ಭಾರತದ U-19 ಇತಿಹಾಸದಲ್ಲಿ ಅತಿ ವೇಗದ ಶತಕ; ಹಲವು ದಾಖಲೆ ಬರೆದ CSK ಆಟಗಾರ ಆಯುಷ್ ಮ್ಹಾತ್ರೆ!

ಎರಡನೇ ಇನಿಂಗ್ಸ್‌ನಲ್ಲಿ ಮ್ಹಾತ್ರೆ ಅವರ ಅಂತಿಮ ಸ್ಕೋರ್ ಕೇವಲ 80 ಎಸೆತಗಳಲ್ಲಿ 126 ರನ್ ಆಗಿತ್ತು. ಇದರಲ್ಲಿ 13 ಬೌಂಡರಿಗಳು ಮತ್ತು ಐದು ಸಿಕ್ಸರ್‌ಗಳು ಸೇರಿವೆ.
Ayush Mhatre
ಆಯುಷ್ ಮ್ಹಾತ್ರೆ online desk
Updated on

ಭಾರತದ U-19 ಕ್ರಿಕೆಟ್ ತಂಡದ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಯುಷ್ ಮ್ಹಾತ್ರೆ ಬುಧವಾರ ಯೂತ್ ಟೆಸ್ಟ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸುವ ಮೂಲಕ ಇತಿಹಾಸ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಚೆಲ್ಮ್ಸ್‌ಫೋರ್ಡ್‌ನಲ್ಲಿ ನಡೆದ ಎರಡನೇ ಯೂತ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧದ ಚೇಸ್‌ನಲ್ಲಿ ಬಲಗೈ ಬ್ಯಾಟ್ಸ್‌ಮನ್ ಕೇವಲ 64 ಎಸೆತಗಳಲ್ಲಿ ಶತಕ ಗಳಿಸಿ ದಾಖಲೆ ಬರೆದಿದ್ದಾರೆ.

ಕೊನೆಯ ದಿನದಂದು 355 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ, ಆರಂಭಿಕ ವೈಭವ್ ಸೂರ್ಯವಂಶಿ ಅವರನ್ನು ಮೊದಲ ಓವರ್‌ನಲ್ಲಿಯೇ ಗೋಲ್ಡನ್ ಡಕ್‌ಗೆ ಕಳೆದುಕೊಂಡಿತು. ಸಂಕಷ್ಟದಲ್ಲಿ ಸಿಲುಕಿದ್ದ ಭಾರತದ ಪರ ಎಚ್ಚರಿಕೆಯಿಂದ ಆಟ ಆರಂಭಿಸಿದ ಮ್ಹಾತ್ರೆ ಉತ್ತಮ ಪ್ರದರ್ಶನ ನೀಡಿದರು. ಐದನೇ ಓವರ್‌ನಲ್ಲಿ ಅಲೆಕ್ಸ್ ಗ್ರೀನ್ ಬೌಲಿಂಗ್‌ನಲ್ಲಿ ಮೂರು ಉತ್ತಮ ಸಮಯೋಚಿತ ಬೌಂಡರಿಗಳನ್ನು ಒಳಗೊಂಡಂತೆ 14 ರನ್‌ಗಳನ್ನು ಪಡೆದರು. ಅವರು ಕೇವಲ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು ಮತ್ತು ಇಂಗ್ಲೆಂಡ್ ತಂಡದ ಬೌಲರ್‌ಗಳನ್ನು ಕಾಡಿದರು. ಅಭಿಗ್ಯಾನ್ ಕುಂದು ಅವರೊಂದಿಗೆ ಜೊತೆಯಾಟ ನಡೆಸಿದರು. ಈ ಜೋಡಿ ಕೇವಲ 77 ಎಸೆತಗಳಲ್ಲಿ 117 ರನ್‌ಗಳ ಜೊತೆಯಾಟ ನಡೆಸಿತು.

