'Non-Greasy ಹ್ಯಾಂಡ್ ಸ್ಯಾನಿಟೈಸರ್ ತರುವೆ ಎಂದಿದ್ದ ಗಿಲ್': ಮೊದಲ ಟೆಸ್ಟ್‌ನಲ್ಲಿ ಭಾರತದ ಕಳಪೆ ಫೀಲ್ಡಿಂಗ್ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು?

ಎಡ್ಜ್‌ಬಾಸ್ಟನ್‌ನಲ್ಲಿ ಭಾರತೀಯ ಫೀಲ್ಡರ್‌ಗಳು ಉತ್ತಮ ಪ್ರದರ್ಶನ ನೀಡಿದರು ಮತ್ತು ಎರಡನೇ ಟೆಸ್ಟ್‌ನಲ್ಲಿನ ಗೆಲುವಿನ ನಂತರ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಶುಭ್‌ಮನ್ ಗಿಲ್ ಮತ್ತು ತಂಡದ ಬಗ್ಗೆ ಮಾತನಾಡಿದರು.
Ravi Shastri
ರವಿಶಾಸ್ತ್ರಿ
Updated on

ಲೀಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾದ ಕಳಪೆ ಫೀಲ್ಡಿಂಗ್ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಪಂದ್ಯದ ಸಮಯದಲ್ಲಿ ಎಂಟು ಕ್ಯಾಚ್‌ಗಳನ್ನು ಕೈಬಿಡಲಾಯಿತು. ಅದರಲ್ಲಿ ನಾಲ್ಕು ಕ್ಯಾಚ್‌ಗಳನ್ನು ಯಶಸ್ವಿ ಜೈಸ್ವಾಲ್ ಕೈಬಿಟ್ಟರು. ಈ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳ ಸೋಲನ್ನು ಕಂಡಿತು. ಆದಾಗ್ಯೂ, ಶುಭಮನ್ ಗಿಲ್ ಮತ್ತು ಪಡೆ ಮೂರು ವಿಭಾಗಗಳಲ್ಲಿಯೂ ಭಾರಿ ಸುಧಾರಣೆ ತೋರಿಸಿದರು. ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಎಲ್ಲ ರೀತಿಯಲ್ಲೂ ಮಿಂಚಿದರು ಮತ್ತು ಐತಿಹಾಸಿಕ 336 ರನ್‌ಗಳ ಗೆಲುವು ಸಾಧಿಸಿದರು.

ಎಡ್ಜ್‌ಬಾಸ್ಟನ್‌ನಲ್ಲಿ ಭಾರತೀಯ ಫೀಲ್ಡರ್‌ಗಳು ಉತ್ತಮ ಪ್ರದರ್ಶನ ನೀಡಿದರು ಮತ್ತು ಎರಡನೇ ಟೆಸ್ಟ್‌ನಲ್ಲಿನ ಗೆಲುವಿನ ನಂತರ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಶುಭ್‌ಮನ್ ಗಿಲ್ ಮತ್ತು ತಂಡದ ಬಗ್ಗೆ ಹಾಸ್ಯಾಸ್ಪದವಾಗಿ ಮಾತನಾಡಿದರು.

ದಿನೇಶ್ ಕಾರ್ತಿಕ್, ನಾಸರ್ ಹುಸೇನ್ ಮತ್ತು ಮೈಕೆಲ್ ಅಥರ್ಟನ್ ಅವರೊಂದಿಗೆ ಸ್ಕೈ ಸ್ಪೋರ್ಟ್ಸ್‌ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಶಾಸ್ತ್ರಿ, 'ತಂಡಕ್ಕೆ ಸಿಕ್ಕ ಆರು ದಿನಗಳ ವಿರಾಮದಲ್ಲಿ ಅವರು (ಶುಭಮನ್ ಗಿಲ್) ಮಾಡಿದ ಅತ್ಯುತ್ತಮ ಕೆಲಸವೆಂದರೆ, '...ಅವರು ಫಾರ್ಮಸಿಗೆ ಹೋದರು ಮತ್ತು ನಾನ್ ಗ್ರೀಸಿ ಹ್ಯಾಂಡ್ ಸ್ಯಾನಿಟೈಸರ್ ಅನ್ನು ತೆಗೆದುಕೊಂಡರು. ಇದರಿಂದಲೇ ಕ್ಯಾಚ್‌ಗಳು ಕೈಜಾರಿ ಹೋಗಲಿಲ್ಲ. 'ನಿಮ್ಮ ಕೈಗಳಿಂದ ಕ್ಯಾಚ್ ಜಾರಿ ಹೋಗದ ಹಾಗೆ ನಾನು ಏನನ್ನಾದರೂ ತರುತ್ತೇನೆ. ಅದನ್ನು ಕೈಗೆ ಸವರಿಕೊಂಡು, ಕ್ಯಾಚ್‌ಗಳನ್ನು ಹಿಡಿದುಕೊಳ್ಳಿ, ಆಗ ಪಂದ್ಯಗಳನ್ನು ಗೆಲ್ಲಬಹುದು' ಎಂದು ಗಿಲ್ ಹೇಳಿದ್ದಾಗಿ ತಮಾಷೆ ಮಾಡಿದರು.

