IPL 2025: KKR ವಿರುದ್ಧ PBKS ಪಂದ್ಯಕ್ಕೆ ಮಳೆ ಅಡ್ಡಿ; ಪಂದ್ಯ ರದ್ದು, ಕೋಲ್ಕತಾ ಪ್ಲೇಆಫ್‌ ಹಾದಿ ಮತ್ತಷ್ಟು ದುರ್ಗಮ!

ಉಭಯ ತಂಡಗಳೂ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕು ಎನ್ನುವ ಮಹಾತ್ವಾಕಾಂಕ್ಷೆಯಿಂದಲೇ ಕಣಕ್ಕಿಳಿದಿತ್ತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
KKR vs PBKS Match At Eden Gardens Called Off Due To Bad Weather
ಮಳೆಯಿಂದಾಗಿ ಪಂದ್ಯ ರದ್ದು
Updated on

ಕೋಲ್ಕತಾ: ಐಪಿಎಲ್ 2025 ಟೂರ್ನಿಯ ಇಂದಿನ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಉಭಯ ತಂಡಗಳಿಗೆ ಅಂಕ ಹಂಚಿಕೆ ಮಾಡಲಾಗಿದೆ.

ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಇಂದು ನಡೆದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಉಭಯ ತಂಡಗಳೂ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕು ಎನ್ನುವ ಮಹಾತ್ವಾಕಾಂಕ್ಷೆಯಿಂದಲೇ ಕಣಕ್ಕಿಳಿದಿತ್ತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಈ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಅದ್ಭುತ ಬ್ಯಾಟಿಂಗ್ ಮಾಡಿ ಆತಿಥೇಯ ನೈಟ್ ರೈಡರ್ಸ್ ಮುಂದೆ ದೊಡ್ಡ ಸ್ಕೋರ್ ಕಲೆಹಾಕಿತು.

KKR vs PBKS Match At Eden Gardens Called Off Due To Bad Weather
IPL 2025: 'SRH ತಂಡದಲ್ಲಿ ಆತ ಇರಬೇಕಿತ್ತು'; ಆಟಗಾರರ ಹರಾಜಿನಲ್ಲಿ ಕಳೆದುಕೊಂಡಿದ್ದಕ್ಕೆ ಡೇನಿಯಲ್ ವೆಟ್ಟೋರಿ ಬೇಸರ!

ನಿಗಧಿತ 20 ಓವರ್ ನಲ್ಲಿ ಪಂಜಾಬ್ ತಂಡ ಕೇವಲ 4 ವಿಕೆಟ್ ನಷ್ಟಕ್ಕೆ 201ರನ್ ಕಲೆಹಾಕಿತು. ಪಂಜಾಬ್ ಪರ ಪ್ರಿಯಾಂಶ್ ಆರ್ಯ 69 ರನ್ ಗಳಿಸಿದರೆ, ಪ್ರಬ್ ಸಿಮ್ರನ್ 83 ರನ್ ಗಳಿಸಿದರು. ನಾಯಕ ಶ್ರೇಯಸ್ ಅಯ್ಯರ್ ಅಜೇಯ 25 ರನ್ ಗಳಿಸಿ ತಂಡದ ಮೊತ್ತ 200 ದಾಟುವಂತೆ ನೋಡಿಕೊಂಡರು.

ಅಂತಿಮವಾಗಿ ಪಂಜಾಬ್ ತಂಡ ನಿಗಧಿತ 20 ಓವರ್ ನಲ್ಲಿ ಪಂಜಾಬ್ ತಂಡ 4 ವಿಕೆಟ್ ನಷ್ಟಕ್ಕೆ 201ರನ್ ಕಲೆಹಾಕಿತು. ಆ ಮೂಲಕ ಕೆಕೆಆರ್ ಗೆ ಗೆಲ್ಲಲು 205ರನ್ ಗುರಿ ನೀಡಿತು.

ಮೊದಲ ಓವರ್ ನಲ್ಲೇ ಮಳೆ

ಇನ್ನು ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಕೋಲ್ಕತಾ ತಂಡ ಮೊದಲ ಓವರ್ ನಲ್ಲಿ 7 ರನ್ ಗಳಿಸಿದ್ದ ವೇಳೆ ಜೋರಾಗಿ ಗಾಳಿ ಸಹಿತ ಮಳೆ ಸುರಿಯಲಾರಂಭಿಸಿತು. ಕೋಲ್ಕತ್ತಾದ ಇನ್ನಿಂಗ್ಸ್ ಆರಂಭವಾದ ತಕ್ಷಣ ಮಳೆ ಸುರಿಯಲಾರಂಭಿಸಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಕಾದ ನಂತರ, ಅಂಪೈರ್‌ಗಳು ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಈ ಸೀಸನ್‌ನಲ್ಲಿ ಪಂದ್ಯವೊಂದು ರದ್ದಾಗಿರುವುದು ಇದೇ ಮೊದಲು.

ಕೆಕೆಆರ್‌ ಪ್ಲೇಆಫ್‌ ಹಾದಿ ಮತ್ತಷ್ಟು ದುರ್ಗಮ

ಪಂದ್ಯ ಸ್ಥಗಿತ ಲಾಭವನ್ನು ಪಂಜಾಬ್ ಕಿಂಗ್ಸ್ ಪಡೆದುಕೊಂಡಿದ್ದು ತಂಡವು 11 ಅಂಕಗಳೊಂದಿಗೆ ಐದನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಏರಿತು. ಆದರೆ ಕೋಲ್ಕತ್ತಾ 7 ಅಂಕಗಳೊಂದಿಗೆ ಇನ್ನೂ 7 ನೇ ಸ್ಥಾನದಲ್ಲೇ ಉಳಿಯಿತು. ಪ್ಲೇಆಫ್ ರೇಸ್‌ನಲ್ಲಿ ಈಗಾಗಲೇ ಹಿಂದುಳಿದಿರುವ ಹಾಲಿ ಚಾಂಪಿಯನ್ ಕೆಕೆಆರ್, ಇನ್ನು ಮುಂದೆ ಯಾವುದೇ ಬೆಲೆ ತೆತ್ತಾದರೂ ಉಳಿದ ಎಲ್ಲಾ 5 ಪಂದ್ಯಗಳನ್ನು ಗೆಲ್ಲಲೇಬೇಕಾಗುತ್ತದೆ, ಆ ನಂತರವೇ ತಂಡವು ಪ್ಲೇಆಫ್ ತಲುಪಲು ಸಾಧ್ಯವಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com