IPL 2025: 43ನೇ ವಯಸ್ಸಿನಲ್ಲಿ ಐಪಿಎಲ್ ಇತಿಹಾಸದಲ್ಲಿಯೇ ಯಾರೂ ಮಾಡದ ದಾಖಲೆ ಮಾಡಿದ ಎಂಎಸ್ ಧೋನಿ!

ತಂಡದ ಗೆಲುವಿನ ಬಗ್ಗೆ ಮಾತನಾಡಿದ ಧೋನಿ, ಸಿಎಸ್‌ಕೆ ಸದ್ಯ ಇರುವ ಸ್ಥಿತಿಯಿಂದ ಹೊರಬರಬೇಕಾದರೆ, ಮುಂಬರುವ ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ಘಟಕವು ಉತ್ತಮವಾಗಿ ಪ್ರದರ್ಶನ ನೀಡಬೇಕಿದ್ದು, ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು.
ಎಂಎಸ್ ಧೋನಿ
ಎಂಎಸ್ ಧೋನಿ
Updated on

ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಪಂದ್ಯದಲ್ಲಿ ನಾಯಕ ಎಂಎಸ್ ಧೋನಿ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ಜಯ ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ. 167 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ ಪರ ಧೋನಿ ಕೇವಲ 11 ಎಸೆತಗಳಲ್ಲಿ 26 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಈ ಕಾರಣದಿಂದಾಗಿ ಧೋನಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಈ ಪ್ರಶಸ್ತಿಯನ್ನು ತಮಗೆ ನೀಡಿದ್ದನ್ನು ಧೋನಿ ಒಪ್ಪದಿದ್ದರೂ, ಇದು ಐಪಿಎಲ್ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಮುರಿಯಲು ಧೋನಿ ಅವರಿಗೆ ಸಹಾಯ ಮಾಡಿತು. 43 ವರ್ಷದ ಧೋನಿ ಅವರು T20 ಲೀಗ್ ಇತಿಹಾಸದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು 11 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಪ್ರವೀಣ್ ತಾಂಬೆ ಅವರನ್ನು ಹಿಂದಿಕ್ಕಿ ಧೋನಿ ನಂ. 1 ಸ್ಥಾನವನ್ನು ಪಡೆದಿದ್ದಾರೆ. ಲೀಗ್ ಇತಿಹಾಸದಲ್ಲಿ 43ನೇ ವಯಸ್ಸಿನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.

ಸೋಮವಾರದವರೆಗೆ ತಾಂಬೆ ಮೊದಲ ಸ್ಥಾನದಲ್ಲಿದ್ದರು. ಐಪಿಎಲ್ 2014 ರಲ್ಲಿ ಕೆಕೆಆರ್ ವಿರುದ್ಧ 42 ವರ್ಷದ ತಾಂಬೆ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು. ರಾಜಸ್ಥಾನ ರಾಯಲ್ಸ್ (RR) ಪರ ಅವರು ಆಡಿದ್ದರು.

ತಂಡದ ಗೆಲುವಿನ ಬಗ್ಗೆ ಮಾತನಾಡಿದ ಧೋನಿ, ಸಿಎಸ್‌ಕೆ ಸದ್ಯ ಇರುವ ಸ್ಥಿತಿಯಿಂದ ಹೊರಬರಬೇಕಾದರೆ, ಮುಂಬರುವ ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ಘಟಕವು ಉತ್ತಮವಾಗಿ ಪ್ರದರ್ಶನ ನೀಡಬೇಕಿದ್ದು, ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು.

'ಬೌಲಿಂಗ್ ಘಟಕವಾಗಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಬ್ಯಾಟಿಂಗ್ ಘಟಕವಾಗಿ, ನಾವಿನ್ನು ಉತ್ತಮವಾಗಬೇಕಿದೆ. ಉತ್ತಮ ಆರಂಭ ಪಡೆದರೆ, ಇನಿಂಗ್ಸ್ ನಮ್ಮ ಕಡೆ ಸಾಗುತ್ತದೆ. ಶೇಕ್ ರಶೀದ್ ಈ ವರ್ಷ ಅವರು ವೇಗಿಗಳು ಮತ್ತು ಸ್ಪಿನ್ನರ್‌ಗಳ ವಿರುದ್ಧ ನೆಟ್ಸ್‌ನಲ್ಲಿ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದು ಕೇವಲ ಆರಂಭ. ಅವರು ನಿಜವಾದ ಹೊಡೆತಗಳೊಂದಿಗೆ ಪ್ರಾಬಲ್ಯ ಸಾಧಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ' ಎಂದರು.

ಎಂಎಸ್ ಧೋನಿ
IPL 2025: 'ಅವರು ನನಗೇಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿದರು'; LSG ವಿರುದ್ಧದ ಪಂದ್ಯದ ನಂತರ ಧೋನಿ ಅಚ್ಚರಿ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com