ಪಂದ್ಯದ ಸಮಯದಲ್ಲಿ, ನಾಯಕ ಗಿಲ್ ಮುಂಚೂಣಿಯಲ್ಲಿ ನಿಂತು ಮೊದಲ ಇನಿಂಗ್ಸ್‌ನಲ್ಲಿ 269 ರನ್‌ಗಳನ್ನು ಗಳಿಸಿದರು ಮತ್ತು ನಂತರ ಎರಡನೇ ಇನಿಂಗ್ಸ್‌ನಲ್ಲಿ 161 ರನ್‌ಗಳನ್ನು ಗಳಿಸಿದರು. ಗಿಲ್ ಅವರನ್ನು ಹೊಗಳಿದ ಶಾಸ್ತ್ರಿ, ಅವರ ನಾಯಕತ್ವವು ಪ್ರೋಆ್ಯಕ್ಟೀವ್ ಆಗಿತ್ತು ಎಂದರು.

Ravi Shastri
'ತುಂಬಾ ತುಂಬಾ ನಿರಾಶಾದಾಯಕ': ಟೀಂ ಇಂಡಿಯಾ ಬಗ್ಗೆ ಸುನೀಲ್ ಗವಾಸ್ಕರ್ ಟೀಕೆ; ಯಶಸ್ವಿ ಜೈಸ್ವಾಲ್ ವಿರುದ್ಧ ಕಿಡಿ

'ಇದು ನಾಯಕನಿಂದ ಬಂದ ಅತ್ಯುತ್ತಮವಾದದ್ದು. 10 ಕ್ಕೆ 10 ಅಂಕ ನೀಡಲೇಬೇಕು. ನೀವು ನಾಯಕನಿಂದ ಇದಕ್ಕಿಂತ ಹೆಚ್ಚಿನದನ್ನು ಕೇಳಲು ಸಾಧ್ಯವಿಲ್ಲ. ನೀವು ಸರಣಿಯಲ್ಲಿ 1-0 ರಷ್ಟು ಹಿಂದಿದ್ದೀರಿ. ಅದರಿಂದ ಹೊರಗೆ ಬಂದು ಬ್ರಾಡ್ಮನ್‌ನಂತೆ ಬ್ಯಾಟಿಂಗ್ ಮಾಡುವಿರಿ. 269, 161 ಮತ್ತು ನೀವು ಪಂದ್ಯವನ್ನು ಗೆಲ್ಲುತ್ತೀರಿ' ಎಂದು ಹೇಳಿದರು.

'ಮೊದಲ ಟೆಸ್ಟ್ ಪಂದ್ಯದಲ್ಲಿ ನಿಮ್ಮ ನಾಯಕತ್ವವು ತುಂಬಾ ಪ್ರತಿಕ್ರಿಯಾತ್ಮಕವಾಗಿತ್ತು. ನೀವು ಚೆಂಡನ್ನು ಬಹುತೇಕ ಅನುಸರಿಸಿದ್ದೀರಿ. ಮುಂದಿನ ಪಂದ್ಯದಲ್ಲಿ ನೀವು ತುಂಬಾ ಪ್ರೋಆ್ಯಕ್ಟೀವ್ ಆಗಿದ್ದಿರಿ' ಎಂದು ತಿಳಿಸಿದರು.

608 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡವು 271 ರನ್‌ಗಳಿಗೆ ಆಲೌಟ್ ಆಯಿತು. ಜಸ್ಪ್ರೀತ್ ಬುಮ್ರಾ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಆಕಾಶ್ ದೀಪ್ ಅವರ ಅದ್ಭುತ ಆರು ವಿಕೆಟ್ ಗೊಂಚಲು ತಂಡಕ್ಕೆ ನೆರವಾಯಿತು. 1967ರಲ್ಲಿ ಈ ಸ್ಥಳದಲ್ಲಿ ಮೊದಲ ಬಾರಿಗೆ ಆಡಿದ ನಂತರ ಇದು ಎಡ್ಜ್‌ಬಾಸ್ಟನ್‌ನಲ್ಲಿ ಭಾರತಕ್ಕೆ ದೊರೆತ ಮೊದಲ ಟೆಸ್ಟ್ ಗೆಲುವು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯವು ಜುಲೈ 10 ರಿಂದ ಐಕಾನಿಕ್ ಲಾರ್ಡ್ಸ್‌ನಲ್ಲಿ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com