
ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡ ಒಂದು ದಿನದ ನಂತರ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ನಿವೃತ್ತಿಯನ್ನು ಹಿಂಪಡೆಯುವಂತೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಮದನ್ ಲಾಲ್ ಒತ್ತಾಯಿಸಿದ್ದಾರೆ. ಸದ್ಯ ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-1 ಮುನ್ನಡೆ ಸಾಧಿಸಿದ್ದು, ಟೀಂ ಇಂಡಿಯಾ ಎಷ್ಟೇ ಹೋರಾಟ ನೀಡಿದರೂ ಗೆಲುವು ಸಾಧ್ಯವಾಗಲಿಲ್ಲ.
ಇಂಗ್ಲೆಂಡ್ ವಿರುದ್ಧದ ಈ ಟೆಸ್ಟ್ ಸರಣಿಗೆ ಸ್ವಲ್ಪ ಮೊದಲು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಕೊಹ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸುವುದರಲ್ಲಿ ಯಾವುದೇ ತಪ್ಪಿಲ್ಲ ಮತ್ತು ಅನುಭವಿ ಕ್ರಿಕೆಟಿಗರು ತಮ್ಮ ಅನುಭವ ಮತ್ತು ಕ್ರೀಡೆಯ ಮೇಲಿನ ಉತ್ಸಾಹವನ್ನು ಯುವಕರೊಂದಿಗೆ ಹಂಚಿಕೊಳ್ಳಬೇಕು ಎಂದು ಮದನ್ ಲಾಲ್ ಹೇಳಿದರು.
'ಭಾರತೀಯ ಕ್ರಿಕೆಟ್ ಬಗ್ಗೆ ವಿರಾಟ್ ಕೊಹ್ಲಿಗೆ ಇದ್ದ ಉತ್ಸಾಹಕ್ಕೆ ಸರಿಸಾಟಿಯಿಲ್ಲ. ನಿವೃತ್ತಿಯ ನಂತರ ಅವರು ಟೆಸ್ಟ್ ಕ್ರಿಕೆಟ್‌ಗೆ ಮರಳಬೇಕು ಎಂಬುದು ನನ್ನ ಆಸೆ. ಅವರು ಮರಳುವುದರಲ್ಲಿ ಯಾವುದೇ ತಪ್ಪಿಲ್ಲ. ಈ ಸರಣಿಯಲ್ಲಿ ಇಲ್ಲದಿದ್ದರೆ, ಮುಂದಿನ ಸರಣಿಯಲ್ಲಿ ಆದರೂ ಅವರು ಮತ್ತೆ ಮರಳಬೇಕು' ಎಂದು ಮದನ್ ಲಾಲ್ CricketPredictaಗೆ ತಿಳಿಸಿದರು.
'ನನ್ನ ದೃಷ್ಟಿಕೋನದಲ್ಲಿ, ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಬದಲಿಸಬೇಕು. ಏಕೆಂದರೆ, ಅವರು 1-2 ವರ್ಷಗಳ ಕಾಲ ಸುಲಭವಾಗಿ ಆಡಬಹುದು. ಇದು ನಿಮ್ಮ ಅನುಭವವನ್ನು ಯುವಕರಿಗೆ ವರ್ಗಾಯಿಸಲು ಸಕಾಲ. ಇದಕ್ಕಿನ್ನು ತುಂಬಾ ತಡವಾಗಿಲ್ಲ. ದಯವಿಟ್ಟು ಹಿಂತಿರುಗಿ' ಎಂದರು.
ಶುಭಮನ್ ಗಿಲ್ ತಾಂತ್ರಿಕವಾಗಿ ಅಷ್ಟು ಉತ್ತಮವಾಗಿ ಕಾಣಲಿಲ್ಲ ಮತ್ತು ಮೂರನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದಾಗ ಅವರು ಎಂದಿನಂತೆ ಅವರು ಶಾಂತವಾಗಿರಲಿಲ್ಲ ತೆಯ ಕೊರತೆಯನ್ನು ಹೊಂದಿದ್ದರು ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾಘನ್ ಲಾರ್ಡ್ಸ್‌ನಲ್ಲಿ ಕೊನೆಯ ದಿನದಂದು ಪ್ರವಾಸಿ ತಂಡದ ಹೋರಾಟದ ಮನೋಭಾವವನ್ನು ಶ್ಲಾಘಿಸುತ್ತಾ ಹೇಳಿದರು.
ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಗಿಲ್, ನಂತರ ಬರ್ಮಿಂಗ್ಹ್ಯಾಮ್ ನಲ್ಲಿ ಶತಕ ಮತ್ತು ದ್ವಿಶತಕ ಬಾರಿಸುವ ಮೂಲಕ ಹಲವಾರು ದಾಖಲೆಗಳನ್ನು ಮುರಿದರು. ಭಾರತ 336 ರನ್ ಗಳಿಂದ ಗೆದ್ದ ಈ ಪಂದ್ಯದಲ್ಲಿ ಗಿಲ್ ಉತ್ತಮ ಪ್ರದರ್ಶನ ನೀಡಿದ್ದರು.
ಲಾರ್ಡ್ಸ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅವರು ಕೇವಲ 16 ಮತ್ತು 6 ರನ್ ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾದರು. ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ತಂಡದ ಆಟಗಾರರ ಹೋರಾಟದ ಹೊರತಾಗಿಯೂ, ಭಾರತ 22 ರನ್ ಗಳಿಂದ ಸೋತಿತ್ತು.
Advertisement