IPL 2025: RCB ಈ ಸಲ ಕಪ್ ಗೆಲ್ಲುತ್ತಾ ಎಂದಿದ್ದಕ್ಕೆ ವಿರಾಟ್ ಕೊಹ್ಲಿ ಕೊಟ್ಟ ಉತ್ತರ ಹೀಗಿದೆ...

ಕೊಹ್ಲಿಯ ಜೆರ್ಸಿ ಸಂಖ್ಯೆ 18 ಆಗಿರುವುದರಿಂದ, ಆರ್‌ಸಿಬಿ ಅಭಿಮಾನಿಗಳು 18ನೇ ಆವೃತ್ತಿಯಲ್ಲಿ RCBಯ ಪ್ರಶಸ್ತಿ ಬರ ಕೊನೆಗೊಳ್ಳಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.
ವಿರಾಟ್ ಕೊಹ್ಲಿ - ಮಿಸ್ಟರ್ ನಾಗ್ಸ್
ವಿರಾಟ್ ಕೊಹ್ಲಿ - ಮಿಸ್ಟರ್ ನಾಗ್ಸ್
Updated on

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿ ಆರಂಭವಾದಾಗಲೆಲ್ಲಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಮಿ. ನಾಗ್ಸ್ (ಡ್ಯಾನಿಶ್ ಸೇಠ್) ಮತ್ತು ವಿರಾಟ್ ಕೊಹ್ಲಿ ನಡುವಿನ ಕೆಲವು ಅದ್ಭುತ ಸಂಭಾಷಣೆಗಳನ್ನು ಪ್ರದರ್ಶಿಸುವ ಹಾಸ್ಯಮಯ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತದೆ. ಈ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತದೆ. 2025ನೇ ಆವೃತ್ತಿಯಲ್ಲಿ ಆರ್‌ಸಿಬಿಗೆ ಉತ್ತಮ ಆರಂಭ ಸಿಕ್ಕಿದ್ದು, ಕೊಹ್ಲಿ ಮತ್ತು ಮಿ. ನಾಗ್ಸ್ ನಡುವಿನ 'guided meditation session' ಅನ್ನು ಹಂಚಿಕೊಂಡಿದೆ. ಈ ಮಾತುಕತೆಯಲ್ಲಿ, ಕಳೆದ 17 ಸೀಸನ್‌ಗಳಿಂದ ತಮ್ಮ ತಂಡ ಎದುರಿಸುತ್ತಿರುವ ಐಪಿಎಲ್ ಪ್ರಶಸ್ತಿ ಬರಕ್ಕಾಗಿ ಕೊಹ್ಲಿ ತಮ್ಮದೇ ಫ್ರಾಂಚೈಸಿಯನ್ನು ಟ್ರೋಲ್ ಮಾಡಿದ್ದಾರೆ.

ಮಿಸ್ಟರ್ ನಾಗ್ಸ್: ವಿರಾಟ್, ನಾನು ನಿಮ್ಮನ್ನು ಕೊನೆಯ ಬಾರಿ ಭೇಟಿಯಾದಾಗಿನಿಂದೀಚೆಗೆ ನೀವು ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್ (ಟಿ20) ಗೆದ್ದಿದ್ದೀರಿ. ಈಗ ನಂಬುವುದು ಸುರಕ್ಷಿತವೇ... (ಈ ವರ್ಷ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲುತ್ತದೆಯೇ ಎಂಬರ್ಥದಲ್ಲಿ ಕೇಳಿದ್ದಾರೆ)

ವಿರಾಟ್ ಕೊಹ್ಲಿ: (ದೀರ್ಘ ವಿರಾಮದ ನಂತರ) ನಮ್ಮೊಂದಿಗೆ, ಇದು ಎಂದಿಗೂ ಸುರಕ್ಷಿತವಲ್ಲ. ನೀವು ನಂಬಬಹುದು ಆದರೆ, ಅದು ಎಂದಿಗೂ ಸುರಕ್ಷಿತವಲ್ಲ.

