
ಲಂಡನ್: ಭಾರತದ ವಿರುದ್ಧದ ಟೆಸ್ಟ್ ಸರಣಿ ಆಡುತ್ತಿರುವ ಇಂಗ್ಲೆಂಡ್ ತಂಡಕ್ಕೆ ಮರ್ಮಾಘಾತ ಎದುರಾಗಿದ್ದು, ಆಂಗ್ಲರ ಪ್ರಮುಖ ಆಟಗಾರ ಮುಂದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿದೆ.
ಹೌದು.. ಇಂಗ್ಲೆಂಡ್ ತಂಡದ ಸ್ಟಾರ್ ಸ್ಪಿನ್ನರ್ ಶೊಯೆಬ್ ಬಶೀರ್ ಗಾಯದ ಸಮಸ್ಯೆಯಿಂದಾಗಿ ಮುಂದಿನ 4ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
3ನೇ ಟೆಸ್ಟ್ ಪಂದ್ಯದ ವೇಳೆ ಶೊಯೆಬ್ ಬಷೀರ್ ಕೈಗೆ ಗಂಭೀರವಾಗಿದ್ದು, ಅವರು ಬೆರಳಿನ ಡಿಸ್ ಲೊಕೇಷನ್ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ.
ಹೀಗಾಗಿ ಮುಂದಿನ ಪಂದ್ಯಕ್ಕೆ ಅವರು ಅಲಭ್ಯರಾಗುವ ಸಾಧ್ಯತೆ ಇದೆ.
ವೈದ್ಯರು ಹೇಳಿದ್ದೇನು?
ಪಂದ್ಯದ ವೇಳೆ ನಡೆದ ಗಾಯದಿಂದಾಗಿ ಬಶೀರ್ ಬೆರಳಿಗೆ ಗಂಭೀರ ಗಾಯವಾಗಿದೆ. ಬೆರಳಿನ ಸ್ಥಾನಪಲ್ಲಟ ಸಮಸ್ಯೆ ಉಲ್ಪಣವಾಗದಂತೆ ನೋಡಿಕೊಳ್ಳಬೇಕು. ಹೀಗಾಗಿ ವಿಶ್ರಾಂತಿ ಅಗತ್ಯ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಇಂಗ್ಲೆಂಡ್ ತಂಡ ಭಾರತದ ವಿರುದ್ಧದ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಈ ವರೆಗೂ ಬಷೀರ್ ಬೌಲಿಂಗ್ ಮಾಡಿಲ್ಲ. ಸ್ಪಿನ್ನರ್ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ನಿರೀಕ್ಷೆಯಿದೆ ಎಂಬ ವರದಿಗಳಿವೆ. ಆದರೆ ಇಂಗ್ಲೆಂಡ್ ಅವರನ್ನು ಬಳಸದಿರಲು ನಿರ್ಧರಿಸಿದೆ ಎನ್ನಲಾಗಿದೆ.
ಬಷೀರ್ ಆಗಿದ್ದೇನು?
ಇಂಗ್ಲೆಂಡ್ ತಂಡದ ಸ್ಟಾರ್ ಸ್ಪಿನ್ನರ್ ಶೋಯೆಬ್ ಬಶೀರ್ 3ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್‌ನ 78 ನೇ ಓವರ್‌ನಲ್ಲಿ ಬೆರಳಿಗೆ ಗಾಯ ಮಾಡಿಕೊಂಡರು. ಭಾರತ ತಂಡದ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಬಷೀರ್ ಎಸೆದ ಎಸೆತವನ್ನ ಬಲವಾಗಿ ಸ್ಟ್ರೈಟ್ ಡ್ರೈವ್ ನತ್ತ ಬಾರಿಸಿದರು.
ಈ ವೇಳೆ ಚೆಂಡನ್ನು ತಡೆಯಲು ಯತ್ನಿಸಿದ ಬಷೀರ್ ಗೆ ಕೈಗೆ ಗಾಯವಾಯಿತು. ಮೈದಾನದಲ್ಲೇ ಬಷೀರ್ ಕೈಯಿಂದ ರಕ್ತ ಚಿಮ್ಮಿತ್ತು. ಕೂಡಲೇ ಮೈದಾನದಿಂದ ಹೊರನಡೆದ ಬಷೀರ್ ಮತ್ತೆ ವಾಪಸ್ ಆಗಿಲ್ಲ.
ಬಷೀರ್ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ತಂಡದ ಜೋ ರೂಟ್ ಪಾರ್ಟ್ ಟೈಮ್ ಬೌಲರ್ ಆಗಿ ಕಾಣಿಸಿಕೊಂಡರು. ಜೋ ರೂಟ್ ಒಟ್ಟು 10 ಓವರ್ ಬೌಲಿಂಗ್ ಮಾಡಿದರು.
Advertisement