BCCI ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ರಾಜೀನಾಮೆ; ಮಧ್ಯಂತರ ಅಧ್ಯಕ್ಷರನ್ನಾಗಿ ರಾಜೀವ್ ಶುಕ್ಲಾ ನೇಮಕ: ವರದಿ

65 ವರ್ಷ ವಯಸ್ಸಿನ ಶುಕ್ಲಾ ಅವರು 2020 ರಿಂದ ಬಿಸಿಸಿಐ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಈಗ ಸೆಪ್ಟೆಂಬರ್‌ನಲ್ಲಿ ನಡೆಯುವ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ವರೆಗೆ ಮಂಡಳಿಯ ದೈನಂದಿನ ಕಾರ್ಯಾಚರಣೆಗಳ ಮಧ್ಯಂತರ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
Roger Binny
ರೋಜರ್ ಬಿನ್ನಿ
Updated on

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಭಾರತದ ಮಾಜಿ ಆಲ್‌ರೌಂಡರ್ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ದೈನಿಕ್ ಜಾಗರಣ್ ವರದಿ ಪ್ರಕಾರ, ಸದ್ಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

2022ರ ಅಕ್ಟೋಬರ್‌ನಿಂದ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಬಿನ್ನಿ ಅವರಿಗೆ ಜುಲೈ 19 ರಂದು 70 ವರ್ಷ ತುಂಬಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿಯಮಗಳ ಪ್ರಕಾರ, 70 ವರ್ಷ ದಾಟಿದ ಯಾವುದೇ ಪದಾಧಿಕಾರಿಗಳು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಅನರ್ಹರಾಗುತ್ತಾರೆ.

65 ವರ್ಷ ವಯಸ್ಸಿನ ಶುಕ್ಲಾ ಅವರು 2020 ರಿಂದ ಬಿಸಿಸಿಐ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಈಗ ಸೆಪ್ಟೆಂಬರ್‌ನಲ್ಲಿ ನಡೆಯುವ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ವರೆಗೆ ಮಂಡಳಿಯ ದೈನಂದಿನ ಕಾರ್ಯಾಚರಣೆಗಳ ಮಧ್ಯಂತರ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಮುಂದಿನ ಪೂರ್ಣಾವಧಿಯ ಅಧ್ಯಕ್ಷರನ್ನು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಾಜ್ಯ ಘಟಕಗಳ ನಡುವೆ ಒಮ್ಮತದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಬುಧವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ, ಶುಕ್ಲಾ ಅವರು ಅಧಿಕೃತವಾಗಿ ಹಂಗಾಮಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಡ್ರೀಮ್ 11 ಇತ್ತೀಚೆಗೆ ನಿರ್ಗಮಿಸಿದ ನಂತರ ಟೀಂ ಇಂಡಿಯಾದ ಹೊಸ ಪ್ರಮುಖ ಪ್ರಾಯೋಜಕರನ್ನು ಅಂತಿಮಗೊಳಿಸುವುದು ಸಭೆಯ ಪ್ರಮುಖ ಕಾರ್ಯಸೂಚಿಯಾಗಿತ್ತು. ಸೆಪ್ಟೆಂಬರ್ 9 ರಂದು ಏಷ್ಯಾ ಕಪ್ ಆರಂಭವಾಗಲಿದ್ದು, ಸಮಯಕ್ಕೆ ಸರಿಯಾಗಿ ಬದಲಿ ಪ್ರಾಯೋಜಕರನ್ನು ಹುಡುಕುವುದು ಪ್ರಮುಖ ಸವಾಲಾಗಿ ಪರಿಣಮಿಸಿದೆ.

Roger Binny
ರೋಜರ್ ಬಿನ್ನಿ ನಿವೃತ್ತಿ: BCCI ಹಂಗಾಮಿ ಅಧ್ಯಕ್ಷರಾಗಿ ರಾಜೀವ್ ಶುಕ್ಲಾ ನೇಮಕ

'ನಮಗಿನ್ನು ಎರಡು ವಾರಗಳಿಗೂ ಕಡಿಮೆ ಸಮಯವಿದೆ. ನಾವು ಪ್ರಯತ್ನಿಸುತ್ತಿದ್ದೇವೆ, ಆದರೆ ಹೊಸ ಟೆಂಡರ್ ಕರೆಯುವುದು, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಮತ್ತು ತಾಂತ್ರಿಕತೆಗಳನ್ನು ನಿರ್ವಹಿಸುವುದು ಸಮಯ ತೆಗೆದುಕೊಳ್ಳುತ್ತದೆ. ಏಷ್ಯಾ ಕಪ್‌ಗೆ ಮಾತ್ರ ಅಲ್ಪಾವಧಿಯ ಪ್ರಾಯೋಜಕರ ಹುಡುಕಾಟದಲ್ಲಿಯೂ ನಾವು ತೊಡಗಿಲ್ಲ. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ವರೆಗೆ ಮುಂದಿನ ಎರಡೂವರೆ ವರ್ಷಗಳವರೆಗೆ ಪ್ರಾಯೋಜಕರನ್ನು ಪಡೆದುಕೊಳ್ಳುವತ್ತ ನಮ್ಮ ಗಮನವಿದೆ' ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com