IPL 2025: ಬಾಕಿ ಚುಕ್ತಾ...; KL Rahul ಎದುರಲ್ಲೇ 'ಇದು ನನ್ನ ಗ್ರೌಂಡ್' ಮಿಮಿಕ್ ಮಾಡಿದ Virat Kohli; video

ಈ ಪಂದ್ಯದಲ್ಲಿ ಆರ್ ಸಿಬಿ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಮಹತ್ತರ ಪಾತ್ರವಹಿಸಿದರು. ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 4 ಬೌಂಡರಿ ಸಹಿತ 51 ರನ್ ಗಳಿಸಿದರು.
Virat Kohli takes revenge with 'This is my ground' celebration in front of KL Rahul
ಕೆಎಲ್ ರಾಹುಲ್ ಗೆ ಮೈದಾನದಲ್ಲೇ ಛೇಡಿಸಿದ ವಿರಾಟ್ ಕೊಹ್ಲಿ
Updated on

ನವದೆಹಲಿ: ವಿರಾಟ್ ಕೊಹ್ಲಿ ಯಾರು ಏನೇ ಕೊಟ್ಟರೂ ಅದನ್ನು ತಿರುಗಿಸಿ ಕೊಡುವುದರಲ್ಲಿ ನಿಸ್ಸೀಮರು.. ಇಂದೂ ಸಹ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಗೆದ್ದು ಕನ್ನಡಿಗ ಕೆಎಲ್ ರಾಹುಲ್ ಬಾಕಿ ಚುಕ್ತಾ ಮಾಡಿದ್ದಾರೆ.

ಹೌದು.. ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 163ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ಕೃನಾಲ್ ಪಾಂಡ್ಯಾ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕಗಳ ನೆರವಿನಿಂದ ಜಯಭೇರಿ ಭಾರಿಸಿತು. ಆರ್ ಸಿಬಿ 18.3 ಓವರ್ ನಲ್ಲಿ 165 ರನ್ ಗಳಿಸಿ ಇನ್ನೂ 9 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿತು.

ಈ ಪಂದ್ಯದಲ್ಲಿ ಆರ್ ಸಿಬಿ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಮಹತ್ತರ ಪಾತ್ರವಹಿಸಿದರು. ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 4 ಬೌಂಡರಿ ಸಹಿತ 51 ರನ್ ಗಳಿಸಿದರು.

ಆದರೆ ಗೆಲುವಿನ ಅಂತಿಮ ಹಂತದಲ್ಲಿ ಎಡವಿದ ಕೊಹ್ಲಿ ಚಮೀರಾ ಬೌಲಿಂಗ್ ನಲ್ಲಿ ಭರ್ಜರಿ ಹೊಡೆತಕ್ಕೆ ಕೈಹಾಕಿ ಸ್ಚಾರ್ಕ್ ಗೆ ಕ್ಯಾಚ್ ನೀಡಿ ಹೊರನಡೆದರು. ಕೃನಾಲ್ ಪಾಂಡ್ಯಾ ಮತ್ತು ಟಿಮ್ ಡೇವಿಡ್ ಇನ್ನೂ 9 ಎಸೆತ ಬಾಕಿ ಇರುವಂತೆಯೇ ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿದರು.

Virat Kohli takes revenge with 'This is my ground' celebration in front of KL Rahul
IPL 2025: DC ವಿರುದ್ಧ ಕೊನೆಗೂ ಸೇಡು ತೀರಿಸಿಕೊಂಡ RCB; 6 ವಿಕೆಟ್ ಭರ್ಜರಿ ಜಯ

KL Rahul ಬಾಕಿ ಚುಕ್ತಾ ಮಾಡಿದ ವಿರಾಟ್ ಕೊಹ್ಲಿ

ಇನ್ನು ಇದೇ ಪಂದ್ಯದಲ್ಲಿ ಆರ್ ಸಿಬಿ ರನ್ ಮೆಷಿನ್ ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಎಲ್ ರಾಹುಲ್ ರ ಬಾಕಿಯೊಂದನ್ನು ಚುಕ್ತಾ ಮಾಡಿದ್ದಾರೆ. ಈ ಹಿಂದೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಕೆಎಲ್ ರಾಹುಲ್ 'ಇದು ನನ್ನ ಗ್ರೌಂಡ್ ಸಂಭ್ರಮಾಚರಣೆ' ಮಾಡಿದ್ದರು.

ಅಂದು ಮೈದಾನದಲ್ಲಿ ಗೆಲುವಿನ ಶಾಟ್ ಭಾರಿಸುತ್ತಿದ್ದಂತೆಯೇ ಮೈದಾನದಲ್ಲಿ ಕಾಂತಾರಾ ಸಿನಿಮಾ ಶೈಲಿಯಲ್ಲಿ ಬ್ಯಾಟ್ ನಿಂದ ವೃತ್ತ ಸುತ್ತಿ ಬ್ಯಾಟ್ ಕುಕ್ಕಿ ಇದು ನನ್ನ ಗ್ರೌಂಡ್ ಎಂದು ಆಕ್ರೋಶ ಭರಿತರಾಗಿ ಹೇಳಿದ್ದರು.

ಅಂದೇ ಆರ್ ಸಿಬಿ ಅಭಿಮಾನಿಗಳು ಕೊಹ್ಲಿ ದೆಹಲಿಯಲ್ಲಿ ಇದಕ್ಕೆ ತಿರುಗೇಟು ನೀಡುತ್ತಾರೆ ಎಂದು ಸವಾಲೆಸೆದಿದ್ದರು. ಇದೀಗ ಆ ಸವಾಲು ನಿಜವಾಗಿದ್ದು, ಇಂದಿನ ಪಂದ್ಯ ಮುಕ್ತಾಯದ ಬಳಿಕ ಕೊಹ್ಲಿ ಮೈದಾನಕ್ಕೆ ಬಂದು ಮೈದಾನದಲ್ಲಿದ್ದ ಕೆಎಲ್ ರಾಹುಲ್ ಬಳಿ ಹೋಗಿ ಖಾಲಿ ಕೈಯಿಂದಲೇ ಅವರ ಮುಂದೆಯೇ ವೃತ್ತ ಸುತ್ತಿ ಕೆಎಲ್ ರಾಹುಲ್ ರನ್ನು ಇದು ನನ್ನ ಮೈದಾನ ಎಂದು ಛೇಡಿಸಿದ್ದಾರೆ.

ಈ ವೇಳೆ ಅಲ್ಲಿಯೇ ಅಕ್ಕಪಕ್ಕದಲ್ಲಿದ್ದ ಸಹ ಆಟಗಾರರು ಬಿದ್ದು ಬಿದ್ದು ನಕ್ಕಿದ್ದಾರೆ. ಬಳಿಕ ಕೊಹ್ಲಿ ರಾಹುಲ್ ರನ್ನು ಅಪ್ಪಿ ನಗೆ ಬೀರಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com