Harbhajan Singh: ಟೀಂ ಇಂಡಿಯಾದಲ್ಲಿ ಕನ್ನಡಿಗನಿಗೆ ಅವಕಾಶ ಕೊಡಿ ಎಂದ ಹರ್ಭಜನ್ ಸಿಂಗ್

ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಕನ್ನಡಿಗ ಕರುಣ್ ನಾಯರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು 664 ಸರಾಸರಿ ಹೊಂದಿದ್ದಾರೆ. ಹೀಗಾಗಿ, ಅವರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡುವಂತೆ ಸಿಂಗ್ ಒತ್ತಾಯಿಸಿದ್ದಾರೆ.
ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್
Updated on

ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ದೇಶೀಯ ಆಟಗಾರರನ್ನು ನಿರ್ಲಕ್ಷಿಸುತ್ತಿರುವ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವಾಗ ದೇಶೀಯ ಕ್ರಿಕೆಟ್‌ನ ಆಟಗಾರರ ಸಾಧನೆಗಳನ್ನು ಕಡೆಗಣಿಸುವ ಅಥವಾ ನಿರ್ಲಕ್ಷಿಸುವುದು ಡಬಲ್ ಸ್ಟ್ಯಾಂಡರ್ಡ್‌ ಪ್ರವೃತ್ತಿಯನ್ನು ತೋರಿಸುತ್ತದೆ. ಐಪಿಎಲ್‌ನಲ್ಲಿ ಪ್ರದರ್ಶನ ನೀಡುವ ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡುವ ದೀರ್ಘಕಾಲದ ಪ್ರವೃತ್ತಿಯಿದೆ. ಆದರೆ, ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಮತ್ತು ಉತ್ತಮ ಪ್ರದರ್ಶನ ನೀಡುತ್ತಿರುವವರನ್ನು ಕಡೆಗಣಿಸಲಾಗುತ್ತಿದೆ ಎಂದಿದ್ದಾರೆ.

ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಕನ್ನಡಿಗ ಕರುಣ್ ನಾಯರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು 664 ಸರಾಸರಿ ಹೊಂದಿದ್ದಾರೆ. ಹೀಗಾಗಿ, ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡುತ್ತಿರುವ ಕರುಣ್ ನಾಯರ್ ಅವರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡುವಂತೆ ಹರ್ಭಜನ್ ಸಿಂಗ್ ಒತ್ತಾಯಿಸಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಸಿಂಗ್, ಒಂದೆರಡು ಪಂದ್ಯಗಳಲ್ಲಿ ಅಥವಾ ಐಪಿಎಲ್‌ನಲ್ಲಿನ ಪ್ರದರ್ಶನದ ಆಧಾರದ ಮೇಲೆ ಇತರ ಆಟಗಾರರನ್ನು ಆಯ್ಕೆ ಮಾಡುವಾಗ ಕರುಣ್‌ ನಾಯರ್ ಅವರಿಗೆ ಮಾತ್ರ ಏಕೆ ನಿಯಮಗಳು ವಿಭಿನ್ನವಾಗಿವೆ ಎಂದು ಪ್ರಶ್ನಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಫಾರ್ಮ್ ಇಲ್ಲದ ಕಾರಣ ರಣಜಿ ಟ್ರೋಫಿಯಲ್ಲಿ ಆಡುವಂತೆ ಹೇಳಲಾಗುತ್ತಿದೆ. ಆದರೆ, ದೇಶೀಯ ರೆಡ್-ಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಇತರರನ್ನು ನಿರ್ಲಕ್ಷಿಸಲಾಗುತ್ತಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ 664 ಸರಾಸರಿ ಹೊಂದಿರುವ ಕರುಣ್ ನಾಯರ್ ಅವರನ್ನು ಕೈಬಿಡುವುದು ಅನ್ಯಾಯ ಎಂದು ಅವರು ಹೇಳಿದರು.

