RCB ಅಭಿಮಾನಿಗಳ ಕಾಲ್ತುಳಿತ: ಹೃದಯವಿದ್ರಾವಕ ಘಟನೆ- ಮೋದಿ; ಕ್ರಿಕೆಟಿಗರ ಬಗ್ಗೆ ಜನರು ಹುಚ್ಚರಾಗಿದ್ದಾರೆ- BCCI

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚೊಚ್ಚಲ ಐಪಿಎಲ್ ಟ್ರೋಫಿ ಗೆಲುವಿನ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವಕ್ಕೆ ವೇದಿಕೆ ಸಿದ್ಧವಾಗಿತ್ತು.
RCB ಅಭಿಮಾನಿಗಳ ಕಾಲ್ತುಳಿತ: ಹೃದಯವಿದ್ರಾವಕ ಘಟನೆ- ಮೋದಿ; ಕ್ರಿಕೆಟಿಗರ ಬಗ್ಗೆ ಜನರು ಹುಚ್ಚರಾಗಿದ್ದಾರೆ- BCCI
Updated on

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚೊಚ್ಚಲ ಐಪಿಎಲ್ ಟ್ರೋಫಿ ಗೆಲುವಿನ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವಕ್ಕೆ ವೇದಿಕೆ ಸಿದ್ಧವಾಗಿತ್ತು. ಆದರೆ ದುರದೃಷ್ಟವಶಾತ್ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಘಟನೆ ನಿಜಕ್ಕೂ ಹೃದಯವಿದ್ರಾವಕ. ಈ ದುರಂತದ ಸಮಯದಲ್ಲಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.

ಕಾಲ್ತುಳಿತದ ಪರಿಸ್ಥಿತಿಗೆ ಬಿಸಿಸಿಐ ಪ್ರತಿಕ್ರಿಯೆ

ಆರ್‌ಸಿಬಿಯ ಐಪಿಎಲ್ 2025 ಪ್ರಶಸ್ತಿ ವಿಜೇತ ಆಚರಣೆಗೆ ಮುನ್ನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ದುರದೃಷ್ಟಕರ ಕಾಲ್ತುಳಿತ ಘಟನೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರತಿಕ್ರಿಯಿಸಿದ್ದಾರೆ. ಇದು ಅತ್ಯಂತ ದುರದೃಷ್ಟಕರ, ಸಂಘಟಕರು ಆರ್‌ಸಿಬಿಯ ಐಪಿಎಲ್ ವಿಜೇತ ಆಚರಣೆಯನ್ನು ಉತ್ತಮವಾಗಿ ಯೋಜಿಸಬೇಕಾಗಿತ್ತು. ಇದು ಜನಪ್ರಿಯತೆಯ ನಕಾರಾತ್ಮಕ ಬದಿ. ಜನರು ತಮ್ಮ ಕ್ರಿಕೆಟಿಗರ ಬಗ್ಗೆ ಹುಚ್ಚರಾಗಿದ್ದಾರೆ" ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕಾಲ್ತುಳಿತದ ಬಗ್ಗೆ ತಿಳಿಸಿದ್ದಾರೆ.

RCB ಅಭಿಮಾನಿಗಳ ಕಾಲ್ತುಳಿತ: ಹೃದಯವಿದ್ರಾವಕ ಘಟನೆ- ಮೋದಿ; ಕ್ರಿಕೆಟಿಗರ ಬಗ್ಗೆ ಜನರು ಹುಚ್ಚರಾಗಿದ್ದಾರೆ- BCCI
RCB Fans Are Loyally Royal: ಆರ್‌ಸಿಬಿ ಅಭಿಮಾನಿಗಳೇ ನೀವೇ ಶ್ರೇಷ್ಠರು; Virat Kohli ಮನದ ಮಾತು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com