India vs England: ಆಂಗ್ಲರ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ; Shubman Gill ಹೆಸರಿಗೆ ದಾಖಲೆಗಳ ಸುರಿಮಳೆ!

2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿದ್ದ 608ರನ್ ಗಳ ಬೃಹತ್ ಗುರಿಯನ್ನು ಬೆನ್ನುಹತ್ತಿದ ಇಂಗ್ಲೆಂಡ್ ತಂಡ ಕೇವಲ 271 ರನ್ ಗಳಿಗೇ ಆಲೌಟ್ ಆಗುವ ಮೂಲಕ 336 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
Shubman Gill
ಶುಭ್ ಮನ್ ಗಿಲ್ ನೂತನ ದಾಖಲೆ
Updated on

ಎಡ್ಜ್ ಬ್ಯಾಸ್ಟನ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 336 ರನ್ ಗಳ ಬೃಹತ್ ಜಯಭೇರಿ ಭಾರಿಸಿದ ಭಾರತ ತಂಡ ಈ ಐತಿಹಾಸಿಕ ಜಯದ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದೆ.

ಹೌದು.. ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಿನ್ನೆ ಮುಕ್ತಾಯವಾದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿದ್ದ 608ರನ್ ಗಳ ಬೃಹತ್ ಗುರಿಯನ್ನು ಬೆನ್ನುಹತ್ತಿದ ಇಂಗ್ಲೆಂಡ್ ತಂಡ ಕೇವಲ 271 ರನ್ ಗಳಿಗೇ ಆಲೌಟ್ ಆಗುವ ಮೂಲಕ 336 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

ಅಂತೆಯೇ ಈ ಅದ್ಭುತ ಗೆಲುವಿನ ಮೂಲಕ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಕೂಡ ಕ್ರಿಕೆಟ್ ಲೋಕದ ಅತ್ಯಪರೂಪದ ದಾಖಲೆಗಳಿಗೆ ಪಾತ್ರರಾದರು.

ವಿದೇಶಿ ನೆಲದಲ್ಲಿ ಟೆಸ್ಟ್ ಪಂದ್ಯ ಗೆದ್ದ ಕಿರಿಯ ನಾಯಕ

ನಿನ್ನೆಯ ಗೆಲುವಿನೊಂದಿಗೆ ಭಾರತ ತಂಡದ ನಾಯಕ ವಿದೇಶಿ ನೆಲದಲ್ಲಿ ಟೆಸ್ಟ್ ಪಂದ್ಯ ಗೆದ್ದ ಕಿರಿಯ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ನಿನ್ನೆಗೆ ಶುಭ್ ಮನ್ ಗಿಲ್ ವಯಸ್ಸು 25 ವರ್ಷ 301 ದಿನಗಳಾಗಿದ್ದು ಆ ಮೂಲಕ ವಿದೇಶಿ ನೆಲದಲ್ಲಿ ಟೆಸ್ಟ್ ಪಂದ್ಯ ಗೆದ್ದ ಕಿರಿಯ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸುನಿಲ್ ಗವಾಸ್ಕರ್ ಹೆಸರಲ್ಲಿತ್ತು. 1976ರಲ್ಲಿ ಗವಾಸ್ಕರ್ ನೇತೃತ್ವದ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಆಕ್ಲೆಂಡ್ ನಲ್ಲಿ ಸೋಲಿಸಿತ್ತು. ಅಂದಿಗೆ ಗವಾಸ್ಕರ್ ವಯಸ್ಸು 26 ವರ್ಷ 202 ದಿನಗಳಾಗಿತ್ತು.

Aged 25 years & 301 days, Shubman Gill becomes the youngest Indian captain to win a Test overseas; the previous youngest being Sunil Gavaskar (26y 202d) vs NZ in Auckland in 1976.

Shubman Gill
South Africa vs Zimbabwe: ಇತಿಹಾಸ ನಿರ್ಮಿಸಿದ Wiaan Mulder; ನಾಯಕನಾಗಿ ಚೊಚ್ಚಲ ತ್ರಿಶತಕ; Hashim Amla ದಾಖಲೆ ಪತನ!

ಒಂದು ಗೆಲುವಿಗಾಗಿ ಅತೀ ಹೆಚ್ಚು ಪಂದ್ಯಗಳನ್ನು ತೆಗೆದುಕೊಂಡ ತಂಡ

ಇದೇ ವೇಳೆ ಭಾರತ ಮತ್ತೊಂದು ಅಪರೂಪದ ದಾಖಲೆಗೆ ಪಾತ್ರವಾಗಿದ್ದು, ಮೈದಾನವೊಂದರಲ್ಲಿ ಚೊಚ್ಚಲ ಗೆಲುವಿಗಾಗಿ ಅತೀ ಹೆಚ್ಚು ಪಂದ್ಯಗಳನ್ನು ತೆಗೆದುಕೊಂಡ ತಂಡ ಎಂಬ ಕುಖ್ಯಾತಿಗೂ ಪಾತ್ರವಾಗಿದೆ.

ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ಭಾರತ ಒಟ್ಟು 19 ಬಾರಿ ಕಣಕ್ಕಿಳಿದಿದ್ದು ಈ ಪೈಕಿ 1 ಪಂದ್ಯ ಅಂದರೆ ನಿನ್ನೆ ಮುಕ್ತಾಯವಾದ ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇದಕ್ಕೂ ಮೊದಲು ಪಾಕಿಸ್ತಾನ ತಂಡ ಲಾರ್ಡ್ಸ್ ಕ್ರೀಡಾಂಗಣದಲ್ಲಿ 17 ಪಂದ್ಯಗಳ ಬಳಿಕ 1982ರಲ್ಲಿ ಚೊಚ್ಚಲ ಗೆಲುವು ದಾಖಲಿಸಿತ್ತು.

Most Tests taken by Asian teams to register maiden win at an away venue

  • 19 Edgbaston, Birmingham (India, 2025) *

  • 17 Lord's, London (Pakistan, 1982)

  • 17 Kensington Oval, Bridgetown (Sri Lanka, 2018)

  • 16 Gabba, Brisbane (India, 2021)

  • 15 Newlands, Cape Town (India, 2024)

ವಿದೇಶದಲ್ಲಿ ಅತೀದೊಡ್ಡ ಗೆಲುವು

ಇನ್ನು ನಿನ್ನೆ ಭಾರತ ತಂಡ ಸಾಧಿಸಿದ 336 ರನ್ ಗಳ ಗೆಲುವು ವಿದೇಶದಲ್ಲಿ ತಂಡಕ್ಕೆ ಸಿಕ್ಕ ಅತೀ ದೊಡ್ಡ ಗೆಲುವಾಗಿದೆ. ಈ ಹಿಂದೆ 2019ರಲ್ಲಿ ಭಾರತ ತಂಡ ವಿಂಡೀಸ್ ವಿರುದ್ಧ ನಾರ್ಥ್ ಸೌಂಡ್ ನಲ್ಲಿ 318ರನ್ ಗಳ ಅಂತರದ ಗೆಲುವು ಸಾಧಿಸಿತ್ತು. ಇದೀಗ ಈ ದಾಖಲೆಯನ್ನು ಮೀರುವಂತೆ 336 ರನ್ ಗಳ ಬೃಹತ್ ಗೆಲುವು ಸಾಧಿಸಿದೆ.

Biggest away wins for India (by runs)

  • 336 vs Eng Birmingham 2025

  • 318 vs WI North Sound 2019

  • 304 vs SL Galle 2017

  • 295 vs Aus Perth 2024

  • 279 vs Eng Leeds 1986

Shubman Gill
India vs England: Shubman Gill 'ಮಹಾ ಎಡವಟ್ಟು'; 250 ಕೋಟಿ ರೂ ನಷ್ಟ ಸಾಧ್ಯತೆ?; BCCIಗೂ ಸಂಕಷ್ಟ!

ಆಕಾಶ್ ದೀಪ್ ದಾಖಲೆ

ಇದೇ ವೇಳೆ ಇಂಗ್ಲೆಂಡ್ ಕುಸಿತಕ್ಕೆ ಪ್ರಮುಖ ಕಾರಣರಾದ ಭಾರತ ತಂಡದ ವೇಗಿ ಆಕಾಶ್ ದೀಪ್ ಅಪರೂಪದ ದಾಖಲೆಗೆ ಪಾತ್ರರಾಗಿದ್ದು, ಆಕಾಶ್ ಸಿಂಗ್ 2ನೇ ಟೆಸ್ಟ್ ಪಂದ್ಯದಲ್ಲಿ 187 ರನ್ ನೀಡಿ 10 ವಿಕೆಟ್ ಕಬಳಿಸಿದ್ದು, ವಿದೇಶಿ ನೆಲದಲ್ಲಿ ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಇದಾಗಿದೆ. ಇದಕ್ಕೂ ಮೊದಲು 1986ರಲ್ಲಿ ಭಾರತದ ಚೇತನ್ ಶರ್ಮಾ ಇಂಗ್ಲೆಂಡ್ ವಿರುದ್ಧ ಇದೇ ಬರ್ಮಿಂಗ್ ಹ್ಯಾಮ್ ನಲ್ಲಿ 188 ರನ್ ನೀಡಿ 10 ವಿಕೆಟ್ ಕಬಳಿಸಿದ್ದರು.

Best match figures for India in England

  • 10/187 Akash Deep Birmingham 2025

  • 10/188 Chetan Sharma Birmingham 1986

  • 9/110 Jasprit Bumrah Trent Bridge 2021

  • 9/134 Zaheer Khan Trent Bridge 2007

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com