IPL 2025: Rohit Sharma ಅಪರೂಪದ ದಾಖಲೆ, ವಿಂಡೀಸ್ ದೈತ್ಯನ ರೆಕಾರ್ಡ್ ಛಿದ್ರ!

ಹೈದರಾಬಾದ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಕೇವಲ 46 ಎಸೆತಗಳಲ್ಲಿ 70ರನ್ ಚಚ್ಚಿದರು.
Rohit Sharma Scripts History
ರೋಹಿತ್ ಶರ್ಮಾ
Updated on

ಹೈದರಾಬಾದ್: ಹಾಲಿ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಮುಂಬೈ ಇಂಡಿಯನ್ಸ್ ತಂಡದ ಸ್ಫೋಟಕ ಬ್ಯಾಟರ್ ರೋಹಿತ್ ಶರ್ಮಾ ಅಪರೂಪದ ದಾಖಲೆ ಬರೆದಿದ್ದು, ವಿಂಡೀಸ್ ದೈತ್ಯ ಆಟಗಾರನ ದಾಖಲೆಯನ್ನೇ ಛಿದ್ರ ಮಾಡಿದ್ದಾರೆ.

ನಿನ್ನೆ ಹೈದರಾಬಾದ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಕೇವಲ 46 ಎಸೆತಗಳಲ್ಲಿ 70ರನ್ ಚಚ್ಚಿದರು.

ಸನ್ ರೈಸರ್ಸ್ ಹೈದರಾಬಾದ್ ನೀಡಿದ್ದ 144ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ಪರವಾಗಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಆರಂಭದಿಂದಲೇ ಎಸ್ಆರ್ ಎಚ್ ಬೌಲರ್ ಗಳ ಮೇಲೆ ಸವಾರಿ ಮಾಡಿದ ಹಿಟ್ ಮ್ಯಾನ್ ಕೇವಲ 46 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 70ರನ್ ಚಚ್ಚಿದರು. ರೋಹಿತ್ ಶರ್ಮಾಗೆ ಸೂರ್ಯ ಕುಮಾರ್ ಯಾದವ್ (ಅಜೇಯ 40) ಉತ್ತಮ ಸಾಥ್ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Rohit Sharma Scripts History
IPL 2025: 'ಸಿಕ್ಸ್ ಹೊಡೆದ್ರೆ ಸಹಿಸಲ್ಲ'; SRH ವಿರುದ್ಧದ ಪಂದ್ಯದ ವೇಳೆ ಜಸ್ಪ್ರೀತ್ ಬುಮ್ರಾ ನಡೆಗೆ ಟೀಕೆ

ಹಿಟ್ ಮ್ಯಾನ್ ದಾಖಲೆ

ಇನ್ನು ಈ ಪಂದ್ಯದಲ್ಲಿ ರೋಹಿತ್ ಶರ್ಮಾ 3 ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ರೋಹಿತ್ ಶರ್ಮಾ ಐಪಿಎಲ್ ನಲ್ಲಿ ಪ್ರಮುಖವಾಗಿ ಮುಂಬೈ ಇಂಡಿಯನ್ಸ್ ಪರ ತಮ್ಮ ಸಿಕ್ಸರ್ ಗಳ ಗಳಿಕೆಯನ್ನು 260ಕ್ಕೆ ಏರಿಸಿಕೊಂಡಿದ್ದು, ಆ ಮೂಲಕ ಮುಂಬೈ ಇಂಡಿಯನ್ಸ್ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ವಿಂಡೀಸ್ ದೈತ್ಯನ ದಾಖಲೆ ಛಿದ್ರ

ಈ ಹಿಂದೆ ಈ ದಾಖಲೆ ವಿಂಡೀಸ್ ದೈತ್ಯ ಆಟಗಾರ ಕೀರನ್ ಪೊಲಾರ್ಡ್ ಹೆಸರಿನಲ್ಲಿತ್ತು. ಪೊಲಾರ್ಡ್ ಒಟ್ಟು 258 ಸಿಕ್ಸರ್ ಗಳನ್ನು ಸಿಡಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದರು.

ಆದರೆ ರೋಹಿತ್ ಶರ್ಮಾ 3 ಸಿಕ್ಸರ್ ಸಿಡಿಸಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಉಳಿದಂಚೆ 127 ಸಿಕ್ಸರ್ ಸಿಡಿಸಿರುವ ಸೂರ್ಯ ಕುಮಾರ್ ಯಾದವ್ ಮೂರನೇ ಸ್ಥಾನದಲ್ಲಿದ್ದು, ಮುಂಬೈ ಆಡುತ್ತಿದ್ದಾಗ ಇಶಾನ್ ಕಿಶನ್ 106 ಸಿಕ್ಸರ್ ಸಿಡಿಸಿ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

highest number of sixes by any cricketer for Mumbai Indians

  • 260* (225 innings) - Rohit Sharma

  • 258 (193 innings) - Kieron Pollard

  • 127 (104 innings) - Suryakumar Yadav

  • 115 (103 innings) - Hardik Pandya

  • 106 (84 innings) - Ishan Kishan

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com