ನಿಮ್ಮ ಮರ್ಯಾದೆ ಉಳಿಯಬೇಕಾ?: ಕೊಹ್ಲಿಯಂತೆ ನೀವೂ 'ಎದೆಗಾರಿಕೆ' ತೋರಿಸಿ; Babar, Rizwan ಗೆ ಮಾಜಿ ಕ್ರಿಕೆಟಿಗ ಸವಾಲು!

ಸ್ಫೋಟಕ ಕ್ರಿಕೆಟಿಗರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಏಷ್ಯಾ ಕಪ್ ತಂಡದಿಂದ ಹೊರಗಿಟ್ಟ ನಂತರ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಕೋಲಾಹಲ ಉಂಟಾಗಿದೆ.
Babar Azam-Virat Kohli-Mohammad Rizwan
ಬಾಬರ್ ಅಜಮ್-ವಿರಾಟ್ ಕೊಹ್ಲಿ-ಮೊಹಮ್ಮದ್ ರಿಜ್ವಾನ್
Updated on

ಸ್ಫೋಟಕ ಕ್ರಿಕೆಟಿಗರಾದ ಬಾಬರ್ ಅಜಮ್ (Babar Azam) ಮತ್ತು ಮೊಹಮ್ಮದ್ ರಿಜ್ವಾನ್ (Mohammad Rizwan) ಅವರನ್ನು ಏಷ್ಯಾ ಕಪ್ ತಂಡದಿಂದ ಹೊರಗಿಟ್ಟ ನಂತರ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಕೋಲಾಹಲ ಉಂಟಾಗಿದೆ. ಅಭಿಮಾನಿಗಳು ಮತ್ತು ತಜ್ಞರ ಅಭಿಪ್ರಾಯಗಳು ಭಿನ್ನವಾಗಿವೆ. ಕೆಲವರು ಅವರನ್ನು ತಂಡಕ್ಕೆ ಸೇರಿಸಿಕೊಳ್ಳದಿರುವುದನ್ನು ಬೆಂಬಲಿಸುತ್ತಿದ್ದರೆ, ಕೆಲವರು ಭಿನ್ನಾಭಿಪ್ರಾಯ ಹೊಂದಿದ್ದಾರೆ.

ಏತನ್ಮಧ್ಯೆ, ಪಾಕಿಸ್ತಾನದ ಮಾಜಿ ವೇಗಿ ತನ್ವೀರ್ ಅಹ್ಮದ್ ಅವರು, ಬಾಬರ್ ಮತ್ತು ರಿಜ್ವಾನ್ ಅವರನ್ನು ನಿವೃತ್ತಿ ಹೊಂದುವಂತೆ ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿಯ (Virat Kohli)ಉದಾಹರಣೆಯನ್ನು ನೀಡುವ ಮೂಲಕ ಅವರು ಇಬ್ಬರ ಸ್ವಾಭಿಮಾನಕ್ಕೂ ಸವಾಲು ಹಾಕಿದ್ದಾರೆ. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಅಗೌರವಿಸಲಾಗಿದೆ ಎಂದು ಭಾವಿಸಿದರೆ, ಅವರು ಕೊಹ್ಲಿಯಂತೆ ನಿವೃತ್ತಿ ಹೊಂದಬೇಕು ಎಂದು ತನ್ವೀರ್ ಹೇಳಿದರು. 'ಗೌರವ' ಮುಖ್ಯವಾಗಿದ್ದರೆ, ಇಬ್ಬರೂ ವಿರಾಟ್ ಕೊಹ್ಲಿಯ ಮಾರ್ಗವನ್ನು ಆರಿಸಿಕೊಳ್ಳಬೇಕು ಎಂದು ತನ್ವೀರ್ ಅಹ್ಮದ್ ಹೇಳಿದರು.

'ಬಾಬರ್ ಅಜಮ್ ಮತ್ತು ರಿಜ್ವಾನ್ ಅವರಿಗೆ ನನ್ನ ವಿನಂತಿ ಏನೆಂದರೆ, ನಿಮಗೆ ಗೌರವವಿಲ್ಲ ಎಂದು ನೀವು ಭಾವಿಸಿದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಿರಿ.' ವಿರಾಟ್ ಕೊಹ್ಲಿಯ ಉದಾಹರಣೆಗಳು ನಮ್ಮ ಮುಂದೆ ಇವೆ. ಗೌರವ ನಮ್ಮ ಕೈಯಲ್ಲಿದೆ. ತನ್ವೀರ್ ಅಹ್ಮದ್, ವಿರಾಟ್ ಕೊಹ್ಲಿಯ ಉದಾಹರಣೆಯನ್ನು ನೀಡಿರಬಹುದು. ಆದರೆ ಭಾರತೀಯ ಬ್ಯಾಟ್ಸ್‌ಮನ್ 'ಗೌರವ' ಸಿಗದ ಕಾರಣ ನಿವೃತ್ತಿ ಹೊಂದಲಿಲ್ಲ. ಬಿಸಿಸಿಐ (BCCI) ಒತ್ತಡದಿಂದಾಗಿ ಅವರು ನಿವೃತ್ತರಾದರು ಎಂಬ ಊಹಾಪೋಹಗಳಿದ್ದವು. ನಿವೃತ್ತಿಯ ನಂತರ, ಕೊಹ್ಲಿ ಟೆಸ್ಟ್ ಕ್ರಿಕೆಟ್ ತುಂಬಾ ಕಷ್ಟಕರವಾದ ಸ್ವರೂಪವಾಗಿದೆ. ತಮ್ಮ ದೇಹವು ಅದಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದೆ ಎಂದು ಅವರು ಕಾರಣ ನೀಡಿದರು.

Babar Azam-Virat Kohli-Mohammad Rizwan
Asia Cup: ತಂಡದಿಂದ ಪಾಕ್‌ನ ಸ್ಟಾರ್ Babar Azam ಕೈಬಿಟ್ಟಿದ್ದು ಏಕೆ? ಪತ್ರಿಕಾಗೋಷ್ಠಿಯಲ್ಲಿ ಮಾನ ಕಳೆದ ಕೋಚ್!

ಬಾಬರ್ ಅಜಮ್ ಬಗ್ಗೆ ಹೇಳುವುದಾದರೆ, ವಿಶ್ವದಾದ್ಯಂತದ ಬ್ಯಾಟ್ಸ್‌ಮನ್‌ಗಳಲ್ಲಿ ಟಿ20 ಶ್ರೇಯಾಂಕದಲ್ಲಿ ಬಾಬರ್ ಕಳೆದ ವರ್ಷದವರೆಗೂ ಅಗ್ರಸ್ಥಾನದಲ್ಲಿದ್ದರು. ಅವರ ಬ್ಯಾಟ್ ಈ ಸ್ವರೂಪದಲ್ಲಿ ಬಹಳಷ್ಟು ರನ್ ಗಳಿಸಿದ್ದು ಅನೇಕ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಅವರು ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ನಾಯಕರಾಗಿದ್ದರು. ರಿಜ್ವಾನ್ ಕೂಡ ಕೆಲವು ಸಮಯದಿಂದ ಕಳಪೆ ಫಾರ್ಮ್‌ನಲ್ಲಿದ್ದಾರೆ ಮತ್ತು ಈಗ ಅವರಿಬ್ಬರಿಗೂ ಏಷ್ಯಾ ಕಪ್‌ಗಾಗಿ (Asia Cup 2025) ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com