ಮಿಸ್ಟರ್ ನಾಗ್ಸ್: ಇಲ್ಲ, ನಾನು ನಿಮ್ಮನ್ನು ಕೇಳಲು ಹೊರಟಿದ್ದೆ, ನೀವು ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವಕಪ್ ಗೆದ್ದ ನಂತರ, ನಿಮ್ಮ ಅನುಮೋದನೆಗಳ (ಜಾಹೀರಾತುಗಳ) ಮೌಲ್ಯ ಹೆಚ್ಚಾಗಿದೆಯೇ?

ವಿರಾಟ್ ಕೊಹ್ಲಿ: "ಹೌದು"

ಮಿಸ್ಟರ್ ನಾಗ್ಸ್: ಅದಕ್ಕಾಗಿಯೇ ನೀವು ನಿಮ್ಮ ಹಳೆಯ ಪೋಸ್ಟ್‌ಗಳನ್ನು ಆರ್ಕೈವ್ ಮಾಡಿದ್ದೀರಾ?

ವಿರಾಟ್ ಕೊಹ್ಲಿ: ನಾನು ಸಾಮಾಜಿಕ ಮಾಧ್ಯಮದೊಂದಿಗೆ ತುಂಬಾ ಆಸಕ್ತಿದಾಯಕ ಸ್ಥಳದಲ್ಲಿದ್ದೇನೆ. ಸದ್ಯ, ನಾನು ಹೆಚ್ಚು ತೊಡಗಿಸಿಕೊಳ್ಳುವ ಸ್ಥಳದಲ್ಲಿಲ್ಲ. ನಿಮಗೆ ಭವಿಷ್ಯದ ಬಗ್ಗೆ ಎಂದಿಗೂ ತಿಳಿದಿರುವುದಿಲ್ಲ, ಆದರೆ ಅದನ್ನು ಖಂಡಿತವಾಗಿಯೂ ರೀಸೆಟ್ ಮಾಡಬೇಕಾಗಿತ್ತು.

ನಂತರ ನಡೆದ ಸಂಭಾಷಣೆಯಲ್ಲಿ, ಮಿಸ್ಟರ್ ನಾಗ್ಸ್ ಬೆಂಗಳೂರಿನ ಅಭಿಮಾನಿಗಳು ನಂಬಬೇಕಾದ ವರ್ಷ ಇದುವೇ ಎಂದು ಕೇಳಿದಾಗ, ಅಭಿಮಾನಿಗಳು ಮೊದಲು ನಂಬುತ್ತಿರಲಿಲ್ಲವೇ ಎಂದು ಕೊಹ್ಲಿ ನಗುತ್ತಾ ಕೇಳಿದರು. ಈ ವರ್ಷ 18ನೇ ಆವೃತ್ತಿಯಾಗಿದ್ದು, ವಿರಾಟ್ ಕೊಹ್ಲಿ ಅವರ ಜೆರ್ಸಿ ಸಂಖ್ಯೆ ಕೂಡ 18 ಆಗಿದೆ. ಹೀಗಾಗಿ, ಈ ಸಲ ಆರ್‌ಸಿಬಿ ಪ್ರಶಸ್ತಿ ಗೆಲ್ಲುತ್ತದೆ ಎಂದು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

ಕೊಹ್ಲಿಯ ಜೆರ್ಸಿ ಸಂಖ್ಯೆ 18 ಆಗಿರುವುದರಿಂದ, ಆರ್‌ಸಿಬಿ ಅಭಿಮಾನಿಗಳು 18ನೇ ಆವೃತ್ತಿಯಲ್ಲಿ RCBಯ ಪ್ರಶಸ್ತಿ ಬರ ಕೊನೆಗೊಳ್ಳಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ವಿರಾಟ್ ಕೊಹ್ಲಿ - ಮಿಸ್ಟರ್ ನಾಗ್ಸ್
IPL 2025: ಮುಂಬೈ ಇಂಡಿಯನ್ಸ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ RCB; ಅಭಿಮಾನಿಗಳು ಏನಂದ್ರು?

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com