ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ಸಿತಾಂಶು ಕೋಟಕ್ ನೇಮಕ!

ಭಾರತ ತಂಡಕ್ಕೆ ಪ್ರಸ್ತುತ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿದ್ದು, ಅಭಿಷೇಕ್ ನಾಯರ್ (ಸಹಾಯಕ ಕೋಚ್), ರಿಯಾನ್ ಟೆನ್ ಡೋಸ್ಚೇಟ್ (ಸಹಾಯಕ ಕೋಚ್), ಮೊರ್ನೆ ಮೊರ್ಕೆಲ್ (ಬೌಲಿಂಗ್ ಕೋಚ್) ಮತ್ತು ಟಿ ದಿಲೀಪ್ (ಫೀಲ್ಡಿಂಗ್ ಕೋಚ್) ಆಗಿದ್ದಾರೆ.
Sitanshu Kotak
ಸಿತಾಂಶು ಕೋಟಕ್
Updated on

ನವದೆಹಲಿ: ತವರಿನಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೀಮಿತ ಓವರ್‌ಗಳ ಸರಣಿಗೆ ದೇಶೀಯ ಕ್ರಿಕೆಟ್ ದಿಗ್ಗಜ ಸಿತಾಂಶು ಕೋಟಕ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿರ್ಧರಿಸಿದೆ. ಭಾರತ ತಂಡ ತವರಿನಲ್ಲಿ ಐದು T-20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯ ನಂತರ ಈಡನ್ ಗಾರ್ಡನ್ ಮೈದಾನದಲ್ಲಿ ಜನವರಿ 22 ರಂದು ಇಂಗ್ಲೆಂಡ್ ವಿರುದ್ಧದ ಟಿ-20 ಪಂದ್ಯವನ್ನು ಭಾರತ ಆಡಲಿದೆ. ಇದಕ್ಕಾಗಿ ಕೋಲ್ಕತ್ತಾದಲ್ಲಿ ಜನವರಿ 18 ರಿಂದ ಮೂರು ದಿನಗಳ ಅಭ್ಯಾಸ ನಡೆಯಲಿದ್ದು, ಕೋಟಕ್ ಅವರು ಬ್ಯಾಟಿಂಗ್ ಕೋಚ್ ಆಗಿ ಭಾರತ ತಂಡ ಸೇರಲಿದ್ದಾರೆ ಎಂದು ಭಾರತೀಯ ಮಂಡಳಿಯ ಮೂಲಗಳು ತಿಳಿಸಿವೆ.

ಭಾರತ ತಂಡಕ್ಕೆ ಪ್ರಸ್ತುತ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿದ್ದು, ಅಭಿಷೇಕ್ ನಾಯರ್ (ಸಹಾಯಕ ಕೋಚ್), ರಿಯಾನ್ ಟೆನ್ ಡೋಸ್ಚೇಟ್ (ಸಹಾಯಕ ಕೋಚ್), ಮೊರ್ನೆ ಮೊರ್ಕೆಲ್ (ಬೌಲಿಂಗ್ ಕೋಚ್) ಮತ್ತು ಟಿ ದಿಲೀಪ್ (ಫೀಲ್ಡಿಂಗ್ ಕೋಚ್) ಆಗಿದ್ದಾರೆ.

Sitanshu Kotak
Harbhajan Singh: ಟೀಂ ಇಂಡಿಯಾದಲ್ಲಿ ಕನ್ನಡಿಗನಿಗೆ ಅವಕಾಶ ಕೊಡಿ ಎಂದ ಹರ್ಭಜನ್ ಸಿಂಗ್

52ರ ಹರೆಯದ ಮಾಜಿ ಎಡಗೈ ಬ್ಯಾಟರ್ ಕೋಟಕ್ ಸೌರಾಷ್ಟ್ರ ತಂಡದ ನಾಯಕನಾಗಿದ್ದರು. 1992-93ರಿಂದ 2013ರ ತನಕ ದೇಶೀಯ ಕ್ರಿಕೆಟ್‌ನಲ್ಲಿ ಆಡಿದ್ದ ಕೋಟಕ್ ಅವರು 130 ಪ್ರಥಮ ದರ್ಜೆ ಪಂದ್ಯಗಳಲ್ಲಿ 41. 76ರ ಸರಾಸರಿಯಲ್ಲಿ 15 ಶತಕ ಹಾಗೂ 55 ಅರ್ಧ ಶತಕಗಳ ಸಹಿತ 8,061 ರನ್ ಗಳಿಸಿದ್ದಾರೆ. ನಿವೃತ್ತಿ ನಂತರ ಪೂರ್ಣಕಾಲಿಕ ತರಬೇತುದಾರರಾಗಿದ್ದ ಕೋಟಕ್ ಅವರು ಸೌರಾಷ್ಟ್ರ ತಂಡಕ್ಕೆ ಕೋಚಿಂಗ್ ನೀಡಿದ್ದರು. ನಂತರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ಕೋಚ್ ಆಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com