South Africa vs Zimbabwe: ಇತಿಹಾಸ ನಿರ್ಮಿಸಿದ Wiaan Mulder; ನಾಯಕನಾಗಿ ಚೊಚ್ಚಲ ತ್ರಿಶತಕ; Hashim Amla ದಾಖಲೆ ಪತನ!

ಬುಲವಾಯೋದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, ಕೇವಲ 5 ವಿಕೆಟ್ ನಷ್ಟಕ್ಕೆ 626 ರನ್ ಪೇರಿಸಿದೆ.
Wiaan Mulder hits triple century
ವಿಯಾನ್ ಮುಲ್ಡರ್ ತ್ರಿಶತಕ
Updated on

ಬುಲವಾಯೋ: ಜಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ವಿಯಾನ್ ಮುಲ್ಡರ್ ಇತಿಹಾಸ ನಿರ್ಮಿಸಿದ್ದು, ಚೊಚ್ಚಲ ತ್ರಿಶತಕ ಸಿಡಿಸಿದ್ದಾರೆ.

ಬುಲವಾಯೋದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, ಕೇವಲ 5 ವಿಕೆಟ್ ನಷ್ಟಕ್ಕೆ 626 ರನ್ ಪೇರಿಸಿದೆ.

ಟಾಸ್ ಗೆದ್ದ ಜಿಂಬಾಬ್ವೆ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಘಾತದ ಹೊರತಾಗಿಯೂ ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿತು.

ಕೇವಲ 11 ರನ್ ಗಳಿಗೆ ಆರಂಭಿಕ ಆಟಗಾರ ಟೋನಿ ಡಿ ಜೋರ್ಜಿ 10 ರನ್ ಗಳಿಸಿ ಔಟಾದರೆ ಮತ್ತೋರ್ವ ಆರಂಭಿಕ ಆಟಗಾರ ಲೆಸೆಗೊ ಸೆನೋಕ್ವಾನೆ (Lesego Senokwane) ಕೇವಲ 3 ರನ್ ಗಳಿಸಿ ಎಲ್ ಬಿ ಬಲೆಗೆ ಬಿದ್ದರು. ಈ ಹಂತದಲ್ಲಿ ಜೊತೆಗೂಡಿದ ನಾಯತ ವಿಯಾನ್ ಮುಲ್ಡರ್ ಮತ್ತು ಡೇವಿಡ್ ಬೆಡಿಂಗ್ಹ್ಯಾಮ್ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು.

3ನೇ ವಿಕೆಟ್ ಗೆ ಈ ಜೋಡಿ 184 ರನ್ ಗಳ ಅಮೋಘ ಜೊತೆಯಾಟ ನೀಡಿತು. ಈ ಹಂತದಲ್ಲಿ 82 ರನ್ ಗಳಿಸಿದ್ದ ಡೇವಿಡ್ ಬೆಡಿಂಗ್ಹ್ಯಾಮ್ ಚಿವಾಂಗ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಬಳಿಕ ನಾಯಕ ಮುಲ್ಜರ್ ಜೊತೆ ಗೂಡಿದ ಲ್ಹುವಾನ್-ಡ್ರೆ ಪ್ರಿಟೋರಿಯಸ್ ಕೂಡ ಉತ್ತಮ ಸಾಥ್ ನೀಡಿದರು. 4ನೇ ವಿಕೆಟ್ ಗೆ ಈ ಜೋಡಿ 217 ರನ್ ಪೇರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು.

Wiaan Mulder hits triple century
India vs England: Shubman Gill 'ಮಹಾ ಎಡವಟ್ಟು'; 250 ಕೋಟಿ ರೂ ನಷ್ಟ ಸಾಧ್ಯತೆ?; BCCIಗೂ ಸಂಕಷ್ಟ!

