'ಮಾಸಿಕ ₹ 4 ಲಕ್ಷ ಜೀವನಾಂಶ ಕಡಿಮೆ, ಮತ್ತಷ್ಟು ಕೇಳುತ್ತೇವೆ...': ಮೊಹಮ್ಮದ್ ಶಮಿ ಮಾಜಿ ಪತ್ನಿ ಹಸಿನ್ ಜಹಾನ್; Video

ನ್ಯಾಯಾಲಯದ ಆದೇಶದ ಪ್ರಕಾರ, ಜಹಾನ್ ಅವರಿಗೆ ಮಾಸಿಕ 1.5 ಲಕ್ಷ ರೂಪಾಯಿ ಮತ್ತು ಅವರ ಮಗಳಿಗೆ 2.5 ಲಕ್ಷ ರೂಪಾಯಿಗಳನ್ನು ಪಾವತಿಸಲು ಶಮಿಗೆ ಸೂಚಿಸಲಾಗಿದೆ.
Mohammed Shami - Hasin Jahan
ಮೊಹಮ್ಮದ್ ಶಮಿ ಮತ್ತು ಅವರ ಪತ್ನಿ ಹಸೀನ್ ಜಹಾನ್
Updated on

ಭಾರತೀಯ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ ಅವರು ತಮ್ಮ ಪರಿತ್ಯಕ್ತ ಪತ್ನಿ ಹಸಿನ್ ಜಹಾನ್ ಮತ್ತು ಅವರ ಮಗಳಿಗೆ ಪ್ರತಿ ತಿಂಗಳು 4 ಲಕ್ಷ ರೂಪಾಯಿ ಮಧ್ಯಂತರ ಜೀವನಾಂಶ ನೀಡುವಂತೆ ಕೊಲ್ಕತ್ತ ಹೈಕೋರ್ಟ್ ಆದೇಶಿಸಿದೆ. ಆರು ವರ್ಷಗಳಿಗೂ ಹೆಚ್ಚು ಕಾಲ ನಡೆದ ಕಾನೂನು ಹೋರಾಟದ ಬಳಿಕ ಕೋರ್ಟ್ ಇದೀಗ ಜೀವನಾಂಶ ನೀಡುವಂತೆ ತಿಳಿಸಿದೆ.

ನ್ಯಾಯಾಲಯದ ಆದೇಶದ ಪ್ರಕಾರ, ಜಹಾನ್ ಅವರಿಗೆ ಮಾಸಿಕ 1.5 ಲಕ್ಷ ರೂಪಾಯಿ ಮತ್ತು ಅವರ ಮಗಳಿಗೆ 2.5 ಲಕ್ಷ ರೂಪಾಯಿಗಳನ್ನು ಪಾವತಿಸಲು ಶಮಿಗೆ ಸೂಚಿಸಲಾಗಿದೆ. ಇದಕ್ಕೂ ಮೊದಲು, ಜಹಾನ್ ಶಮಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದರು.

ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹಸಿನ್ ಜಹಾನ್, 'ಶಮಿ ಅವರ ಜೀವನಶೈಲಿಯನ್ನು ನೋಡಿದರೆ, 4 ಲಕ್ಷ ರೂಪಾಯಿ ಕಡಿಮೆ. ನಾಲ್ಕು ವರ್ಷಗಳ ಹಿಂದೆ ನಾವು 10 ಲಕ್ಷ ರೂಪಾಯಿ ಕೇಳಿದ್ದೆವು. ಈಗ ಜೀವನ ವೆಚ್ಚ ಹೆಚ್ಚಾಗಿದೆ. ನಾವು ಅದನ್ನು ಮತ್ತೆ ಒತ್ತಾಯಿಸುತ್ತೇವೆ. ಈ ತೀರ್ಪು ನನಗೆ ಸಿಕ್ಕ ದೊಡ್ಡ ಗೆಲುವು. ಇಮ್ತಿಯಾಜ್ ಭಾಯ್ (ಜಹಾನ್ ಅವರ ವಕೀಲ) ಮತ್ತು ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಾಧೀಶರಿಗೆ ನಾನು ಕೃತಜ್ಞನಾಗಿದ್ದೇನೆ. ಆದರೆ, ಮಗಳನ್ನು ನೋಡಿಕೊಳ್ಳಲು ಮತ್ತು ಅವಳ ಅಗತ್ಯಗಳನ್ನು ಪೂರೈಸಲು ನಮಗೆ ಇನ್ನೂ ಹೆಚ್ಚಿನ ಹಣ ಸಿಗಬೇಕು ಎಂದು ನಾನು ಭಾವಿಸುತ್ತೇನೆ' ಎಂದು ಜಹಾನ್ ಹೇಳಿದರು.

