತಿಳಿದಿದೆ. ಸವಾಲುಗಳು ಪರಿಚಿತವಾಗಿರುವುದರಿಂದ ಅನಿರೀಕ್ಷಿತ ಅಥವಾ ಸಂಪೂರ್ಣವಾಗಿ ಹೊಸದನ್ನು ಎದುರಿಸುವುದಿಲ್ಲ ಎಂಬ ವಿಶ್ವಾಸ ನನಗಿತ್ತು. ಆದರೆ, ಕೆಲವು ಎಸೆತಗಳನ್ನು ಎದುರಿಸಿದ ನಂತರ ಆಟದ ವೇಗ ಮತ್ತು ಪರಿಸ್ಥಿತಿಗೆ ಒಗ್ಗಿಕೊಳ್ಳುವುದರ ಬಗ್ಗೆ ಮಾತ್ರ ನನ್ನ ಮನಸ್ಸಿನಲ್ಲಿ ಯೋಚನೆಯಿತ್ತು' ಎಂದು ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಬಾರಿಸಿರುವ ನಾಯರ್ ಸುದ್ದಿಗಾರರಿಗೆ ತಿಳಿಸಿದರು.

ಕರುಣ್ ನಾಯರ್
IPL 2025: 'ಡಿಯರ್ ಕ್ರಿಕೆಟ್, ಮತ್ತೊಂದು ಅವಕಾಶ ಕೊಡು': ಮೂರು ವರ್ಷಗಳ ನಂತರ ಐಪಿಎಲ್‌ಗೆ ಮರಳಿದ ಕನ್ನಡಿಗ ಕರುಣ್ ನಾಯರ್!

2022ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕೊನೆಯ ಬಾರಿಗೆ ಆಡಿದ ನಾಯರ್, ಪವರ್‌ಪ್ಲೇ ಸಮಯದಲ್ಲಿ ಸಾಂಪ್ರದಾಯಿಕ ಹೊಡೆತಗಳನ್ನು ಹೊಡೆಯುವ ಮತ್ತು ನಂತರ ಇನಿಂಗ್ಸ್‌ನ ಕೊನೆಯ ಭಾಗದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಬಗ್ಗೆಯೂ ಅವರು ಮಾತನಾಡಿದರು.

'ಆದ್ದರಿಂದ, 'ಸಮಯ ಕೊಡು, ಮೊದಲಿಗೆ ಸಾಮಾನ್ಯ ಹೊಡೆತಗಳನ್ನು ಆಡು ಮತ್ತು ನಂತರ, ಹೇಗೆ ಆಡಬೇಕು ಎಂಬುದು ನಿನಗೆ ತಿಳಿಯುತ್ತದೆ' ಎಂದು ನನಗೆ ನಾನೇ ಹೇಳಿಕೊಂಡೆ. ಅದೃಷ್ಟವಶಾತ್, ಎಲ್ಲವೂ ಚೆನ್ನಾಗಿ ನಡೆಯಿತು ಮತ್ತು ನಾನು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ. ಆದರೆ, ತಂಡ ಗೆದ್ದಿದ್ದರೆ ನಾನು ಅದನ್ನು ಇಷ್ಟಪಡುತ್ತಿದ್ದೆ' ಎಂದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಪ ನಾಯಕ ಫಾಫ್ ಡು ಪ್ಲೆಸಿಸ್ ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದ ಕಾರಣ ಕರುಣ್ ನಾಯರ್ ಅವರಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬರಲು ಅವಕಾಶ ಸಿಕ್ಕಿತು.

ಕರುಣ್ ನಾಯರ್
IPL 2025, DC vs MI: ರಾಹುಲ್, ಅಕ್ಷರ್ ಪಟೇಲ್ ಬ್ಯಾಟಿಂಗ್ ವೈಫಲ್ಯ; ಮುಂಬೈ ಇಂಡಿಯನ್ಸ್ 12 ರನ್ ಗೆಲುವು!

'ನಾನು ಮೊದಲ ನಾಲ್ಕು ಪಂದ್ಯಗಳಲ್ಲಿ ಆಡಲಿಲ್ಲ. ಆದರೆ, ಬೇಗ ಅಥವಾ ನಿಧಾನವಾಗಿಯೋ ಅವಕಾಶ ಬರುತ್ತದೆ ಮತ್ತು ನಾನು ಸಿದ್ಧನಾಗಿರಬೇಕು ಎಂದು ನನಗೆ ತಿಳಿದಿತ್ತು. ತಂಡದಲ್ಲಿ ಫಾಫ್‌ ಅವರಂತ ಒಬ್ಬ ಪ್ರಮುಖ ಆಟಗಾರ ಹೊರಗುಳಿದಿದ್ದಾರೆ. ಹೀಗಾಗಿ, ಹೊರಗೆ ಕುಳಿತಿರುವ ಕೆಲವೇ ಬ್ಯಾಟ್ಸ್‌ಮನ್‌ಗಳು ಯಾವುದೇ ಸಮಯದಲ್ಲಿ ಆದರೂ ಸಿದ್ಧರಾಗಿರಬೇಕು ಎಂದು ನಮಗೆ ತಿಳಿದಿತ್ತು. ಹೀಗಾಗಿಯೇ, ಮಾನಸಿಕವಾಗಿ ನಾನು ಸಿದ್ಧನಾಗಿದ್ದೆ ಮತ್ತು ಅವಕಾಶಕ್ಕಾಗಿ ಎದುರು ನೋಡುತ್ತಿದ್ದೆ' ಎಂದು ತಿಳಿಸಿದರು.

'ನನಗೆ ಆತ್ಮವಿಶ್ವಾಸವಿತ್ತು. ಅವಕಾಶ ಸಿಕ್ಕರೆ ಐಪಿಎಲ್‌ನಲ್ಲಿ ಆಡಲು ನಾನು ಚೆನ್ನಾಗಿ ಸಿದ್ಧನಾಗಿದ್ದೇನೆ ಎಂದು ನನಗೆ ತಿಳಿದಿತ್ತು. ಆದ್ದರಿಂದ ನಾನು ಈ ಆವೃತ್ತಿಯ ಉದ್ದಕ್ಕೂ ತಯಾರಿ ಮಾಡಿಕೊಳ್ಳುವುದು ಮತ್ತು ನನ್ನ ಅವಕಾಶಕ್ಕಾಗಿ ಕಾಯುವುದನ್ನು ಮುಂದುವರಿಸಿದ್ದೆ. ತಂಡವು 11 ಅಥವಾ 12 ಆಟಗಾರರನ್ನು ಆಯ್ಕೆ ಮಾಡುವುದು ಯಾವಾಗಲೂ ಕಠಿಣ ಕೆಲಸ. ನಾನು ಅದನ್ನು ಯಾವಾಗಲೂ ಗೌರವಿಸುತ್ತೇನೆ' ಎಂದು ಕರುಣ್ ನಾಯರ್ ಹೇಳಿದರು.

X

Advertisement

X
Kannada Prabha
www.kannadaprabha.com