
ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 2025ರ ಏಷ್ಯಾ ಕಪ್‌ಗೂ ಮುನ್ನ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗುವ 8 ರಾಷ್ಟ್ರಗಳ ಟೂರ್ನಮೆಂಟ್‌ಗೆ ಮುನ್ನ ಅನೇಕ ಭಾರತೀಯ ಆಟಗಾರರು ಈಗಾಗಲೇ NCA ನಲ್ಲಿ ಚೆಕ್ ಇನ್ ಆಗಿದ್ದಾರೆ. ಭಾರತದ ವೈಟ್-ಬಾಲ್ ಸೆಟಪ್‌ನ ಅವಿಭಾಜ್ಯ ಅಂಗವಾಗಿರುವ ಪಾಂಡ್ಯ, IPL 2025ರ ಅಂತ್ಯದ ನಂತರ ವಿರಾಮದಲ್ಲಿದ್ದಾರೆ. ಆದರೆ, ಈಗಾಗಲೇ ಒಂದು ತಿಂಗಳ ಹಿಂದೆಯೇ ತರಬೇತಿಯನ್ನು ಪ್ರಾರಂಭಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಆಗಸ್ಟ್ 11 ಮತ್ತು 12 ರಂದು ಪಾಂಡ್ಯ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಆಲ್‌ರೌಂಡರ್ ಭಾನುವಾರ ಇನ್‌ಸ್ಟಾಗ್ರಾಮ್‌ನಲ್ಲಿ 'ಎನ್‌ಸಿಎಗೆ ಒಂದು ಸಣ್ಣ ಪ್ರವಾಸ' ಎಂಬ ಶೀರ್ಷಿಕೆಯೊಂದಿಗೆ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ.
ಟಿ20ಐಗೆ ಮತ್ತೆ ಶ್ರೇಯಸ್ ಅಯ್ಯರ್
ಈಮಧ್ಯೆ, ಶ್ರೇಯಸ್ ಅಯ್ಯರ್ ಜುಲೈ 27-29 ರ ನಡುವೆ ತಮ್ಮ ಫಿಟ್‌ನೆಸ್ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿದೆ. ಕೊನೆಯ ಬಾರಿಗೆ ಟಿ20ಐ ಆಡಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್, ಏಷ್ಯಾ ಕಪ್ 2025ಕ್ಕೆ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಆಯ್ಕೆದಾರರು ತಮ್ಮ ಕ್ಲಾಸ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಅನುಭವದ ಅಗತ್ಯವಿದೆ ಎಂದು ಭಾವಿಸಿದ್ದಾರೆ. ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದರೂ, ಅಯ್ಯರ್ ದೇಶೀಯ ಪಂದ್ಯಾವಳಿಗಳು ಮತ್ತು ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ಆಯ್ಕೆದಾರರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೂರ್ಯಕುಮಾರ್ ಚೇತರಿಕೆಗೆ ಸಮಯ
ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ ಒಂದು ವಾರ ಬೇಕಾಗುತ್ತದೆ ಎಂದು ವರದಿ ಹೇಳುತ್ತದೆ. ಜೂನ್ ಆರಂಭದಲ್ಲಿ ಕ್ರೀಡಾ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಕಳೆದ ವಾರ ಬೆಂಗಳೂರಿನಲ್ಲಿರುವ ಎನ್‌ಸಿಎಗೆ ಭೇಟಿ ನೀಡಿ ಪುನರಾಗಮನಕ್ಕೆ ಸಿದ್ಧತೆ ಆರಂಭಿಸಿದರು. ಆಯ್ಕೆದಾರರು ಶೀಘ್ರದಲ್ಲೇ ಏಷ್ಯಾ ಕಪ್ 2025 ಗಾಗಿ ಪ್ರಾಥಮಿಕ ತಂಡವನ್ನು ಹೆಸರಿಸುವ ನಿರೀಕ್ಷೆಯಿದೆ.
'ಭೌತಚಿಕಿತ್ಸಕರು ಮತ್ತು ವೈದ್ಯಕೀಯ ತಂಡದ ಕಣ್ಗಾವಲಿನಲ್ಲಿ ಪೂರ್ಣ ಫಿಟ್ನೆಸ್ ಮರಳಿ ಪಡೆಯಲು ಸೂರ್ಯ ಎನ್‌ಸಿಎಯಲ್ಲಿ ಇನ್ನೊಂದು ವಾರ ಕಳೆಯುವ ನಿರೀಕ್ಷೆಯಿದೆ' ಎಂದು ವರದಿ ತಿಳಿಸಿದೆ.
Advertisement