
ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ಎಂದರೆ ಯಾವಾಗಲೂ ಅಭಿಮಾನಿಗಳ ಪಾಲಿಗೆ ಕಿಂಗ್ ಕೊಹ್ಲಿ ಎಂದೇ ಜನಪ್ರಿಯ. ಕ್ರಿಕೆಟ್‌ಗೆ ಅವರ ಸಮರ್ಪಣೆ ಪ್ರಶ್ನಾತೀತವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ (RCB) ಸಹ ಆಟಗಾರ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಆರ್‌ಸಿಬಿ ತಂಡದಲ್ಲಿರುವ ಅನುಭವಿ ಆಟಗಾರನಿಗೆ ಐಪಿಎಲ್ 2026 ಬರುವ ಹೊತ್ತಿಗೆ 37 ವರ್ಷ ವಯಸ್ಸಾಗುತ್ತದೆ. ಹೊಸ ಆವೃತ್ತಿಗೆ ಮುನ್ನ, ತಂಡದ ಸಹ ಆಟಗಾರ ಸ್ವಸ್ತಿಕ್ ಚಿಕಾರ ಮಾಜಿ ಆರ್‌ಸಿಬಿ ನಾಯಕನ ನಿವೃತ್ತಿ ಯೋಜನೆಗಳ ಕುರಿತು ಮಾತನಾಡಿದ್ದಾರೆ.
ರೆವ್‌ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಚಿಕಾರ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಪಂದ್ಯ ಆಡುವ ದಿನ ನಿವೃತ್ತಿ ಹೊಂದುವುದಾಗಿ ಕೊಹ್ಲಿ ಹೇಳಿದ್ದರು. ಅಲ್ಲದೆ, ನಾನು ಫಿಟ್ ಆಗಿರುವವರೆಗೂ ಕ್ರಿಕೆಟ್ ಆಡುತ್ತೇನೆ. 20 ಓವರ್‌ಗಳನ್ನು ಪೂರ್ತಿ ಫೀಲ್ಡಿಂಗ್ ಮಾಡಿ ನಂತರ ಬ್ಯಾಟಿಂಗ್ ಮಾಡಲು ಸಹ ಯೋಜಿಸಿದ್ದೇನೆ ಎಂದು ಹೇಳಿದ್ದರು ಎಂದಿದ್ದಾರೆ.
'ಜಬ್ ತಕ್ ಕ್ರಿಕೆಟ್ ಖೇಲುಂಗಾ, ಜಬ್ ತಕ್ ಮೈ ಪೂರಾ ಫಿಟ್ ಹೂಂ. ಯೇ ಇಂಪ್ಯಾಕ್ಟ್ ಪ್ಲೇಯರ್ ಕಿ ತರಹ್ ನಹಿ ಖೇಲುಂಗಾ. ಮೈ ಶೇರ್ ಕಿ ತರಹ್ ಖೇಲುಂಗಾ (ನಾನು ಸಂಪೂರ್ಣವಾಗಿ ಫಿಟ್ ಆಗಿರುವವರೆಗೂ ಕ್ರಿಕೆಟ್ ಆಡುತ್ತೇನೆ. ನಾನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವುದಿಲ್ಲ. ನಾನು ಸಿಂಹದಂತೆ ಆಡುತ್ತೇನೆ) ಎಂದು ವಿರಾಟ್ ಭಯ್ಯಾ ಹೇಳಿದ್ದರು. ನಾನು ಪೂರ್ಣ 20 ಓವರ್‌ಗಳಿಗೆ ಫೀಲ್ಡಿಂಗ್ ಮಾಡಿ ನಂತರ ಬ್ಯಾಟಿಂಗ್ ಮಾಡುತ್ತೇನೆ. ನಾನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಬೇಕಾದ ದಿನ, ನಾನು ಕ್ರಿಕೆಟ್ ತ್ಯಜಿಸುತ್ತೇನೆ ಎಂದಿದ್ದಾಗಿ' ಚಿಕಾರ ಹೇಳಿದರು.
ಐಪಿಎಲ್ ಹೊರತುಪಡಿಸಿ, ಕೊಹ್ಲಿ ಏಕದಿನ ಅಂತರರಾಷ್ಟ್ರೀಯ (ODI) ಸ್ವರೂಪದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. 2024 ರಲ್ಲಿ T20 ವಿಶ್ವಕಪ್ ಗೆದ್ದ ನಂತರ ಅವರು ಮೊದಲು T20I ಗಳಿಂದ ನಿವೃತ್ತರಾದರು. ನಂತರ 2025ರ ಮೇ ತಿಂಗಳಲ್ಲಿ IND vs ENG ಸರಣಿಗೆ ಸ್ವಲ್ಪ ಮೊದಲು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆಗ ಇಡೀ ಜಗತ್ತೇ ಅಚ್ಚರಿ ಪಟ್ಟಿತು.
ಒಬ್ಬ ನಾಯಕನಾಗಿ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು ಐಪಿಎಲ್ ಪ್ರಶಸ್ತಿಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ, ಆದರೂ ಅವರು ಬ್ಯಾಟ್ಸ್‌ಮನ್ ಆಗಿ ಹಲವು ಆವೃತ್ತಿಗಳಲ್ಲಿ ಪ್ರಾಬಲ್ಯ ಸಾಧಿಸಿದರು. 2025 ರಲ್ಲಿ ಆರ್‌ಸಿಬಿ ತನ್ನ 17 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯುವಲ್ಲಿ ಕೊಹ್ಲಿ ಅಂತಿಮವಾಗಿ ಯಶಸ್ವಿಯಾದರು.
Advertisement