India sets Huge Target
ಭಾರತ ಭರ್ಜರಿ ಬ್ಯಾಟಿಂಗ್

5th T20: ಗರಿಷ್ಟ ಸ್ಕೋರ್, ಪವರ್ ಪ್ಲೇ ರನ್, ಮೊದಲ ಎಸೆತದಲ್ಲೇ ಸಿಕ್ಸರ್; ಹಲವು ದಾಖಲೆ ಬರೆದ ಭಾರತ!

ಭಾರತ ಸಿಡಿಸಿದ 247 ರನ್ ಸ್ಕೋರ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ದಾಖಲಾದ ತಂಡವೊಂದರ ಗರಿಷ್ಟ ಸ್ಕೋರ್ ಆಗಿದೆ.
Published on

ಮುಂಬೈ: ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಭರ್ಜರಿ ಸ್ಕೋರ್ ದಾಖಲಿಸಿದ ಭಾರತ ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 5ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ ಸಿಡಿಸಿತು. ಭಾರತದ ಪರ ಅಭಿಷೇಕ್ ಶರ್ಮಾ ಶತಕ ಸಿಡಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು. ಅಭಿಷೇಕ್ ಶರ್ಮಾ 54 ಎಸೆತಗಳಲ್ಲಿ 13 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 135 ರನ್ ಸಿಡಿಸಿದರು.

ಹಲವು ದಾಖಲೆ ಬರೆದ ಭಾರತ!

ಇನ್ನು ಈ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡ ಹಲವು ದಾಖಲೆಗಳನ್ನು ನಿರ್ಮಿಸಿದೆ. ಇಂದು ಭಾರತ ಸಿಡಿಸಿದ 247ರನ್ ಸ್ಕೋರ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ದಾಖಲಾದ ತಂಡವೊಂದರ ಗರಿಷ್ಟ ಸ್ಕೋರ್ ಆಗಿದೆ.

ಭಾರತದ 4ನೇ ಗರಿಷ್ಠ ಮೊತ್ತ

ಇನ್ನು ಇಂದು ಭಾರತ ಗಳಿಸಿದ 247 ರನ್ ಸ್ಕೋರ್ ಟಿ20ಯಲ್ಲಿ ಭಾರತದ ಪರ ದಾಖಲಾದ 4ನೇ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದೆ 2024ರಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 297 ರನ್ ಕಲೆ ಹಾಕಿತ್ತು. ಇದು ಭಾರತ ಗಳಿಸಿದ ಗರಿಷ್ಠ ಟಿ20 ಸ್ಕೋರ್ ಆಗಿದೆ. ನಂತರದ ಸ್ಥಾನದಲ್ಲಿ 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಜೋಹಾನ್ಸ್ ಬರ್ಗ್ ನಲ್ಲಿ 283ರನ್ ಕಲೆಹಾಕಿತ್ತು. 2017ರ ಇಂದೋರ್ ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯ ಇದ್ದು ಇಲ್ಲಿ ಭಾರತ 260ರನ್ ಕಲೆ ಹಾಕಿತ್ತು.

Highest T20I totals for India

  • 297/6 vs Ban Hyderabad 2024

  • 283/1 vs SA Joburg 2024

  • 260/5 vs SL Indore 2017

  • 247/9 vs Eng Wankhede 2025

  • ಪವರ್ ಪ್ಲೇ ನಲ್ಲಿ ಗರಿಷ್ಠ ರನ್

ಇನ್ನು ಇಂದಿನ ಪಂದ್ಯದಲ್ಲಿ ಭಾರತ ತಂಡ ಪವರ್ ಪ್ಲೇ ನಲ್ಲಿ 95ರನ್ ಕಲೆ ಹಾಕಿದೆ. ಇದು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಭಾರತದ ಪರ ಪವರ್ ಪ್ಲೇನಲ್ಲಿ ದಾಖಲಾದ ಗರಿಷ್ಠ ರನ್ ಆಗಿದೆ. ಇದಕ್ಕೂ ಮೊದಲು 2021ರಲ್ಲಿ ದುಬೈನಲ್ಲಿ ಭಾರತ ತಂಡ ಸ್ಕಾಟ್ಲೆಂಡ್ ವಿರುದ್ಧ ಪವರ್ ಪ್ಲೇನಲ್ಲಿ 82ರನ್ ಕಲೆಹಾಕಿತ್ತು. 2024ರಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 82ರನ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 2018ರಲ್ಲಿ ಪವರ್ ಪ್ಲೇನಲ್ಲಿ 78 ರನ್ ಕಲೆಹಾಕಿತ್ತು.

Highest Powerplay totals for India in T20Is

  • 95/1 vs Eng Wankhede 2025

  • 82/2 vs Sco Dubai 2021

  • 82/1 vs Ban Hyderabad 2024

  • 78/2 vs SA Joburg 2018

ಮೊದಲ ಎಸೆತದಲ್ಲೇ ಸಿಕ್ಸರ್

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್ ಭರ್ಜರಿ ಆರಂಭ ಒದಗಿಸಿದ್ದರು. ಇಂಗ್ಲೆಂಡ್ ಜೋಫ್ರಾ ಆರ್ಚರ್ ಎಸೆದ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟುವ ಮೂಲಕ ದಾಖಲೆ ಬರೆದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಪಂದ್ಯದ ಆರಂಭಿಕ ಎಸೆತದಲ್ಲೇ ಭಾರತದ ಪರ ಸಿಕ್ಸರ್ ಸಿಡಿಸಿದ ಮೂರನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಇದಕ್ಕೂ ಮೊದಲು 2021ರಲ್ಲಿ ರೋಹಿತ್ ಶರ್ಮಾ, 2024ರಲ್ಲಿ ಯಶಸ್ವಿ ಜೈಸ್ವಾಲ್ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದ್ದರು.

Hitting first ball of a T20I for a six (India)

  • Rohit Sharma off Adil Rashid Ahmedabad 2021

  • Yashasvi Jaiswal off Sikandar Raza Harare 2024

  • Sanju Samson off Jofra Archer Wankhede 2025

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com