Champions Trophy 2025: ಕೊಹ್ಲಿ ಆರ್ಭಟಕ್ಕೆ ಮತ್ತೊಂದು ವಿಶ್ವದಾಖಲೆ ಉಡೀಸ್; ವೇಗವಾಗಿ 14000 ರನ್ ಪೂರೈಸಿದ 'ವಿರಾಟ್'!

ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 15 ರನ್ ಬಾರಿಸುವ ಮೂಲಕ ಈ ವಿಶ್ವದಾಖಲೆ ಬರೆದಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ಏಕದಿನ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವೇಗವಾಗಿ 14 ಸಾವಿರ ರನ್ ಪೂರೈಸಿ ವಿಶ್ವದಾಖಲೆ ಬರೆದಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 15 ರನ್ ಬಾರಿಸುವ ಮೂಲಕ ಈ ವಿಶ್ವದಾಖಲೆ ಬರೆದಿದ್ದಾರೆ.

ಕೊಹ್ಲಿ ಈವರೆಗೂ ಒಟ್ಟು 298 ಪಂದ್ಯಗಳು, 287 ಇನ್ನಿಂಗ್ಸ್ ನಲ್ಲಿ 14 ಸಾವಿರ ರನ್ ಕಲೆಹಾಕಿದ್ದಾರೆ. ಇದೇ ವೇಳೆ ಏಕದಿನದಲ್ಲಿ 14 ಸಾವಿರ ರನ್ ಪೂರೈಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. 350 ಇನ್ನಿಂಗ್ಸ್​​ಗಳಲ್ಲಿ ಸಚಿನ್ 14 ಸಾವಿರ ರನ್ ಪೂರೈಸಿದ್ದರು. ಸಚಿನ್ ನಂತರ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ್ ಸಂಗಕ್ಕಾರ 14,000 ರನ್ ಗಡಿ ದಾಟಿದ ಎರಡನೇ ಆಟಗಾರ ಎನಿಸಿದ್ದಾರೆ. 378 ಇನ್ನಿಂಗ್ಸ್ ಗಳಲ್ಲಿ ಸಂಗಕ್ಕಾರ ಈ ದಾಖಲೆ ಬರೆದಿದ್ದರು.

ಕೊಹ್ಲಿ ಮುಂದಿದೆ ಮತ್ತೊಂದು ವಿಶ್ವದಾಖಲೆ

ಕೊಹ್ಲಿ ಮುಂದಿರುವ ಮತ್ತೊಂದು ವಿಶ್ವದಾಖಲೆ ಎಂದರೆ ಅದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 3ನೇ ಆಟಗಾರನಾಗುವ ಅವಕಾಶ. ಹೌದು... ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಲು 103 ರನ್​ಗಳ ಅಗತ್ಯ ಇದೆ. ಕೊಹ್ಲಿ ಭಾರತ ಪರ 545 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 27,381 ರನ್ ಗಳಿಸಿದ್ದಾರೆ. ಪಾಂಟಿಂಗ್ ತಮ್ಮ ಕರಿಯರ್​​ನಲ್ಲಿ ಆಸ್ಟ್ರೇಲಿಯಾ ಪರ 560 ಪಂದ್ಯಗಳಲ್ಲಿ 27,483 ರನ್ ಗಳಿಸಿದ್ದಾರೆ. ಸಚಿನ್ (34,357) ಮತ್ತು ಸಂಗಕ್ಕಾರ (28,016) ಮೊದಲ ಎರಡು ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ
Champions Trophy: ದಾಖಲೆಗಳ ಸರದಾರನ ಮುಕುಟಕ್ಕೆ ಮತ್ತೊಂದು ಗರಿ; ಅಜರುದ್ದೀನ್ ದಾಖಲೆ ಮುರಿದ ಕೊಹ್ಲಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com