
ಐಪಿಎಲ್ 2025ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ 14 ವರ್ಷದ ವೈಭವ್ ಸೂರ್ಯವಂಶಿ ವೇಗದ ಶತಕ ಗಳಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ವೈಭವ್ ಸೂರ್ಯವಂಶಿ ಇದೀಗ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಯೂತ್ ಏಕದಿನ ಪಂದ್ಯದಲ್ಲಿ ಅತ್ಯಂತ ವೇಗದ ಶತಕ ಸಿಡಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ 52 ಎಸೆತಗಳ ಶತಕ ಸಿಡಿಸಿ ದಾಖಲೆ ಬರೆದರು. 78 ಎಸೆತಗಳಲ್ಲಿ 143 ರನ್ ಗಳಿಸಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಅವರು, ಶುಭಮನ್ ಗಿಲ್ ಅವರಿಂದ ಸ್ಪೂರ್ತಿ ಪಡೆದಿದ್ದಾಗಿ ತಿಳಿಸಿದ್ದಾರೆ.
ಬಿಸಿಸಿಐ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ, 14 ವರ್ಷದ ಆಟಗಾರ ತಾನು ನಾಯಕ ಗಿಲ್‌ನಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಒಂದು ಶತಕ ಮತ್ತು ದ್ವಿಶತಕ ಗಳಿಸಿದರೂ ಗಿಲ್ ತನ್ನ ಆರ್ಭಟವನ್ನು ನಿಲ್ಲಿಸಲಿಲ್ಲ ಮತ್ತು ತಂಡವನ್ನು ಮುನ್ನಡೆಸಿದರು ಎಂದು ಹೇಳಿದರು. ವೈಭವ್ ಅವರು U19 ಪಂದ್ಯದಲ್ಲಿ 143 ರನ್‌ಗಳಿಗೆ ನಿರ್ಗಮಿಸಿದ್ದಕ್ಕಾಗಿ ವಿಷಾದಿಸಿದರು. ತನ್ನ ಬಳಿ ಸಾಕಷ್ಟು ಸಮಯವಿತ್ತು. ಆದರೆ, ತನ್ನ 100% ಅನ್ನು ನೀಡಲು ಸಾಧ್ಯವಾಗದ ಒಂದು ಶಾಟ್ ನನ್ನ ಇನಿಂಗ್ಸ್ ಅನ್ನು ಕೊನೆಗೊಳಿಸಿತು ಎಂದರು.
'ನಾನು ಅವರಿಂದ (ಗಿಲ್) ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ. ಏಕೆಂದರೆ, ನಾನು ಅವರ ಆಟವನ್ನು ನೋಡಿದೆ. 100 ಮತ್ತು 200 ಗಳಿಸಿದ ನಂತರವೂ ಅವರು ಉತ್ತಮವಾಗಿ ಆಡಿದರು ಮತ್ತು ತಂಡವನ್ನು ಮುಂದಕ್ಕೆ ಕೊಂಡೊಯ್ದರು. ನನಗೆ ಸಾಕಷ್ಟು ಸಮಯ ಉಳಿದಿದ್ದರಿಂದ ನಾನು ಹೆಚ್ಚು ಸಮಯ ಆಡಬಹುದೆಂದು ನನ್ನ ಮನಸ್ಸಿನಲ್ಲಿತ್ತು. ಆದರೆ, ಒಂದು ಶಾಟ್ ಆಡಲು ಪ್ರಯತ್ನಿಸಿ ಔಟಾದೆ. ಇಲ್ಲದಿದ್ದರೆ ನಾನು ಅವರಂತೆ (ಗಿಲ್) ಹೆಚ್ಚು ಆಡಲು ಪ್ರಯತ್ನಿಸುತ್ತೇನೆ' ಎಂದು ಸೂರ್ಯವಂಶಿ ಹೇಳಿದರು.
ಮುಂದೇನು ಎಂದು ಕೇಳಿದಾಗ, ತನ್ನ ಮುಂದಿನ ಗುರಿ ದ್ವಿಶತಕ ಗಳಿಸುವುದಾಗಿದೆ. ಮುಂದಿನ ಪಂದ್ಯದಲ್ಲಿ ಸಂಪೂರ್ಣ 50 ಓವರ್‌ಗಳನ್ನು ಆಡಲು ಪ್ರಯತ್ನಿಸುತ್ತೇನೆ. ನಾನು ಹೆಚ್ಚು ರನ್ ಗಳಿಸಿದರೆ ತಂಡಕ್ಕೆ ಹೆಚ್ಚು ಲಾಭವಾಗುತ್ತದೆ ಎಂದು ಹೇಳಿದರು.
ಭಾರತ U19 ಈಗಾಗಲೇ ಇಂಗ್ಲೆಂಡ್ U19 ವಿರುದ್ಧದ ಸರಣಿಯನ್ನು ಗೆದ್ದಿದೆ, ಇನ್ನೂ ಒಂದು ಪಂದ್ಯ ಬಾಕಿ ಉಳಿದಿದೆ.
ಇಂಗ್ಲೆಂಡ್ U19 ವಿರುದ್ಧದ 4ನೇ ಯೂತ್ ODIನಲ್ಲಿ ಟ್ರಿಪಲ್ ಶತಕ ಗಳಿಸಲು ಸೂರ್ಯವಂಶಿ ಕೇವಲ 52 ಎಸೆತಗಳನ್ನು ತೆಗೆದುಕೊಂಡರು. ಈ ವೇಳೆ 14 ಬೌಂಡರಿಗಳು ಮತ್ತು 10 ಸಿಕ್ಸರ್‌ಗಳ ನೆರವಿನಿಂದ 143 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
Advertisement