
ಸಿಡ್ನಿ: ದಶಕಗಳ ಕಾಲ ಆಸ್ಟ್ರೇಲಿಯಾ ಕ್ರಿಕೆಟ್ ನ ಮಧ್ಯಮ ಕ್ರಮಾಂಕದ ಜೀವಾಳವಾಗಿದ್ದ ಮೈಕೆಲ್ ಕ್ಲಾರ್ಕ್ (Skin Cancer) ಗಂಭೀರ ಆರೋಗ್ಯ ಎದುರಿಸುತ್ತಿದ್ದು ಈ ವಿಚಾರ ಇಡೀ ಜಾಗತಿಕ ಕ್ರಿಕೆಟ್ ಲೋಕವನ್ನೇ ತಲ್ಲಣಿಸಿದೆ.
ಹೌದು.. ಆಸ್ಟ್ರೇಲಿಯಾದ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿರುವ ಮೈಕೆಲ್ ಕ್ಲಾರ್ಕ್ ಅವರು ಚರ್ಮದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಈ ಕುರಿತು ಸ್ವತಃ ಕ್ಲಾರ್ಕ್ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಶೇರ್ ಮಾಡಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಕ್ಲಾರ್ಕ್, "ನನಗೆ ಚರ್ಮದ ಕ್ಯಾನ್ಸರ್ ಇರುವುದು ನಿಜ. ನಾನು ಪ್ರಸ್ತುತ ಚರ್ಮದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ. ಚಿಕಿತ್ಸೆಯ ಭಾಗವಾಗಿ, ವೈದ್ಯರು ನನ್ನ ಮೂಗಿನ ಒಂದು ಸಣ್ಣ ಭಾಗವನ್ನು ತೆಗೆದುಹಾಕಿದ್ದಾರೆ ಎಂದು ಹೇಳಿದ್ದಾರೆ.
ಅಂತೆಯೇ 'ನನ್ನ ವಿಷಯದಲ್ಲಿ, ನಿಯಮಿತ ತಪಾಸಣೆಗಳು ಬಹಳ ಮುಖ್ಯ. 2006 ರಲ್ಲಿ ಈ ಕಾಯಿಲೆ ಇರುವುದು ಪತ್ತೆಯಾದರೂ, ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದೇನೆಂದು' ಪೋಸ್ಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸಲಹೆ ನೀಡುತ್ತಿದ್ದಾರೆ.
ಸೂರ್ಯನ ಕಿರಣಗಳು ಕಾರಣ
ಚರ್ಮದ ಕ್ಯಾನ್ಸರ್ ವಿಶ್ವಾದ್ಯಂತ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವವರಲ್ಲಿ ಈ ಅಪಾಯವು ವಿಶೇಷವಾಗಿ ಹೆಚ್ಚಾಗಿರುತ್ತದೆ. ಕ್ಲಾರ್ಕ್‌ನಂತಹ ಕ್ರಿಕೆಟಿಗರು ಹೆಚ್ಚಿನ ಸಮಯವನ್ನು ಬಿಸಿಲಿನಲ್ಲಿ ಕಳೆಯುವುದರಿಂದ ಅವರಿಗೆ ಹೆಚ್ಚಿನ ಅಪಾಯವಿದೆ.
ಚರ್ಮದ ಕ್ಯಾನ್ಸರ್ ತಡೆಗಟ್ಟಲು, ನಿಮ್ಮ ಚರ್ಮವನ್ನು ಸೂರ್ಯನಿಂದ ರಕ್ಷಿಸಿಕೊಳ್ಳುವುದು ಮುಖ್ಯ. ಸನ್‌ಸ್ಕ್ರೀನ್ ಬಳಸುವುದು, ಟೋಪಿಗಳನ್ನು ಧರಿಸುವುದು ಮತ್ತು ನಿಮ್ಮ ತೋಳುಗಳನ್ನು ಸಂಪೂರ್ಣವಾಗಿ ಮುಚ್ಚುವ ಬಟ್ಟೆಗಳನ್ನು ಧರಿಸುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
Advertisement