ಮ್ಹಾತ್ರೆ ಅಂತಿಮವಾಗಿ 27ನೇ ಓವರ್‌ನಲ್ಲಿ ತಮ್ಮ ಬ್ಯಾಟ್ ಅನ್ನು ಬೀಸಿ ಐತಿಹಾಸಿಕ ಶತಕ ಗಳಿಸಿದರು. ಈ ಮೂಲಕ ಇಂಗ್ಲೆಂಡ್‌ನ ಜಾರ್ಜ್ ಬೆಲ್ (ಶ್ರೀಲಂಕಾ ವಿರುದ್ಧ U-19, 2022) ಹೊಂದಿದ್ದ 88 ಎಸೆತಗಳ ಹಿಂದಿನ ದಾಖಲೆಯನ್ನು ಮುರಿದರು. ವಿಪರ್ಯಾಸವೆಂದರೆ, ಬೆಕೆನ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 107 ಎಸೆತಗಳಲ್ಲಿ ಒಂದು ಶತಕ ಗಳಿಸಿದ ಮ್ಹಾತ್ರೆ ಮೂರನೇ ವೇಗದ ಯೂತ್ ಟೆಸ್ಟ್ ಶತಕ ಗಳಿಸಿದ ಹೆಗ್ಗಳಿಕೆಯನ್ನು ಸಹ ಹೊಂದಿದ್ದಾರೆ.

Ayush Mhatre
ಭಾರತದ U19 ಇತಿಹಾಸದಲ್ಲಿ 3ನೇ ವೇಗದ ಅರ್ಧಶತಕ; ಹಲವು ದಾಖಲೆ ಬರೆದ ವೈಭವ್ ಸೂರ್ಯವಂಶಿ!

ಎರಡನೇ ಇನಿಂಗ್ಸ್‌ನಲ್ಲಿ ಮ್ಹಾತ್ರೆ ಅವರ ಅಂತಿಮ ಸ್ಕೋರ್ ಕೇವಲ 80 ಎಸೆತಗಳಲ್ಲಿ 126 ರನ್ ಆಗಿತ್ತು. ಇದರಲ್ಲಿ 13 ಬೌಂಡರಿಗಳು ಮತ್ತು ಐದು ಸಿಕ್ಸರ್‌ಗಳು ಸೇರಿವೆ. 150 ಸ್ಟ್ರೈಕ್ ರೇಟ್‌ನಲ್ಲಿ ಬಂದ ಅವರ 126 ರನ್‌ಗಳು U19 ಯೂತ್ ಟೆಸ್ಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಕೂಡ ಆಗಿದೆ. ಅವರ ಆಕ್ರಮಣಕಾರಿ ಬ್ಯಾಟಿಂಗ್ ಭಾರತವನ್ನು 217 ರನ್‌ಗಳಿಗೆ ಮುನ್ನಡೆಸಲು ಸಹಾಯ ಮಾಡಿತು. ನಂತರ ಅವರು ರಾಲ್ಫಿ ಆಲ್ಬರ್ಟ್ ಬೌಲಿಂಗ್‌ನಲ್ಲಿ ಬೆನ್ ಮೇಯಸ್‌ಗೆ ಕ್ಯಾಚ್ ನೀಡಿ ಔಟಾದರು.

19 ವರ್ಷದ ಆಟಗಾರ ಎರಡು ಪಂದ್ಯಗಳ ಸರಣಿಯನ್ನು 102, 32, 80 ಮತ್ತು 126 ರನ್‌ಗಳನ್ನು ಗಳಿಸಿದ್ದಾರೆ. ಇನಿಂಗ್ಸ್‌ಗಳಲ್ಲಿ ಗಮನಾರ್ಹ ಸ್ಥಿರತೆಯನ್ನು ಪ್ರದರ್ಶಿಸಿದ್ದಾರೆ. ಸರಣಿಯಲ್ಲಿ ಅವರ ಒಂಬತ್ತು ಸಿಕ್ಸರ್‌ಗಳು ಸೌರಭ್ ತಿವಾರಿ ಅವರ ಯೂತ್ ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಮುರಿಯಿತು. ದುರದೃಷ್ಟವಶಾತ್, ಮಳೆಯಿಂದಾಗಿ ಮೊದಲ ಟೆಸ್ಟ್‌ನಂತೆಯೇ, ಎರಡನೇ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು. ಭಾರತವು 43 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 290 ರನ್ ಗಳಿಸಿತ್ತು. ಗೆಲುವಿಗೆ ಇನ್ನೂ 65 ರನ್‌ಗಳ ಅಗತ್ಯವಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com