ಹಸಿನ್ ಜಹಾನ್‌ಗೆ ಇದು "ಅತ್ಯುತ್ತಮ ಕ್ಷಣ"ವಾಗಿದೆ. ಶಮಿ ಜಹಾನ್‌ ಅವರಿಗೆ ಮಾಸಿಕ 4 ಲಕ್ಷ ರೂಪಾಯಿ ಜೀವನಾಂಶ ನೀಡಬೇಕಾಗುತ್ತದೆ ಮತ್ತು ಇದು 6 ಲಕ್ಷ ರೂಪಾಯಿಗಳಿಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಹಾನ್ ಪರ ವಕೀಲ ಇಮ್ತಿಯಾಜ್ ಅಹ್ಮದ್ ಬುಧವಾರ ಹೇಳಿದರು.

2018 ರಿಂದ 2024 ರವರೆಗೆ ಹಸಿನ್ ಜಹಾನ್ ನ್ಯಾಯ ಅಥವಾ ಪರಿಹಾರವನ್ನು ಪಡೆಯಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದರು. ನಿನ್ನೆ ಮುಕ್ತ ನ್ಯಾಯಾಲಯದಲ್ಲಿ ಹಸಿನ್ ಜಹಾನ್ ಅವರಿಗೆ ಮಾಸಿಕ 1.5 ಲಕ್ಷ ಮತ್ತು ಮಗಳಿಗೆ 2.5 ಲಕ್ಷ ರೂ. ನೀಡುವಂತೆ ಸೂಚಿಸಿದೆ. ಇದಲ್ಲದೆ ಮಗಳಿಗೆ ಯಾವುದೇ ಸಮಯದಲ್ಲಿ ಸಹಾಯದ ಅಗತ್ಯವಿದ್ದರೆ, ಅದನ್ನು ಮೊಹಮ್ಮದ್ ಶಮಿ ಒದಗಿಸುತ್ತಾರೆ' ಎಂದು ಹೇಳಿದರು.

'ಮಧ್ಯಂತರ ಆದೇಶದ ಮುಖ್ಯ ಅರ್ಜಿಯನ್ನು ಆರು ತಿಂಗಳೊಳಗೆ ವಿಲೇವಾರಿ ಮಾಡುವಂತೆ ಹೈಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ. ವಿಚಾರಣಾ ನ್ಯಾಯಾಲಯವು ಜೀವನಾಂಶ ಪ್ರಕರಣದ ವಿಚಾರಣೆ ಪುನರಾರಂಭಿಸಿ ಮುಕ್ತಾಯಗೊಳಿಸಿದಾಗ, ಜೀವನಾಂಶದ ಮೊತ್ತವನ್ನು ₹6 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಏಕೆಂದರೆ, ಹಸಿನ್ ಜಹಾನ್ ಮೂಲತಃ ತಮ್ಮ ನಿರ್ವಹಣಾ ಅರ್ಜಿಗಳಲ್ಲಿ ₹7 ಲಕ್ಷ ಮತ್ತು ₹3 ಲಕ್ಷವನ್ನು ಕೇಳಿದ್ದರು' ಎಂದು ಅವರು ಹೇಳಿದರು.

Mohammed Shami - Hasin Jahan
ಕಾನೂನು ಹೋರಾಟದಲ್ಲಿ ಕ್ರಿಕೆಟಿಗ ಮೊಹಮದ್ ಶಮಿಗೆ ಹಿನ್ನಡೆ: ಪತ್ನಿ, ಮಗಳ ಜೀವನ ನಿರ್ವಹಣೆಗೆ ಮಾಸಿಕ 4 ಲಕ್ಷ ರೂ ನೀಡಲು ಕೋರ್ಟ್ ಆದೇಶ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com