'ಹಲವರನ್ನು ಕೇವಲ ಎರಡು ಪಂದ್ಯಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಕೆಲವರು ಕೇವಲ ಐಪಿಎಲ್ ಆಧಾರದ ಮೇಲೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹಾಗಾದರೆ, ಅವರಿಗೆ (ಕರುಣ್ ನಾಯರ್) ಏಕೆ ನಿಯಮಗಳು ವಿಭಿನ್ನವಾಗಿವೆ? ರೋಹಿತ್ ಮತ್ತು ವಿರಾಟ್ ಕೊಹ್ಲಿ ಫಾರ್ಮ್‌ನಲ್ಲಿಲ್ಲ ಎಂದು ಹೇಳುತ್ತಿದ್ದೀರಿ ಮತ್ತು ಅವರನ್ನು ನೀವು ರಣಜಿಗೆ ಕಳುಹಿಸುತ್ತಿದ್ದೀರಿ. ಹೀಗಿರುವಾಗ ರಣಜಿ ಆಡುತ್ತಿರುವವರು ಮತ್ತು ಉತ್ತಮ ರನ್ ಗಳಿಸುತ್ತಿರುವವರನ್ನು ಏಕೆ ನಿರ್ಲಕ್ಷಿಸುತ್ತಿದ್ದೀರಿ? ಈ ಹುಡುಗರು ಯಾವಾಗ ರಾಷ್ಟ್ರೀಯ ತಂಡದಲ್ಲಿ ಆಡುತ್ತಾರೆ? ಅವರು ಇಲ್ಲಿ ಉತ್ತಮ ರನ್ ಗಳಿಸುತ್ತಿದ್ದಾರೆ ಎಂದಿದ್ದಾರೆ.

ಹರ್ಭಜನ್ ಸಿಂಗ್
BGT ಹೀನಾಯ ಸೋಲು: ಕೋಚ್ Gautam Gambhir ರೆಕ್ಕೆ-ಪುಕ್ಕಕ್ಕೆ ಕತ್ತರಿ; ಹೊಸ ನಿಯಮ ಜಾರಿಗೆ ತಂದ BCCI; ತಂಡಕ್ಕೆ ಮೇಜರ್ ಸರ್ಜರಿ!

ಕರುಣ್ ನಾಯರ್ ಕೊನೆಯದಾಗಿ 2017ರಲ್ಲಿ ಭಾರತಕ್ಕಾಗಿ ಆಡಿದ್ದರು. ನಂತರ ಅವರನ್ನು ನಿರ್ಲಕ್ಷಿಸಲಾಗಿದೆ. 2023ರಲ್ಲಿ ಕರ್ನಾಟಕದಿಂದ ಕೈಬಿಡಲ್ಪಟ್ಟ ನಂತರ, ಅವರು ವಿದರ್ಭಕ್ಕೆ ತೆರಳಿದರು ಮತ್ತು ಇಲ್ಲಿಯವರೆಗೆ ಅಸಾಧಾರಣ ಪ್ರದರ್ಶನವನ್ನು ತೋರಿಸುತ್ತಿದ್ದಾರೆ. ವಿಶೇಷವಾಗಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಅಗ್ರ ರನ್ ಗಳಿಸುವವರಾಗಿ ಹೊರಹೊಮ್ಮಿದ್ದಾರೆ. 2017ರಲ್ಲಿ ಚೆನ್ನೈನಲ್ಲಿ ನಡೆದ 5ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸಿದ್ದರೂ, ನಾಯರ್ ಅವರನ್ನು ತಂಡದಿಂದ ಕೈಬಿಡಲಾಯಿತು. ಇದು ಹಲವರ ಹುಬ್ಬೇರಿಸಿತ್ತು.

'ತ್ರಿಶತಕ ಬಾರಿಸಿದ್ದರೂ, ನಾಯರ್ ಅವರನ್ನು ಹೇಗೆ ಕೈಬಿಡಲಾಯಿತು ಎಂದು ನನಗೆ ಅರ್ಥವಾಗಲಿಲ್ಲ. ಅವರಂತಹ ಆಟಗಾರರ ಬಗ್ಗೆ ಯಾರೂ ಮಾತನಾಡದಿರುವುದು ನನಗೆ ನೋವು ತಂದಿದೆ' ಎಂದು ಸಿಂಗ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com