
ಎಡ್ಜ್ ಬ್ಯಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ನಿರ್ಣಾಯಕ ಘಟ್ಟದತ್ತ ಸಾಗಿದ್ದು ಮೂರನೇ ದಿನದಾಟದ ಸಂದರ್ಭದಲ್ಲಿ ಮೈದಾನದಲ್ಲಿ ಕೆಲ ಕುತೂಹಲಕಾರಿ ಘಟನೆಗಳು ನಡೆಯಿತು.
ಹೌದು.. ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಉಪನಾಯಕ ರಿಷಭ್ ಪಂತ್ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಕೊಡುಗೆ ನೀಡಲಿಲ್ಲ. ಆದರೆ ಇಡೀ ಟೆಸ್ಟ್ ಪಂದ್ಯದ ಉದ್ದಕ್ಕೂ ಸ್ಟಂಪ್ ಹಿಂದೆ ನಿಂತು ಪಂತ್ ಎದುರಾಳಿ ಆಟಗಾರರ ಕಂಗೆಡಿಸುತ್ತಾರೆ.
ಆದಾಗ್ಯೂ, ನಿಯೋಜಿತ ನಾಯಕ ಶುಭ್‌ಮನ್ ಗಿಲ್ ಮೈದಾನದಲ್ಲಿ ಇಲ್ಲದಿದ್ದಾಗ ಅವರು ಸ್ಟಂಪ್‌ಗಳ ಹಿಂದೆ ಮತ್ತು ಹಂಗಾಮಿ ನಾಯಕರಾಗಿ ಪ್ರಭಾವಶಾಲಿಯಾಗಿದ್ದರು.
ನಾಯಕ ಶುಭ್ ಮನ್ ಗಿಲ್ ವಿರಾಮ ಪಡೆದಿದ್ದ ವೇಳೆ ಉಪ ನಾಯಕ ರಿಷಬ್ ಪಂತ್ ಸ್ವಲ್ಪ ಸಮಯದವರೆಗೆ ಮುನ್ನಡೆಸಿದರು.
DRS ಪಡೆದ Rishabh Pant ಅಂಪೈರ್ ನಿರ್ಧಾರಕ್ಕೆ ಬೇಸ್ತು ಬಿದ್ದ ಇಂಗ್ಲೆಂಡ್ ಆಟಗಾರರು!
ವಾಸ್ತವವಾಗಿ, ಮೊಹಮ್ಮದ್ ಸಿರಾಜ್ ತಮ್ಮ ನಾಲ್ಕನೇ ವಿಕೆಟ್ ಪಡೆಯಲು ಸಹಾಯ ಮಾಡುವಲ್ಲಿ ರಿಷಬ್ ಪಂತ್ ನಿರ್ಣಾಯಕ ಪಾತ್ರ ವಹಿಸಿದರು. ಗಿಲ್ ಅನುಪಸ್ಥಿತಿಯಲ್ಲಿ ಸಿರಾಜ್ ಎಸೆದ 88ನೇ ಓವರ್‌ನ ಐದನೇ ಎಸೆತದಲ್ಲಿ ಇಂಗ್ಲೆಂಡ್ ನ ಬ್ರೈಡನ್ ಕಾರ್ಸೆ ಪ್ಯಾಡ್ ಗೆ ಚೆಂಡು ಬಡಿದಿತ್ತು. ಈ ವೇಳೆ ಸಿರಾಜ್ ಅದನ್ನು ಎಲ್‌ಬಿಡಬ್ಲ್ಯೂ ಎಂದು ಭಾವಿಸಿ ದೊಡ್ಡ ಮನವಿ ಮಾಡಿದರು. ಆದರೆ ಅಂಪೈರ್ ಇಲ್ಲ ಎಂದು ಹೇಳಿದರು.
ಈ ವೇಳೆ ಚೆಂಡು ಮೊದಲು ಪ್ಯಾಡ್‌ಗೆ ತಗುಲಿದೆ ಎಂದು ಪಂತ್‌ಗೆ ಮನವರಿಕೆಯಾಯಿತು. ಅವರು ಕೂಡಲೇ DRS ಪಡೆದರು. ಡಿಆರ್ ಎಸ್ ರಿವ್ಯೂನಲ್ಲಿ ಚೆಂಡು ಲೆಗ್ ಸ್ಟಂಪ್‌ಗೆ ತಗುಲಿದೆ ಎಂದು ತೋರಿಸಿತ್ತು. ಬಳಿಕ ಅದು ಎಲ್ ಬಿ ಎಂದು ಥರ್ಡ್ ಅಂಪೈರ್ ತೀರ್ಪು ನೀಡಿದರು. ಈ ವೇಳೆ ಸಿರಾಜ್ ಸಂತೋಷಗೊಂಡು ವಿಕೆಟ್ ಪಡೆದ ಸಂಭ್ರಮಾಚರಣೆ ಮಾಡಿದರು.
ಇನ್ನು ಅದು ನಾಟ್ ಔಟ್ ಎಂದು ಭಾವಿಸಿದ್ದ ಇಂಗ್ಲೆಂಡ್ ಆಟಗಾರರು ಕೆಲ ಕ್ಷಣಗಳ ಕಾಲ ಆಘಾತಕ್ಕೊಳಗಾದರು.
"ವಾಸ್ತವವಾಗಿ ರಿಷಭ್ ಪಂತ್ ಅವರೇ ರಿವ್ಯೂ ಪಡೆದರು. ವಾಸ್ತವವಾಗಿ ಅದು ಪಂತ್ ರ ಉತ್ತಮ ನಿರ್ಣಯವಾಗಿತ್ತು ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ನಾಸರ್ ಹುಸೇನ್ ವೀಕ್ಷಕ ವಿವರಣೆ ವೇಳೆ ಹೇಳಿದರು.
Advertisement