ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಬಿಕರಿಯಾದ ನಂತರ ತಮ್ಮ ಅನುಭವ ಹೇಗಿತ್ತು ಎಂಬುದರ ಕುರಿತು ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ ಹಂಚಿಕೊಂಡಿದ್ದಾರೆ. ಫ್ರಾಂಚೈಸಿಗೆ ತಾವು ಸಹಜವಾಗಿಯೇ ಸೂಕ್ತ ಎಂದು ತಕ್ಷಣವೇ ಭಾವಿಸಿದೆ ಎಂದು ಹೇಳಿದ್ದಾರೆ. ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಸಾಲ್ಟ್, ತಂಡದ ಶೈಲಿ ಮತ್ತು ಸಂವಹನದ ಸ್ಪಷ್ಟತೆಯು ಪರಿವರ್ತನೆಯನ್ನು ಸುಗಮಗೊಳಿಸಿದೆ ಎಂದು ಬಹಿರಂಗಪಡಿಸಿದರು.
'ನನ್ನ ಮೊದಲ ಆಲೋಚನೆಯೆಂದರೆ ಇದು ನಾನು ಆಡಲು ನಿಜವಾಗಿಯೂ ಸೂಕ್ತವಾದ ತಂಡ. ಆರ್‌ಸಿಬಿ ಯಾವಾಗಲೂ ತಮ್ಮನ್ನು ತಾವು ನಿರ್ವಹಿಸಿಕೊಂಡ ರೀತಿ, ಅವರು ಆಡುವ ಕ್ರಿಕೆಟ್‌ನ ಬ್ರ್ಯಾಂಡ್, ಇದೆಲ್ಲವೂ ನನಗೆ ಇಷ್ಟವಾಯಿತು. ಹರಾಜಿನ ನಂತರ ಮೊ (ಬೊಬಾಟ್) ಅವರೊಂದಿಗಿನ ನನ್ನ ಮೊದಲ ಸಂಭಾಷಣೆಯಿಂದ, ಅವರು ನನ್ನನ್ನು ಏಕೆ ಬಯಸುತ್ತಾರೆ ಮತ್ತು ಅವರು ನನಗಾಗಿ ಯಾವ ಪಾತ್ರವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆಂದು ನನಗೆ ಸ್ಪಷ್ಟವಾಗಿ ಅರ್ಥವಾಗುತ್ತಿತ್ತು. ಎಲ್ಲವೂ ನನ್ನ ಆಟಕ್ಕೆ ಹೊಂದಿಕೆಯಾಗುತ್ತದೆ ಎಂದು ಭಾವಿಸಿದೆ' ಎಂದು ಸಾಲ್ಟ್ ಹೇಳಿದರು.
ಆರ್‌ಸಿಬಿ ಫಿಲ್ ಸಾಲ್ಟ್ ಅವರನ್ನು ಹರಾಜಿನಲ್ಲಿ 11.50 ಕೋಟಿ ರೂ.ಗಳಿಗೆ ಖರೀದಿಸಿತು. ಈ ನಡೆ ಫಲಪ್ರದ ಎಂದು ಸಾಬೀತಾಯಿತು. ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ 13 ಪಂದ್ಯಗಳಲ್ಲಿ ಫ್ರಾಂಚೈಸಿ ಪರ 403 ರನ್ ಗಳಿಸಿದರು. ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿವೆ. ಆರ್‌ಸಿಬಿ ಪ್ರಶಸ್ತಿ ಗೆಲ್ಲುವಲ್ಲಿ ಅಗ್ರ ಕ್ರಮಾಂಕದಲ್ಲಿ ಅವರ ಸ್ಥಿರತೆ ಪ್ರಮುಖ ಪಾತ್ರ ವಹಿಸಿದೆ.
ಈ ವರ್ಷದ ಆರಂಭದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಸೋಲಿಸುವ ಮೂಲಕ ಆರ್‌ಸಿಬಿ 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಸಾಲ್ಟ್ ಈ ಹಿಂದೆ 2024 ರಲ್ಲಿ ಪ್ರಶಸ್ತಿ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಭಾಗವಾಗಿದ್ದರು. ಅಲ್ಲಿ ಅವರು 12 ಪಂದ್ಯಗಳಲ್ಲಿ 435 ರನ್ ಗಳಿಸಿದರು. ಒಂದು ವರ್ಷದ ನಂತರ, ಅವರು ಆರ್‌ಸಿಬಿದೆ ಮರಳಿ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದರು. ಎರಡು ವಿಭಿನ್ನ ಫ್ರಾಂಚೈಸಿಗಳೊಂದಿಗೆ ಸತತ ಪ್ರಶಸ್ತಿಗಳನ್ನು ಗೆದ್ದ ಅಪರೂಪದ ಆಟಗಾರರಲ್ಲಿ ಒಬ್ಬರಾದರು.
ಈ ವರ್ಷ ಡಿಸೆಂಬರ್ 16 ರಂದು ನಡೆಯುವ ಹರಾಜಿಗೆ ಮುಂಚಿತವಾಗಿ ಆರ್‌ಸಿಬಿ ಉಳಿಸಿಕೊಂಡ ಆಟಗಾರರಲ್ಲಿ ಫಿಲ್ ಸಾಲ್ಟ್ ಕೂಡ ಒಬ್ಬರು.
ಉಳಿಸಿಕೊಂಡಿರುವ ಆಟಗಾರರು: ರಜತ್ ಪಾಟೀದಾರ್, ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಕೃನಾಲ್ ಪಾಂಡ್ಯ, ಜಾಶ್ ಹೇಜಲ್‌ವುಡ್, ಟಿಮ್ ಡೇವಿಡ್, ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್, ನುವಾನ್ ತುಷಾರ, ಭುವನೇಶ್ವರ್ ಕುಮಾರ್, ಜೇಕಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಸುಯಾಶ್ ಶರ್ಮಾ, ಸ್ವಪ್ನಿಲ್ ಸಿಂಗ್, ಯಶ್ ದಯಾಳ್, ಅಭಿನಂದನ್ ಸಿಂಗ್, ರಸಿಕ್‌ದಾರ್.
ಬಿಡುಗಡೆಯಾದ ಆಟಗಾರರು: ಸ್ವಸ್ತಿಕ್ ಚಿಕಾರಾ, ಮಯಾಂಕ್ ಅಗರ್ವಾಲ್, ಟಿಮ್ ಸೀಫರ್ಟ್, ಲಿಯಾಮ್ ಲಿವಿಂಗ್‌ಸ್ಟನ್, ಮನೋಜ್ ಭಾಂಡಗೆ, ಲುಂಗಿ ಎನ್‌ಗಿಡಿ, ಬ್ಲೆಸ್ಸಿಂಗ್ ಮುಜರಾಬಾನಿ, ಮೋಹಿತ್ ರಾಠಿ.
Advertisement