ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ನಾಯಕ ಜಸ್ ಪ್ರೀತ್ ಬುಮ್ರಾ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ ಆಸ್ಟ್ರೇಲಿಯಾ ಅಭಿಮಾನಿಗೆ ಭಾರತ ತಂಡದ ಮಾಜಿ ಕ್ರಿಕೆಟಿದ ಆರ್ ಅಶ್ವಿನ್ ಖಡಕ್ ತಿರುಗೇಟು ನೀಡಿದ್ದಾರೆ.
ಇಡೀ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತದ ಜಸ್ ಪ್ರೀತ್ ಬುಮ್ರಾ ಪ್ರಬಲ ಪ್ರದರ್ಶನ ನೀಡಿ ಭಾರತ ತಂಡದ ಬೆನ್ನೆಲುಬಾಗಿ ನಿಂತಿದ್ದರು. ಅಂತೆಯೇ ಇಡೀ ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದು ಸರಣಿ ಶ್ರೇಷ್ಟ ಪ್ರಶಸ್ತಿ ಕೂಡ ಪಡೆದಿದ್ದಾರೆ. ಇದೀಗ ಇಂತಹ ಬುಮ್ರಾ ವಿರುದ್ಧವೇ ಆಸ್ಟ್ರೇಲಿಯಾ ಅಭಿಮಾನಿಗಳು ಬಾಲ್ ಟ್ಯಾಂಪರಿಂಗ್ ಆರೋಪ ಮಾಡುತ್ತಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾದ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ತಮ್ಮ ಶೂ ಸರಿ ಮಾಡಿಕೊಳ್ಳುತ್ತಿದ್ದ ಬುಮ್ರಾ ಶೂಗಳನ್ನು ತೆಗೆದು ಮತ್ತೆ ಸರಿಯಾಗಿ ಹಾಕಿಕೊಳ್ಳುತ್ತಿದ್ದರು. ಈ ವೇಳೆ ಅವರ ಶೂನಿಂದ ಏನೋ ಒಂದು ವಸ್ತು ಕೆಳಗೆ ಬಿತ್ತು. ಅದನ್ನು ಕೈಗೆತ್ತಿಕೊಂಡ ಬುಮ್ರಾ ಮತ್ತೆ ಶೂ ಹಾಕಿಕೊಂಡು ಹೋದರು. ಆದರೆ ಈ ವಿಡಿಯೋ ನೋಡಿದ ಆಸಿಸ್ ಅಭಿಮಾನಿಗಳು ಅದು ಸ್ಯಾಂಡ್ ಪೇಪರ್ ಆಗಿದ್ದು, ಬುಮ್ರಾ ಅದನ್ನು ಬಳಸಿಯೇ ಪ್ರಭಾವಶಾಲಿ ಬೌಲಿಂಗ್ ಮಾಡಿದರು ಎಂದು ಆರೋಪಿಸುತ್ತಿದ್ದಾರೆ.
ಅಲ್ಲದೆ ಪಂದ್ಯದ ವೇಳೆಯಲ್ಲೂ ಬುಮ್ರಾ ತಮ್ಮ ಶೂನಲ್ಲಿ ಏನೋ ಇಟ್ಟುಕೊಂಡಿದ್ದಾರೆ ಎಂದು ಆಸಿಸ್ ಅಭಿಮಾಗಳು ಪದೇ ಪದೇ ಭಾರತೀಯ ಆಟಗಾರರನ್ನು ಕೆಣಕುತ್ತಿದ್ದರು.
ತನಿಖೆ ನಡೆಸುವಂತೆ ಐಸಿಸಿಗೆ ಆಗ್ರಹ
ಮಾತ್ರವಲ್ಲದೇ ಜಸ್ ಪ್ರೀತ್ ಬುಮ್ರಾ ಸರಣಿಯಲ್ಲಿ 32 ವಿಕೆಟ್‌ಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು ಶೂನಲ್ಲಿ ಇದ್ದ ವಸ್ತುವೇನು? ಎಂಬುದರ ಕುರಿತು ಐಸಿಸಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಆರ್ ಅಶ್ವಿನ್ ಖಡಕ್ ತಿರುಗೇಟು
ಇನ್ನು ಆಸಿಸ್ ಅಭಿಮಾನಿಗಳ ಆರೋಪಕ್ಕೆ ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ ಭಾರತ ತಂಡದ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಖಡಕ್ ತಿರುಗೇಟು ನೀಡಿದ್ದಾರೆ. ಎಕ್ಸ್ ಮೂಲಕ ಈ ಕುರಿತು ಟ್ವೀಟ್ ಮಾಡಿರುವ ಅಶ್ವಿನ್, ಅದು ಫಿಂಗರ್ ಪ್ರೊಟೆಕ್ಷನ್ ಪ್ಯಾಡ್..! ಎಂದು ಲಾಫಿಂಗ್ ಎಮೋಜಿ ಹಾಕಿ.. Sand paper ಗೂ ಫಿಂಗರ್ ಪ್ರೊಟೆಕ್ಟರ್ ಗೂ ವತ್ಯಾಸ ಗೊತ್ತಿಲ್ವಾ ಎನ್ನುವ ಅರ್ಥದಲ್ಲಿ ತಿರುಗೇಟು ನೀಡಿದ್ದಾರೆ.
Advertisement