10 ವರ್ಷಗಳ ಬಳಿಕ ರಣಜಿ ಟ್ರೋಫಿಯಲ್ಲಿ ಆಡಲು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಜ್ಜು?

ಬಿಸಿಸಿಐ ಜೊತೆಗಿನ ಸಭೆಯಲ್ಲಿ ರೋಹಿತ್ ಇನ್ನೂ ಕೆಲವು ತಿಂಗಳು ತಂಡದ ನಾಯಕರಾಗಿ ಮುಂದುವರಿಯಲು ಬಯಸುವುದಾಗಿ ಮಂಡಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ
Updated on

ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಇದೀಗ ಟೈಂ ಚೆನ್ನಾಗಿಲ್ಲ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ತಂಡದ ಪ್ರದರ್ಶನ ಉತ್ತಮವಾಗಿಲ್ಲ ಎನ್ನುವುದು ಒಂದು ಕಡೆಯಾದರೆ, ರೋಹಿತ್ ಕೂಡ ರನ್ ಗಳಿಸಲು ಹೆಣಗಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೇವಲ 31 ರನ್‌ಗಳಿಸಲಷ್ಟೇ ಅವರು ಶಕ್ತರಾಗಿದ್ದರು. ಈ ಬೆನ್ನಲ್ಲೇ ರೋಹಿತ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವುದು ಸೂಕ್ತ ಎನ್ನುವ ಅಭಿಪ್ರಾಯ ಬಹುತೇಕ ಕಡೆಗಳಿಂದ ವ್ಯಕ್ತವಾಗಿತ್ತು.

ಕಳಪೆ ಫಾರ್ಮ್‌ ಹಿನ್ನಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ರೋಹಿತ್ ತಂಡದಿಂದ ಹೊರಗುಳಿದಿದ್ದರು. ಬುಮ್ರಾ ನಾಯಕರಾಗಿದ್ದರು ಆಗಲೂ ತಂಡ ಸೋಲಿನ ರುಚಿಯನ್ನು ಅನುಭವಿಸಿತು. ಬಳಿಕ ಬಿಸಿಸಿಐ ಜೊತೆಗೆ ನಡೆದ ಪರಿಶೀಲನಾ ಸಭೆಯಲ್ಲಿ ರೋಹಿತ್ ಶರ್ಮಾ ತಮ್ಮ ನಾಯಕತ್ವವನ್ನು ತ್ಯಜಿಸುವ ಕುರಿತು ಮಾತನಾಡಿದ್ದಾರೆ. ಆದರೆ, ಮುಂದಿನ ಮೂರ್ನಾಲ್ಕು ತಿಂಗಳು ತಂಡದ ನಾಯಕನಾಗಿ ಮುಂದುವರಿಯಲು ಇಚ್ಛಿಸಿದ್ದಾರೆ ಎಂದು ವರದಿಯಾಗಿತ್ತು.

ಸತತ ಬ್ಯಾಟಿಂಗ್ ವೈಫಲ್ಯದಿಂದ ಬಳಲುತ್ತಿರುವ ನಾಯಕ ರೋಹಿತ್ ಶರ್ಮಾ ರಣಜಿಯತ್ತ ಮುಖ ಮಾಡಿದ್ದು, ಮಂಗಳವಾರ ಮುಂಬೈ ತಂಡದೊಂದಿಗೆ ಅಭ್ಯಾಸ ನಡೆಸಿದ್ದಾರೆ. ಜನವರಿ 23 ರಿಂದ ರಣಜಿ ಟ್ರೋಫಿ ಆರಂಭವಾಗಲಿದೆ. 37 ವರ್ಷದ ರೋಹಿತ್ ಶರ್ಮಾ ಅವರು ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಬೆಳಗಿನ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ.

ಬಿಸಿಸಿಐ ಜೊತೆಗಿನ ಸಭೆಯಲ್ಲಿ ಅಜಿತ್ ಅಗರ್ಕರ್ ಮತ್ತು ಭಾರತದ ಮುಖ್ಯ ಕೋಚ್ ಗಂಭೀರ್ ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ರೋಹಿತ್ ಅವರು ಇನ್ನೂ ಕೆಲವು ತಿಂಗಳು ತಂಡದ ನಾಯಕರಾಗಿ ಮುಂದುವರಿಯಲು ಬಯಸುವುದಾಗಿ ಮಂಡಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಂಡಕ್ಕೆ ಹೊಸ ನಾಯಕನಿಗಾಗಿ ಹುಡುಕಾಟ ಮುಂದುವರಿಸುವಂತೆಯೂ ರೋಹಿತ್ ಬಿಸಿಸಿಐಗೆ ಹೇಳಿದ್ದಾರೆ ಎನ್ನಲಾಗಿದೆ.

ರೋಹಿತ್ ಶರ್ಮಾ
BCCI ಪರಿಶೀಲನಾ ಸಭೆ; ಬೇರೆ ನಾಯಕನ ಹುಡುಕುವಂತೆ ರೋಹಿತ್ ಶರ್ಮಾ ಸೂಚನೆ! ಆದರೆ...

ರೋಹಿತ್ ಶರ್ಮಾ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತದ ನಾಯಕನಾಗಿ ಮುಂದುವರೆಯಲು ಬಯಸುತ್ತಾರೆ. ಚಾಂಪಿಯನ್ಸ್ ಟ್ರೋಫಿ ಬಳಿಕ ಆಟಗಾರರು ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳನ್ನು ಸೇರಿಕೊಳ್ಳಲಿದ್ದಾರೆ. ಟಿ20 ಲೀಗ್ ಮುಗಿದ ಬಳಿಕ ಭಾರತ ತಂಡ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಆಗ ರೋಹಿತ್ ಟೆಸ್ಟ್ ತಂಡದ ನಾಯಕರಾಗಿರುತ್ತಾರೆಯೇ ಎಂಬುದು ಸದ್ಯಕ್ಕೆ ತಿಳಿದಿಲ್ಲ.

ಜನವರಿ 23 ರಂದು ರಣಜಿ ಟ್ರೋಫಿ ಪಂದ್ಯಾವಳಿ ಮತ್ತೆ ಆರಂಭವಾಗಲಿದ್ದು ಎಂಸಿಎ-ಬಿಕೆಸಿ ಮೈದಾನದಲ್ಲಿ ಮುಂಬೈ ತಂಡವು ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಸೆಣಸಲಿದೆ. ನಾಕೌಟ್‌ಗೆ ಮುನ್ನಡೆಯುವವರಿಗೆ ಈ ಪಂದ್ಯವು ಮಹತ್ವದ್ದಾಗಿದೆ.

ಮುಂಬೈನ ಮುಂದಿನ ರಣಜಿ ಪಂದ್ಯದಲ್ಲಿ ರೋಹಿತ್ ಆಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. 2015ರಲ್ಲಿ ಉತ್ತರ ಪ್ರದೇಶ ವಿರುದ್ಧ ಮುಂಬೈ ಪರ ಕೊನೆಯ ಬಾರಿ ಆಡಿದ್ದರು.

ರೋಹಿತ್ ಶರ್ಮಾ
ಟೀಂ ಇಂಡಿಯಾಗೆ ಸೋಲಿನ ಆಘಾತ: ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ವಿದಾಯ?

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com