
ಚಂಡೀಗಢ: ಐಪಿಎಲ್ ಟೂರ್ನಿಯಲ್ಲಿ ಮತ್ತೊಂದು ರೋಚಕ ಕದನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 16 ರನ್ ಗಳ ವಿರೋಚಿತ ಗೆಲುವು ದಾಖಲಿಸಿದೆ.
ಚಂಡೀಗಢದ ಮುಲ್ಲಾನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 16 ರನ್ ಗಳ ವಿರೋಚಿತ ಗೆಲುವು ದಾಖಲಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಕೇವಲ 111 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ಕೇವಲ 15.1 ಓವರ್‌ನಲ್ಲಿ 95 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಕೋಲ್ಕತ್ತಾ ಹೀನಾಯವಾಗಿ ಸೋತಿತು.
ಐಪಿಎಲ್ ಇತಿಹಾದ ದಾಖಲೆ ಜಯ
ಇನ್ನು ಈ ಗೆಲುವಿನ ಮೂಲಕ ಪಂಜಾಬ್ ಕಿಂಗ್ಸ್ ಐಪಿಎಲ್ ಇತಿಹಾಸದ ಅಪರೂಪದ ದಾಖಲೆ ಬರೆದಿದ್ದು, ಐಪಿಎಲ್ ಇತಿಹಾಸದಲ್ಲೇ ಕಡಿಮೆ ಸ್ಕೋರ್ ಅನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿದ ಮೊದಲ ತಂಡ ಎಂಬ ಖ್ಯಾತಿಗೆ ಭಾಜನವಾಗಿದೆ.
ಈ ಹಿಂದೆ ಇದೇ ಪಂಜಾಬ್ ವಿರುದ್ಧ 2009ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 116ರನ್ ಗಳನ್ನು ಡಿಫೆಂಡ್ ಮಾಡಿಕೊಂಡಿತ್ತು. ಇದು ಈ ವರೆಗೂ ಐಪಿಎಲ್ ನಲ್ಲಿ ತಂಡವೊಂದು ಯಶಸ್ವಿಯಾಗಿ ಡಿಫೆಂಡ್ ಮಾಡಿದ ಕಡಿಮೆ ಸ್ಕೋರ್ ಆಗಿತ್ತು. ಇದೀಗ ಪಂಜಾಬ್ 111ರನ್ ಗಳನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
Lowest totals defended in the IPL
111 - PBKS vs KKR, Mullanpur, 2025
116/9 - CSK vs PBKS, Durban, 2009
118 - SRH vs MI, Mumbai WS, 2018
119/8 - PBKS vs MI, Durban, 2009
119/8 - SRH vs PWI, Pune, 2013
*excludes rain-affected games
ಎರಡೂ ತಂಡಗಳೂ ಆಲೌಟ್
ಇನ್ನು ಐಪಿಎಲ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಎರಡೂ ತಂಡಗಳು ಆಲೌಟ್ ಆದ 5ನೇ ಪಂದ್ಯ ಇದಾಗಿದೆ. ಈ ಹಿಂದೆ 2010ರಲ್ಲಿ ಡೆಕ್ಕನ್ ಚಾರ್ಜಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು, 2017ರಲ್ಲಿ ಕೆಕೆಆರ್ ಮತ್ತು ಆರ್ ಸಿಬಿ, 2018ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್, 2024ರಲ್ಲಿ ಮುಂಬೈ ಮತ್ತು ಕೆಕೆಆರ್ ತಂಡಗಳು ಆಲೌಟ್ ಆಗಿದ್ದವು. ಇದೀಗ ಈ ಪಟ್ಟಿಗೆ ಪಂಜಾಬ್ ಮತ್ತು ಕೆಕೆಆರ್ ಪಂದ್ಯ ಕೂಡ ಸೇರ್ಪಡೆಯಾಗಿದೆ.
Instances of both teams getting all-out in IPL (by aggregates)
180 - KKR vs RCB, Kolkata, 2017
205 - MI vs SRH, Mumbai WS, 2018
206 - PBKS vs KKR, Mullanpur, 2025
314 - MI vs KKR, Mumbai WS, 2024
316 - Deccan Chargers vs RR, Nagpur, 2010
ಗರಿಷ್ಟ ಸ್ಕೋರ್ ಚೇಸ್ ಮಾಡಿ ಕನಿಷ್ಠ ಸ್ಕೋರ್ ಡಿಫೆಂಡ್ ಮಾಡಿದ ಪಂಜಾಬ್
ಇನ್ನು ಐಪಿಎಲ್ ಇತಿಹಾಸದಲ್ಲೇ ಗರಿಷ್ಟ ಸ್ಕೋರ್ ಚೇಸ್ ಮಾಡಿ ಕನಿಷ್ಠ ಸ್ಕೋರ್ ಡಿಫೆಂಡ್ ಮಾಡಿದ ತಂಡ ಎಂಬ ಕೀರ್ತಿಗೂ ಪಂಜಾಬ್ ಪಾತ್ರವಾಗಿದೆ. ಈ ಹಿಂದೆ 2024ರಲ್ಲಿ ಇದೇ ಕೆಕೆಆರ್ ವಿರುದ್ಧ ಪಂಜಾಬ್ ತಂಡ ಗರಿಷ್ಠ ರನ್ ಚೇಸ್ ಮಾಡಿತ್ತು. ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್ 261 ರನ್ ಕಲೆಹಾಕಿ ಪಂಜಾಬ್ ಗೆ ಗೆಲ್ಲಲು 262 ರನ್ ಗುರಿ ನೀಡಿತ್ತು. ಈ ಬೃಹತ್ ಮೊತ್ತವನ್ನು ಚೇಸ್ ಮಾಡಿದ್ದ ಪಂಜಾಬ್ ಕೇವಲ 18.4 ಓವರ್ ನಲ್ಲೇ ಕೇವಲ 2 ವಿಕೆಟ್ ಕಳೆದುಕೊಂಡು 262ರನ್ ಕಲೆಹಾಕಿ ಜಯಭೇರಿ ಭಾರಿಸಿತ್ತು. ಅಂತೆಯೇ ಇದೀಗ ತನ್ನದೇ ಕಡಿಮೆ ಸ್ಕೋರ್ 111ರನ್ ಗಳನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿ ಕಡಿಮೆ ಸ್ಕೋರ್ ಡಿಫೆಂಡ್ ಮಾಡಿದ ಮೊದಲ ಐಪಿಎಲ್ ತಂಡ ಎಂಬ ಕೀರ್ತಿಗೂ ಭಾಜನವಾಗಿದೆ.
PBKS vs KKR
Kolkata 2024: PBKS record the highest ever successful T20 run-chase
Mullanpur 2025: PBKS defend the lowest total in the IPL
Advertisement