AkashDeep-Ben Ducket: 'ನಾನಾಗಿದ್ರೆ ಅವನ ಮುಖಕ್ಕೆ ಪಂಚ್‌ ಮಾಡುತ್ತಿದ್ದೆ'; Ricky Ponting ಕಿಡಿ!

ಪಂದ್ಯದ ಎರಡನೇ ದಿನ ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಬೆನ್ ಡಕೆಟ್ (Ben Duckett) ಮತ್ತು ಆಕಾಶ್ ದೀಪ್ (Akash Deep) ನಡುವೆ ನಡೆದ ಘಟನೆಗೆ ಸಂಬಂಧಿಸಿದಂತೆ ರಿಕ್ಕಿ ಪಾಂಟಿಂಗ್ ಆಕಾಶ್ ದೀಪ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Akash Deep Riles Up England After Ben Duckett Send-Off
ಬೆನ್ ಡಕೆಟ್ ಮೇಲೆ ಕೈಹಾಕಿ ಛೇಡಿಸಿದ ಆಕಾಶ್ ದೀಪ್
Updated on

ಲಂಡನ್: ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಅಂತಿಮ ಘಟದತ್ತ ಸಾಗಿದ್ದು, ಆಂಗ್ಲರ ವಿರುದ್ಧ ಭಾರತ ತಂಡ ಮೇಲುಗೈ ಸಾಧಿಸಿದೆ. ಈ ನಡುವೆ ಭಾರತದ ಆಕಾಶ್ ದೀಪ್ ಸಿಂಗ್ ವಿರುದ್ದ ಆಸಿಸ್ ಮಾಜಿ ನಾಯಕ ರಿಕ್ಕಿಪಾಂಟಿಂಗ್ ತೀವ್ರ ಕಿಡಿಕಾರಿದ್ದಾರೆ.

ಪಂದ್ಯದ ಎರಡನೇ ದಿನ ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಬೆನ್ ಡಕೆಟ್ (Ben Duckett) ಮತ್ತು ಆಕಾಶ್ ದೀಪ್ (Akash Deep) ನಡುವೆ ನಡೆದ ಘಟನೆಗೆ ಸಂಬಂಧಿಸಿದಂತೆ ರಿಕ್ಕಿ ಪಾಂಟಿಂಗ್ ಆಕಾಶ್ ದೀಪ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಐದನೇ ಹಾಗೂ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಬೆನ್‌ ಡಕೆಟ್‌ ಅವರ ಹೆಗಲ ಮೇಲೆ ಕೈ ಹಾಕಿದ ವೇಗಿ ಆಕಾಶ್‌ ದೀಪ್‌ ವಿರುದ್ದ ರಿಕಿ ಪಾಂಟಿಂಗ್‌ ಕಿಡಿ ಕಾರಿದ್ದಾರೆ. ನಾನು ಆ ಸ್ಥಳದಲ್ಲಿ ಇದ್ದಿದ್ದರೆ, ಆಕಾಶ್‌ ದೀಪ್‌ ಮುಖಕ್ಕೆ ಪಂಚ್‌ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ಈ ಪಂದ್ಯಕ್ಕೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಸ್ಕೈ ಸ್ಪೋರ್ಟ್ಸ್‌ ನಿರೂಪಕ ಇಯಾನ್‌ ವಾರ್ಡ್‌ ಅವರು ಈ ಘಟನೆ ಬಗ್ಗೆ ರಿಕಿ ಪಾಂಟಿಂಗ್‌ ಅವರನ್ನು ಕೇಳಿದರು. ಈ ವೇಳೆ ಉತ್ತರಿಸಿದ ಪಾಂಟಿಂಗ್, "ಇದರಿಂದ ಕೋಪಗೊಳ್ಳುವ ಕೆಲವು ಬ್ಯಾಟ್ಸ್‌ಮನ್‌ಗಳ ಬಗ್ಗೆ ನನಗೆ ನೆನಪಿದೆ ಎಂದರು.

ಇದಕ್ಕೆ ಉತ್ತರಿಸಿದ ಇಯಾನ್ ವಾರ್ಡ್, ಇದರ ಬಗ್ಗೆ ನಾನು ನಿಮ್ಮ ಅಭಿಪ್ರಾಯವನ್ನು ಎದುರು ನೋಡುತ್ತಿದ್ದೇನೆ. ಈ ಸಂದರ್ಭದಲ್ಲಿ ಪಾಂಟಿಂಗ್ ಸರಿಯಾಗಿ ಪಂಚ್‌ ಕೊಡುತ್ತಿದ್ದರು ಅಲ್ಲವೇ?" ಎಂಬ ಇಯಾನ್‌ ವಾರ್ಡ್‌ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಂಟಿಂಗ್, "ಬಹುಶಃ ಹೌದು, ಬಹುಶಃ. ಒಂದು ವೇಳೆ ಬೆನ್‌ ಡಕೆಟ್‌ ಅವರ ಜಾಗದಲ್ಲಿ ನಾನು ಇದ್ದಿದ್ದರೆ ಆಕಾಶ್‌ ದೀಪ್‌ ಮುಖಕ್ಕೆ ಪಂಚ್‌ ಮಾಡುತ್ತಿದ್ದೆ" ಎಂದು ತಿಳಿಸಿದ್ದಾರೆ.

Akash Deep Riles Up England After Ben Duckett Send-Off
India vs England: 'ಯಾಕಪ್ಪ ತಲೆ ತಗ್ಗಿಸಿದ್ದೀಯಾ..'; ಪೆವಿಲಿಯನ್‌ಗೆ ಮರಳುತ್ತಿದ್ದ Ben Duckett ಭುಜದ ಮೇಲೆ ಕೈಹಾಕಿ ಛೇಡಿಸಿದ Akash Deep!

