IPL ಗೆ ರವಿಚಂದ್ರನ್ ಅಶ್ವಿನ್ ಗುಡ್ ಬೈ: ಅನುಭವಿ ಆಫ್ ಸ್ಪಿನ್ನರ್ ಹೇಳಿದ್ದೇನು?

ರವಿಚಂದ್ರನ್ ಅಶ್ವಿನ್ ಅವರು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಈ ಘೋಷಣೆ ಮಾಡಿದ್ದಾರೆ.
Ravichandran Ashwin
ರವಿಚಂದ್ರನ್ ಅಶ್ವಿನ್
Updated on

ಚೆನ್ನೈ: ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬುಧವಾರ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ನಿವೃತ್ತಿ ಘೋಷಿಸಿದ್ದಾರೆ, ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ತಿಂಗಳುಗಳಲ್ಲಿ ಟೂರ್ನಮೆಂಟ್‌ನೊಂದಿಗಿನ 16 ವರ್ಷಗಳ ಸುದೀರ್ಘ ಸಂಬಂಧಕ್ಕೆ ತೆರೆ ಬಿದ್ದಿದೆ.

ರವಿಚಂದ್ರನ್ ಅಶ್ವಿನ್ ಅವರು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಈ ಘೋಷಣೆ ಮಾಡಿದ್ದಾರೆ.

"ಪ್ರತಿಯೊಂದು ಅಂತ್ಯಕ್ಕೂ ಹೊಸ ಆರಂಭವಿರುತ್ತದೆ ಎಂದು ಹೇಳುತ್ತಾರೆ, ಐಪಿಎಲ್ ಕ್ರಿಕೆಟಿಗನಾಗಿ ನನ್ನ ಸಮಯ ಇಂದು ಕೊನೆಗೊಳ್ಳುತ್ತದೆ, ಆದರೆ ವಿವಿಧ ಇತರ ಲೀಗ್‌ಗಳ ಸುತ್ತ ಆಟದ ಪರಿಶೋಧಕನಾಗಿ ನನ್ನ ಸಮಯ ಇಂದು ಪ್ರಾರಂಭವಾಗುತ್ತದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಇಷ್ಟು ವರ್ಷಗಳಲ್ಲಿ ಎಲ್ಲಾ ಅದ್ಭುತ ನೆನಪುಗಳು ಮತ್ತು ಸಂಬಂಧಗಳಿಗಾಗಿ ಎಲ್ಲಾ ಫ್ರಾಂಚೈಸಿಗಳಿಗೆ ಮತ್ತು ಮುಖ್ಯವಾಗಿ ಐಪಿಎಲ್ ಮತ್ತು ಬಿಸಿಸಿಐಗೆ ಇಲ್ಲಿಯವರೆಗೆ ನನಗೆ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಮುಂದೆ ಇರುವುದನ್ನು ಆನಂದಿಸಲು ಮತ್ತು ಹೆಚ್ಚಿನದನ್ನು ಪಡೆಯಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

38 ವರ್ಷದ ಆಟಗಾರ ರವಿಚಂದ್ರನ್ ಅಶ್ವಿನ್ , ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ಈ ವೃತ್ತಿ ಜೀವನದಲ್ಲಿ ಅನಿಲ್ ಕುಂಬ್ಳೆ (619) ನಂತರ ಭಾರತದ ಎರಡನೇ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ (537) ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Ravichandran Ashwin
'ದಿಢೀರ್ ನಿವೃತ್ತಿ' ಕುರಿತು ಕೊನೆಗೂ ಮೌನ ಮುರಿದ ಆರ್. ಅಶ್ವಿನ್: ನಿಜವಾದ ಕಾರಣ ಬಹಿರಂಗ! Video

2009 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅಶ್ವಿನ್ ಪಾದಾರ್ಪಣೆ ಮಾಡಿದರು. ದಶಕದ ಅಂತರದ ನಂತರ 9.75 ಕೋಟಿ ರೂಪಾಯಿಗೆ ಸಿಎಸ್‌ಕೆ ತಂಡಕ್ಕೆ ಮತ್ತೆ ಸೇರ್ಪಡೆಯಾದ ನಂತರ, ಈ ವರ್ಷ ಐಪಿಎಲ್‌ನಲ್ಲಿ ಹಳದಿ ಜೆರ್ಸಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು.

ಒಟ್ಟಾರೆಯಾಗಿ, ಅವರು 221 ಐಪಿಎಲ್ ಪಂದ್ಯಗಳಲ್ಲಿ ಆಡಿದರು, 30.22 ಸರಾಸರಿಯಲ್ಲಿ 187 ವಿಕೆಟ್‌ಗಳನ್ನು ಕಬಳಿಸಿದರು, ಬ್ಯಾಟಿಂಗ್‌ನಲ್ಲಿ, ಅವರು 833 ರನ್ ಗಳಿಸಿ ಗರಿಷ್ಠ 50 ಮತ್ತು 13.02 ಸರಾಸರಿಯಲ್ಲಿ ಆಡಿದರು.

2010 ಮತ್ತು 2011 ರಲ್ಲಿ ಸಿಎಸ್‌ಕೆ ಪ್ರಶಸ್ತಿ ವಿಜೇತ ಅಭಿಯಾನಗಳಲ್ಲಿ ಅಶ್ವಿನ್ ಅವಿಭಾಜ್ಯ ಸದಸ್ಯರಾಗಿದ್ದರು. ಲೀಗ್‌ನಲ್ಲಿ ತಮ್ಮ ವೃತ್ತಿಜೀವನದಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರವೂ ಆಡಿದ್ದರು.

Ravichandran Ashwin
Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarke ಗೆ 'ಚರ್ಮದ ಕ್ಯಾನ್ಸರ್'!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com