
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಭಾರತ ತಂಡದ ಮೆಂಟರ್ ಹುದ್ದೆಗೆ ಆಹ್ವಾನಿಸಲಾಗಿದೆ ಎಂದು ಶನಿವಾರ ವರದಿಯಾಗಿದ್ದು, ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಪ್ರತಿಕ್ರಿಯಿಸಿದ್ದಾರೆ. 2021ರ ಟಿ20 ವಿಶ್ವಕಪ್ ಸಮಯದಲ್ಲಿ ರವಿಶಾಸ್ತ್ರಿ ತಂಡದ ಮುಖ್ಯ ಕೋಚ್ ಆಗಿದ್ದಾಗ ಎಂಎಸ್‌ಡಿ ಕೊನೆಯ ಬಾರಿಗೆ ಮೆನ್ ಇನ್ ಬ್ಲೂ ತಂಡಕ್ಕೆ ಮೆಂಟರ್ ಆಗಿದ್ದರು. ನಿರ್ಧಾರ ಉತ್ತಮವಾಗಿದ್ದರೂ, ಬಿಸಿಸಿಐ ಕರೆಗೆ ಧೋನಿ ಉತ್ತರಿಸಿದರೇ ಎಂದು ಆಶ್ಚರ್ಯಚಕಿತರಾಗಿದ್ದಾರೆ.
ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ತಿವಾರಿ, ಆಟಗಾರ ಮತ್ತು ನಾಯಕನಾಗಿ ಧೋನಿ ಅವರ ಅನುಭವವನ್ನು ಗಮನಿಸಿದರೆ, ಅವರನ್ನು ಟೀಂ ಇಂಡಿಯಾಕ್ಕೆ ಮೆಂಟರ್ ಆಗಿ ಸೇರಿಸಿಕೊಳ್ಳುವುದು ತುಂಬಾ ಉಪಯುಕ್ತವಾಗಿದೆ. ಧೋನಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಜೋಡಿಯನ್ನು ನೋಡುವುದು ಯೋಗ್ಯವಾಗಿದೆ ಎಂದು ಹೇಳಿದರು. ಆದರೆ, ಧೋನಿ ಅವರನ್ನು ಫೋನ್ ಮೂಲಕ ಅವರನ್ನು ಸಂಪರ್ಕಿಸುವುದು ಕಷ್ಟ ಎಂದು ಈ ಹಿಂದೆ ಅನೇಕ ಮಾಜಿ ಆಟಗಾರರು ಹೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
'ಅವರು ಫೋನ್ ಎತ್ತಿದ್ದಾರಾ? ಏಕೆಂದರೆ ಅವರನ್ನು ಫೋನ್‌ನಲ್ಲಿ ಸಂಪರ್ಕಿಸುವುದು ಕಷ್ಟ... ಅವರು ಆ ಪಾತ್ರವನ್ನು ಸ್ವೀಕರಿಸುತ್ತಾರೋ ಇಲ್ಲವೋ ಎಂಬುದು ನಂತರದ ವಿಚಾರ... ನಾಯಕ ಮತ್ತು ಆಟಗಾರನಾಗಿ ಅವರ ಅನುಭವವು ತುಂಬಾ ಉಪಯುಕ್ತವಾಗಿರುತ್ತದೆ. ಏಕೆಂದರೆ, ಇಂದು ಹೊರಹೊಮ್ಮುತ್ತಿರುವ ಮತ್ತು ಭಾರತೀಯ ತಂಡದ ತಾರೆಯರಾಗುತ್ತಿರುವ ಹೊಸ ಆಟಗಾರರು ಅವರಿಗೆ ಹೆಚ್ಚಿನ ಗೌರವವನ್ನು ನೀಡುತ್ತಾರೆ. ಎಂಎಸ್ ಧೋನಿ ಮತ್ತು ಗೌತಮ್ ಗಂಭೀರ್ ಜೋಡಿ ಕೂಡ ನೋಡಲೇಬೇಕಾದ ಸಂಗತಿಯಾಗಿದೆ' ಎಂದು ತಿವಾರಿ ಹೇಳಿದ್ದಾರೆ.
ಕ್ರಿಕ್‌ಬ್ಲಾಗರ್ ಪ್ರಕಾರ, ಧೋನಿಗೆ ಮತ್ತೊಮ್ಮೆ ಟೀಂ ಇಂಡಿಯಾ ಮೆಂಟರ್ ಹುದ್ದೆ ನೀಡಲು ಆಹ್ವಾನ ನೀಡಲಾಗಿದೆ ಎಂದು ಬಿಸಿಸಿಐ ಮೂಲವೊಂದು ಹೇಳಿದೆ. ಮಾಜಿ ನಾಯಕನ ಮಾರ್ಗದರ್ಶನವು ಮುಂದಿನ ಪೀಳಿಗೆಯ ಭಾರತೀಯ ಕ್ರಿಕೆಟಿಗರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಮಂಡಳಿ ನಂಬುತ್ತದೆ ಎಂದು ವರದಿ ಹೇಳುತ್ತದೆ. ಧೋನಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವಿನ ಸಿಹಿ-ಕಹಿ ಸಂಬಂಧ ರಹಸ್ಯವಲ್ಲ. ತನ್ನ ಮಾಜಿ ಸಹ ಆಟಗಾರನ ಕಾರಣದಿಂದಾಗಿ ಧೋನಿ ಈ ಆಹ್ವಾನವನ್ನು ಸ್ವೀಕರಿಸುವ ಸಾಧ್ಯತೆಯಿಲ್ಲ ಎಂದು ವರದಿ ಹೇಳುತ್ತದೆ.
Advertisement