Virat Kohli Equals Mohd Azharuddin record
ವಿರಾಟ್ ಕೊಹ್ಲಿ

ICC Champions Trophy 2025: ಮಹಮದ್ ಅಜರುದ್ದೀನ್ ಅಪರೂಪದ ದಾಖಲೆ ಸರಿಗಟ್ಟಿದ Virat Kohli

ಬಾಂಗ್ಲಾದೇಶಕ್ಕೆ ಅರ್ಧಶತಕದ ಮೂಲಕ ನೆರವಾದ ಜೇಕರ್ ಅಲಿ (68 ರನ್)ಅವರ ಕ್ಯಾಚ್ ಪಡೆಯುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
Published on

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲೇ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದು, ಮಾಜಿ ಕ್ರಿಕೆಟಿಗ ಮಹಮದ್ ಅಜರುದ್ದೀನ್ ಹೆಸರಲ್ಲಿದ್ದ ಅಪರೂಪದ ದಾಖಲೆ ಸರಿಗಟ್ಟಿದ್ದಾರೆ.

ಹೌದು... ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದು, ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಭಾರತದ ಆಟಗಾರರ ಪಟ್ಟಿಯಲ್ಲಿ ಅಜರುದ್ದೀನ್ ದಾಖಲೆ ಸರಿಗಟ್ಟಿದ್ದಾರೆ.

ಕೇವಲ 35 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಂಗ್ಲಾದೇಶಕ್ಕೆ ಅರ್ಧಶತಕದ ಮೂಲಕ ನೆರವಾದ ಜೇಕರ್ ಅಲಿ (68 ರನ್)ಅವರ ಕ್ಯಾಚ್ ಪಡೆಯುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

Virat Kohli Equals Mohd Azharuddin record
ICC Champions Trophy 2025; ಭಾರತ ಬೌಲಿಂಗ್ ಆರ್ಭಟಕ್ಕೆ ಬಾಂಗ್ಲಾದೇಶ ತತ್ತರ; ಕಳಪೆ ದಾಖಲೆ ನಿರ್ಮಾಣ; ಶಮಿ ವರ್ಲ್ಡ್ ರೆಕಾರ್ಡ್!

ಮಹಮದ್ ಶಮಿ ಎಸೆದ 43ನೇ ಓವರ್ ನ 4ನೇ ಎಸೆತದಲ್ಲಿ ಜೇಕರ್ ಅಲಿ ಭರ್ಜರಿ ಹೊಡೆತಕ್ಕೆ ಕೈಹಾಕಿದರು. ಈ ವೇಳೆ ಚೆಂಡು ಅವರ ಬ್ಯಾಟಿನ ಅಂಚನ್ನು ಸವರಿ ಮೇಲಕ್ಕೆ ಹಾರಿತು. ಈ ವೇಳೆ ಅಲ್ಲಿಯೇ ಇದ್ದ ವಿರಾಟ್ ಕೊಹ್ಲಿ ಅದನ್ನು ಕ್ಯಾಚ್ ಪಡೆದರು. ಈ ಕ್ಯಾಚ್ ನೊಂದಿಗೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ತಮ್ಮ ಕ್ಯಾಚ್ ಗಳ ಸಂಖ್ಯೆಯನ್ನು 156ಕ್ಕೆ ಏರಿಕೆ ಮಾಡಿಕೊಂಡರು.

ಅಂತೆಯೇ ಇಷ್ಟೇ ಕ್ಯಾಚ್ ಪಡೆದಿರುವ ಮಾಜಿ ನಾಯಕ ಮಹಮದ್ ಅಜರುದ್ದೀನ್ ಅವರ ದಾಖಲೆಯನ್ನೂ ಕೊಹ್ಲಿ ಸರಿಗಟ್ಟಿದ್ದಾರೆ. ಇನ್ನು ಈ ಪಟ್ಟಿಯಲ್ಲಿ 140 ಕ್ಯಾಚ್ ಪಡೆದಿರುವ ಸಚಿನ್ ತೆಂಡೂಲ್ಕರ್ 3ನೇ ಸ್ಥಾನದಲ್ಲಿದ್ದು, 124 ಕ್ಯಾಚ್ ಗಳೊಂದಿಗೆ ದ್ರಾವಿಡ್ 4 ಮತ್ತು 102 ಕ್ಯಾಚ್ ಗಳೊಂದಿಗೆ ಸುರೇಶ್ ರೈನಾ 5ನೇ ಸ್ಥಾನದಲ್ಲಿದ್ದಾರೆ.

Most catches as fielder for India (ODI)

  • 156 Mohd Azharuddin

  • 156 Virat Kohli *

  • 140 Sachin Tendulkar

  • 124 Rahul Dravid

  • 102 Suresh Raina

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com