
ಲಂಡನ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ (Shubman Gill) ಕೇವಲ 46 ರನ್ ಅಂತರದಲ್ಲಿ ಡಾನ್ ಬ್ರಾಡ್ಮನ್ ದಾಖಲೆ ಮಿಸ್ ಮಾಡಿಕೊಂಡರೂ ಇತಿಹಾಸ ಬರೆದಿದ್ದಾರೆ.
ಹೌದು.. ಭಾರತದ ನೂತನ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6,000 ರನ್‌ಗಳ ಮೈಲಿಗಲ್ಲು ದಾಟುವ ಮೂಲಕ ತಮ್ಮ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. 25 ವರ್ಷದ ಆಟಗಾರ ದಿ ಓವಲ್‌ನಲ್ಲಿ ನಡೆದ 2025 ರ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಈ ಮೈಲಿಗಲ್ಲು ಸಾಧಿಸಿದರು.
ಭಾರತದ 2Londonನೇ ಇನ್ನಿಂಗ್ಸ್ ನಲ್ಲಿ ಗಿಲ್ 9 ಎಸೆತಗಳಲ್ಲಿ 11 ರನ್ ಗಳಿಸಿ ಅಟ್ಕಿನ್ ಸನ್ ಬೌಲಿಂಗ್ ನಲ್ಲಿ ಔಟಾದರು. ಆದರೆ ಈ 11 ರನ್ ಗಳೊಂದಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ರನ್ ಗಳಿಕೆಯನ್ನು ಗಿಲ್ 6000ಕ್ಕೆ ಏರಿಕೆ ಮಾಡಿಕೊಂಡರು.
ನಾಯಕನಾಗಿ ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಾದ್ಯಂತ ಅದ್ಭುತ ಫಾರ್ಮ್‌ನಲ್ಲಿರುವ ಶುಭ್ ಮನ್ ಗಿಲ್ ತಮ್ಮ ಮ್ಯಾರಥಾನ್ ಬ್ಯಾಟಿಂಗ್ ಮೂಲಕ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಎಡ್ಜ್‌ಬಾಸ್ಟನ್‌ನಲ್ಲಿ ಮ್ಯಾರಥಾನ್ 269 ರನ್ ಸೇರಿದಂತೆ ಗಿಲ್ ಈ ಟೆಸ್ಟ್ ಸರಣಿಯಲ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದಾರೆ. ಅವರ ಅದ್ಭುತ ರನ್ ಗಳಿಕೆಯು ಈಗ ಎಂಟು ಇನ್ನಿಂಗ್ಸ್‌ಗಳಲ್ಲಿ 90.25 ರ ಸರಾಸರಿಯಲ್ಲಿ 722 ರನ್‌ಗಳನ್ನು ದಾಟಿದೆ.
ಎಲೈಟ್ ಗ್ರೂಪ್ ಸೇರ್ಪಡೆ
ಇದೇ ವೇಳೆ ಸರಣಿಯ ನಾಲ್ಕನೇ ಶತಕವನ್ನು ಗಳಿಸುವ ಮೂಲಕ, ಗಿಲ್ ಕ್ರಿಕೆಟ್ ಐಕಾನ್‌ಗಳಾದ ಡಾನ್ ಬ್ರಾಡ್ಮನ್ ಮತ್ತು ಸುನಿಲ್ ಗವಾಸ್ಕರ್ ಅವರೊಂದಿಗೆ ಈ ಅಪರೂಪದ ಸಾಧನೆ ಮಾಡಿದ ಕೆಲವೇ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರು ಗವಾಸ್ಕರ್ ಅವರ ದೀರ್ಘಕಾಲೀನ ಟೆಸ್ಟ್ ಸರಣಿಯಲ್ಲಿ 732 ರನ್‌ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಲ್ಲದೆ ಇದೀಗ 754 ರನ್ ರನ್ ಗಳೊಂದಿಗೆ ಭಾರತದ ಪರ ಟೆಸ್ಟ್ ಸರಣಿಯೊಂದರಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತ ತಂಡದ ಮೊದಲ ಮತ್ತು ಜಗತ್ತಿನ 2ನೇ ನಾಯಕ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಈ ಪಟ್ಟಿಯಲ್ಲಿ 1936-37ರಲ್ಲಿ ಇಂಗ್ಲೆಂಡ್ ವಿರುದ್ದ 810 ರನ್ ಗಳಿಸಿದ್ದ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅಗ್ರಸ್ಥಾನದಲ್ಲಿದ್ದಾರೆ. 754 ರನ್ ಗಳೊಂದಿಗೆ ಗಿಲ್ 2ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಗ್ರಹಂಗೂಚ್ 752 ರನ್ ಗಳೊಂದಿಗೆ 3 ಮತ್ತು ಭಾರತದ ಸುನಿಲ್ ಗವಾಸ್ಕರ್ 732 ರನ್ ಗಳೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಭಾರತದ ರಾಹುಲ್ ದ್ರಾವಿಡ್ ಕೂಡ 732 ರನ್ ಗಳೊಂದಿಗೆ ಈ ಪಟ್ಟಿಯಲ್ಲಿದ್ದಾರೆ.
Most runs as a captain in a Test series
810 - Don Bradman vs ENG, 1936/37
754 - Shubman Gill vs ENG, 2025*
752 - Graham Gooch vs IND, 1990
732 - Sunil Gavaskar vs WI, 1978
732 - David Gowar vs ENG, 1985
ಟೆಸ್ಟ್ ಸರಣಿಯಲ್ಲಿ ಭಾರತದ ಪರ ಅತೀ ಹೆಚ್ಚು ರನ್
ಇನ್ನು ಭಾರತದ ಪರ ಟೆಸ್ಟ್ ಸರಣಿಯೊಂದರಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲೂ ಗಿಲ್ ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 1971ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 774 ರನ್ ಕಲೆಹಾಕಿದ್ದ ಗವಾಸ್ಕರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, 754 ರನ್ ಗಳೊಂದಿಗೆ ಗಿಲ್ 2ನೇ ಸ್ಥಾನಕ್ಕೇರಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ತವರಿನ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಜೈಸ್ವಾಲ್ 712 ರನ್ ಗಳೊಂದಿಗೆ 4ನೇ ಸ್ಥಾನದಲ್ಲಿದ್ದು, 2014-15ರಲ್ಲಿ ಆಸ್ಟ್ರೇಲಿಯಾ ವಿರುದ್ಧ 692 ರನ್ ಕಲೆಹಾಕಿದ್ದ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
Most runs in a Test series for India
774 - Sunil Gavaskar vs WI, 1971 (Away)
754 - Shubman Gill vs ENG, 2025 (Away)*
732 - Sunil Gavaskar vs WI, 1978/79 (Home)
712 - Yashasvi Jaiswal vs ENG, 2024 (Home)
692 - Virat Kohli vs AUS, 2014/15 (Away)
Advertisement