ಬೆನ್‌ ಡಕೆಟ್‌ಗೆ ರಿಕಿ ಪಾಂಟಿಂಗ್‌ ಮೆಚ್ಚುಗೆ

ಈ ಸಂದರ್ಭದಲ್ಲಿ ತಾಳ್ಮೆ ಹಾಗೂ ಶಾಂತವಾಗಿ ವರ್ತಿಸಿದ ಬೆನ್‌ ಡಕೆಟ್‌ ಅವರನ್ನು ರಿಕಿ ಪಾಂಟಿಂಗ್‌ ಗುಣಗಾನ ಮಾಡಿದ್ದಾರೆ. "ಆದರೂ ನಾನು ಹೇಳುತ್ತಿರುವುದೇನೆಂದರೆ, ನಾನು ಅದನ್ನು ನೋಡಿದಾಗ, ಅವರು ಸಹಪಾಠಿಗಳಿರಬೇಕು ಅಥವಾ ಎಲ್ಲೋ ಅಥವಾ ಒಟ್ಟಿಗೆ ಪರಸ್ಪರ ವಿರುದ್ಧವಾಗಿ ಆಡಿರಬೇಕು ಎಂದು ನಾನು ಭಾವಿಸಿದೆ. ನನಗೂ ಅಂತಹದ್ದೇನಾದರೂ ಬೇಕು.

ಆದರೆ, ನೀವು ಇದನ್ನು ಗಲ್ಲಿ ಕ್ರಿಕೆಟ್‌ನಲ್ಲಿ ನೋಡಬಹುದು, ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯದಲ್ಲಿ ಅಲ್ಲ. ಬೆನ್‌ ಡಕೆಟ್‌ ಆಡಿದ ಕ್ರಿಕೆಟ್‌ ಬಗ್ಗೆ ನಾನು ಮೆಚ್ಚಿಕೊಳ್ಳುತ್ತೇನೆ. ಆಕಾಶ್‌ ದೀಪ್‌ ಘಟನೆಗೆ ಡಕೆಟ್‌ ಪ್ರತಿಕ್ರಿಯಿಸಿದ ರೀತಿ ನನಗೆ ಇಷ್ಟವಾಯಿತು," ಎಂದು ಪಾಯಿಂಟ್‌ ಹೇಳಿದ್ದಾರೆ.

ಆಗಿದ್ದೇನು?

ಪಂದ್ಯದ ಎರಡನೇ ದಿನ ಇಂಗ್ಲೆಂಡ್‌ ತಂಡದ ಪ್ರಥಮ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಆಕಾಶ್‌ ದೀಪ್‌ ಅವರ ಎಸೆತದಲ್ಲಿ ಬೆನ್‌ ಡಕೆಟ್‌ ಔಟ್‌ ಮಾಡಿದ್ದರು. ಈ ವೇಳೆ ಮೌನವಾಗಿ ಪೆವಿಲಿಯನ್‌ಗೆ ತೆರಳುತ್ತಿದ್ದ ಬೆನ್‌ ಡಕೆಟ್‌ ಅವರನ್ನು ಆಕಾಶ ದೀಪ್‌ ಕಿಚಾಯಿಸಿದರು. ಅವರು ಬೆನ್‌ ಡಕೆಟ್‌ ಬಳಿ ತೆರಳಿ ನಗು ನಗುತ್ತಾ ಇಂಗ್ಲೆಂಡ್‌ ಆರಂಭಿಕನ ಭುಜದ ಮೇಲೆ ಕೈ ಹಾಕಿ ಏನೋ ಹೇಳಿದ್ದರು.

ಈ ಘಟನೆ ವಿವಾದವನ್ನು ಹುಟ್ಟು ಹಾಕಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ. ಅಂದ ಹಾಗೆ ಬೆನ್‌ ಡಕೆಟ್‌ ಅವರು 38 ಎಸೆತಗಳಲ್ಲಿ 43 ರನ್‌ಗಳನ್ನು ಕಲೆ ಹಾಕಿದ್ದರು. ಈ ಸರಣಿಯಲ್ಲಿ ಆಕಾಶ್ ದೀಪ್‌, ಬೆನ್‌ ಡಕೆಟ್‌ ಅವರನ್ನು ನಾಲ್ಕನೇ ಬಾರಿ ಔಟ್‌ ಮಾಡಿದ್ದರು.

ಡಕೆಟ್ ಭುಜದ ಮೇಲೆ ಕೈಹಾಕಿದ ಆಕಾಶ್ ದೀಪ್

ಇನ್ನು ಈ ವೇಳೆ ಪೆವಿಲಿಯನ್ ನತ್ತ ಹೋಗುತ್ತಿದ್ದ ಡಕೆಟ್ ರ ಬಲಿ ಹೋದ ಆಕಾಶ್ ದೀಪ್ ಅವರ ಹೆಗಲ ಮೇಲೆ ಕೈ ಹಾಕಿ 'ಯಾಕಪ್ಪಾ ತಲೆ ತಗ್ಗಿಸಿದ್ದೀಯಾ' ಎಂಬರ್ಥದಲ್ಲಿ ನೋಡಿದರು. ಆ ಮೂಲಕ ಈ ವಿಕೆಟ್ ನಲ್ಲಿ ನನ್ನ ಔಟ್ ಮಾಡಲು ಸಾಧ್ಯವಿಲ್ಲ ಎಂದು ಗರ್ವದಿಂದ ಹೇಳಿದ್ದ ಡಕೆಟ್ ರ ಗರ್ವವನ್ನು ಆಕಾಶ್ ದೀಪ್ ಮುರಿದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com