
ಶುಕ್ರವಾರ ನಡೆದ ದುಲೀಪ್ ಟ್ರೋಫಿಯ ಇತಿಹಾಸದಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಜಮ್ಮು ಮತ್ತು ಕಾಶ್ಮೀರದ ವೇಗಿ ಔಕಿಬ್ ನಬಿ ಪಾತ್ರರಾದರು. ದೇಶೀಯ ಕ್ರಿಕೆಟ್‌ನಲ್ಲಿ ನಬಿ ಅಳಿಸಲಾಗದ ಛಾಪು ಮೂಡಿಸಿದರು. ವಿಸ್ಡನ್ ಪ್ರಕಾರ, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ, 28 ವರ್ಷದ ನಬಿ 53ನೇ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ, ಅವರು ಉತ್ತರ ವಲಯ ತಂಡದ ವಿರಾಟ್ ಸಿಂಗ್, ಮನಿಷಿ ಮತ್ತು ಮುಖ್ತಾರ್ ಹುಸೇನ್ ಅವರನ್ನು ಔಟ್ ಮಾಡಿದರು. ತಮ್ಮ ಮುಂದಿನ ಓವರ್‌ನ ಮೊದಲ ಎಸೆತದಲ್ಲಿ ಅವರು, ಸೂರಜ್ ಸಿಂಧು ಜೈಸ್ವಾಲ್ ಅವರನ್ನು ಔಟ್ ಮಾಡಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಆಟಗಾರರಾದರು.
ನಬಿ ಮೊದಲ ಇನಿಂಗ್ಸ್‌ನಲ್ಲಿ 10.1 ಓವರ್‌ಗಳಲ್ಲಿ ಕೇವಲ 28 ರನ್‌ಗಳನ್ನು ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು. ಉತ್ತರ ವಲಯದ 405 ರನ್‌ಗಳ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಪೂರ್ವ ವಲಯವು 230 ರನ್‌ಗಳಿಗೆ ಆಲೌಟ್ ಆಯಿತು. ನಬಿ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ ಟೂರ್ನಮೆಂಟ್ ಇತಿಹಾಸದಲ್ಲಿ 1979 ರಲ್ಲಿ ಕಪಿಲ್ ದೇವ್ ಮತ್ತು 2001 ರಲ್ಲಿ ಲೆಗ್ ಸ್ಪಿನ್ನರ್ ಸಾಯಿರಾಜ್ ಬಹುತುಲೆ ಅವರ ನಂತರ ಹ್ಯಾಟ್ರಿಕ್ ಸಾಧನೆ ಮಾಡಿದ ಮೂರನೇ ಆಟಗಾರನಾಗಿ ಹೊರಹೊಮ್ಮಿದ್ದರು.
ದುಲೀಪ್ ಟ್ರೋಫಿ ಇತಿಹಾಸದಲ್ಲಿ ಹ್ಯಾಟ್ರಿಕ್‌ಗಳು
ಕಪಿಲ್ ದೇವ್ - ಉತ್ತರ ವಲಯ vs ಪಶ್ಚಿಮ ವಲಯ, 1978
ಸೈರಾಜ್ ಬಹುತುಳೆ - ಪಶ್ಚಿಮ ವಲಯ vs ಪೂರ್ವ ವಲಯ, 2001
ಔಕಿಬ್ ನಬಿ - ಉತ್ತರ ವಲಯ vs ಪೂರ್ವ ವಲಯ, 2025
2020ರಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಪದಾರ್ಪಣೆ ಮಾಡಿದ ನಬಿ, ಅಂತಿಮವಾಗಿ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ವಿರುದ್ಧ ಮೂರು ವಿಕೆಟ್ ಕಬಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ಪಡೆಯದಿದ್ದರೂ, ಕಡಿಮೆ ರನ್ ನೀಡಿ ತಂಡಕ್ಕೆ ನೆರವಾದರು.
ಆ ಆವೃತ್ತಿಯಲ್ಲಿ, ನಬಿ ಕೇವಲ ಏಳು ಪಂದ್ಯಗಳಲ್ಲಿ 18.50 ಸರಾಸರಿಯಲ್ಲಿ 24 ವಿಕೆಟ್‌ಗಳನ್ನು ಗಳಿಸಿದರು. ಈ ಪೈಕಿ ಎರಡು ಬಾರಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಅಭಿಯಾನಕ್ಕೆ ತೆರೆ ಎಳೆದರು. ಮುಂದಿನ ಎರಡು ವರ್ಷಗಳಲ್ಲಿ, ಅವರು ತಮ್ಮ ರಾಜ್ಯ ತಂಡಕ್ಕಾಗಿ ಪ್ರಥಮ ದರ್ಜೆಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಆಗ ಅವರ ರೆಡ್ ಬಾಲ್ ವೃತ್ತಿಜೀವನವು ಸ್ಥಗಿತಗೊಂಡಂತೆ ತೋರುತ್ತಿತ್ತು. ಆದರೆ, ಒಂದೇ ಒಂದು ಆವೃತ್ತಿಯಲ್ಲಿ ಅವರ ವೃತ್ತಿಜೀವನವು ತಿರುವು ಪಡೆಯಿತು.
ಕಳೆದ ರಣಜಿ ಟ್ರೋಫಿ ಸಂದರ್ಭದಲ್ಲಿ, ನಬಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ತರಾಟೆಗೆ ತೆಗೆದುಕೊಂಡರು ಮತ್ತು ಒಂಬತ್ತು ಪಂದ್ಯಗಳಿಂದ 13.08 ರ ಅತ್ಯುತ್ತಮ ಸರಾಸರಿಯಲ್ಲಿ 49 ವಿಕೆಟ್‌ಗಳನ್ನು ಕಬಳಿಸಿದರು.
ನಬಿಯ ಈ ಅದ್ಭುತ ಪ್ರದರ್ಶನವು ಉತ್ತರ ವಲಯಕ್ಕೆ 175 ರನ್‌ಗಳ ಅಮೂಲ್ಯವಾದ ಮುನ್ನಡೆಯನ್ನು ತಂದುಕೊಟ್ಟಿತು. ಅವರು ಈಗ 3ನೇ ದಿನದಂದು ಅದನ್ನು ವಿಸ್ತರಿಸಲು ಮತ್ತು ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಲು ನೋಡುತ್ತಿದ್ದಾರೆ.
Advertisement