

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 16,000 ರನ್ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ದೆಹಲಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಆಂಧ್ರ ವಿರುದ್ಧ ತಮ್ಮ 330ನೇ ಇನ್ನಿಂಗ್ಸ್‌ನಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಇದರಲ್ಲಿ 58 ಶತಕಗಳು ಮತ್ತು 84 ಅರ್ಧಶತಕಗಳು ಸೇರಿವೆ. ಸಚಿನ್ 391 ಇನ್ನಿಂಗ್ಸ್‌ಗಳಲ್ಲಿ 16,000 ರನ್ ಗಳಿಸಿದ್ದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗವಾಗಿ 16,000 ರನ್ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ಮತ್ತು ಕೊಹ್ಲಿ ಮಾತ್ರ ಮೊದಲ ಐದು ಸ್ಥಾನಗಳಲ್ಲಿದ್ದಾರೆ. ಅವರ ನಂತರ ಗೋರ್ಡನ್ ಗ್ರೀನಿಡ್ಜ್ (422 ಇನ್ನಿಂಗ್ಸ್), ರಿಕಿ ಪಾಂಟಿಂಗ್ (430 ಇನ್ನಿಂಗ್ಸ್) ಮತ್ತು ಗ್ರಹಾಂ ಗೂಚ್ ಮತ್ತು ವಿವ್ ರಿಚರ್ಡ್ಸ್ (435 ಇನ್ನಿಂಗ್ಸ್) ಇದ್ದಾರೆ.
ಹಲವು ತಿಂಗಳುಗಳ ಬಳಿಕ ಕಮ್ ಬ್ಯಾಕ್ ಮಾಡಿದ್ದ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿ ಅಬ್ಬರಿಸಿದ್ದರು. ಇದೀಗ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲೂ (Vijay Hazare Trophy) ತಮ್ಮ ಶತಕಗಳ ಓಟವನ್ನು ಮುಂದುವರೆಸಿದ್ದಾರೆ. ಬರೋಬ್ಬರಿ 15 ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಕೇವಲ 83 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ್ದಾರೆ. 101 ಎಸೆತಗಳಲ್ಲಿ ಕೊಹ್ಲಿ 3 ಸಿಕ್ಸರ್ 14 ಬೌಂಡರಿ ಸೇರಿದಂತೆ 131 ರನ್ ಗಳಿಸಿ ಔಟಾದರು.
Advertisement