ನಾಯಕ ಮುಲ್ಡರ್ ತ್ರಿಶತಕ

ಇನ್ನು ದಕ್ಷಿಣ ಆಫ್ರಿಕಾ ತಂಡ ಬೃಹತ್ ಮೊತ್ತದಲ್ಲಿ ಸಿಂಹಪಾಲು ನಾಯಕ ವಿಯಾನ್ ಮುಲ್ಡರ್ ಅವರದ್ದು. ಮುಲ್ಡರ್ ಕೇವಲ 334 ಎಸೆತಗಳಲ್ಲಿ 367 ರನ್ ಚಚ್ಚಿದ್ದಾರೆ. ಆ ಮೂಲಕ ತ್ರಿಶಕ ಸಿಡಿಸಿದ ದಕ್ಷಿಣ ಆಫ್ರಿಕಾದ ಮೊದಲ ನಾಯಕ ಎಂಬ ಕೀರ್ತಿಗೂ ಮುಲ್ಡರ್ ಪಾತ್ರರಾಗಿದ್ದಾರೆ. ಈ ಹಿಂದೆ ಗ್ರೇಮ್ ಸ್ಮಿತ್ ಗಳಿಸಿದ್ದ 277 ರನ್ ಗಳೇ ಆಫ್ರಿಕಾ ತಂಡದ ನಾಯಕ ವೈಯುಕ್ತಿಕ ಗರಿಷ್ಠ ಮೊತ್ತವಾಗಿತ್ತು. ಇದೀಗ ಮುಲ್ಜರ್ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಅಂತೆಯೇ ಮುಲ್ಡರ್ ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಈ ಹಿಂದೆ ಈ ದಾಖಲೆ ಪಾಕಿಸ್ತಾನದ ಹನೀಫ್ ಮೊಹಮದ್ ಅವರ ಹೆಸರಲ್ಲಿತ್ತು. ಹನೀಫ್ 1958ರಲ್ಲಿ ವಿಂಡೀಸ್ ವಿರುದ್ಧ 337ರನ್ ಸಿಡಿಸಿದ್ದರು.

Highest individual scores in away Tests

  • 342* - Wiaan Mulder (SA) vs ZIM, Bulawayo, 2025

  • 337 - Hanif Mohammad (PAK) vs WI, Barbados, 1958

  • 336* - Wally Hammond (ENG) vs NZ, Auckland, 1933

  • 334* - Mark Taylor (AUS) vs PAK, Peshawar, 1998

  • 334 - Sir Don Bradman (AUS) vs ENG, Headingley, 1930

STAT:Mulder now has the highest aggregate by a South Africa batter in a Test, surpassing Graeme Smith’s 362 (277 & 85) against England at Edgbaston in 2003.

Wiaan Mulder hits triple century
India vs England: Virat Kohli ಯ ಸಾರ್ವಕಾಲಿಕ ದಾಖಲೆ ಮುರಿದ ನಾಯಕ Shubman Gill

2ನೇ ವೇಗದ ತ್ರಿಶತಕ

ಇದೇ ವೇಳೆ ವಿಯಾನ್ ಮುಲ್ಡರ್ ಟೆಸ್ಟ್ ಕ್ರಿಕೆಟ್ ನಲ್ಲಿ 2ನೇ ವೇಗದ ತ್ರಿಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಈ ಹಿಂದೆ 2008ರಲ್ಲಿ ಭಾರತದ ವಿರೇಂದ್ರ ಸೆಹ್ವಾಗ್ ಇದೇ ದಕ್ಷಿಣ ಆಫ್ರಿಕಾ ವಿರುದ್ಧ 278 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದಾರೆ. ಇದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

Fastest triple centuries in Tests

  • 278 balls – Virender Sehwag, IND vs SA – 2008

  • 297 balls – Wiaan Mulder, SA vs ZIM – 2025

  • 310 balls – Harry Brook, ENG vs PAK – 2024

  • 362 balls – Matthew Hayden, AUS vs ZIM – 2003

Hashim Amla-ಗ್ರಹಾಂ ಡೌಲಿಂಗ್ ದಾಖಲೆ ಪತನ

ಇದೇ ವೇಳೆ ತ್ರಿಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಚೊಚ್ಚಲ ನಾಯಕ ಎಂಬ ಕೀರ್ತಿಗೂ ಮುಲ್ಡರ್ ಪಾತ್ರರಾಗಿದ್ದು, ಮಾತ್ರವಲ್ಲದೇ ಹಶೀಂ ಆಮ್ಲಾ ಬಳಿಕ ದಕ್ಷಿಣ ಆಫ್ರಿಕಾ ಪರ ತ್ರಿಶತಕ ಸಿಡಿಸಿದ 2ನೇ ಆಟಗಾರ ಎಂಬ ಕೀರ್ತಿಗೂ ಭಾಜನಾರಾದರು. ಅಂತೆಯೇ ತ್ರಿಶತಕ ಸಿಡಿಸಿದ ಅತ್ಯಂತ ಕಿರಿಯ ನಾಯಕ ಎಂಬ ಕೀರ್ತಿಗೂ ಮುಲ್ಡರ್ ಪಾತ್ರರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com