
ಲಂಡನ್: ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಪ್ಯಾಟ್ ಕಮಿನ್ಸ್ ಪಡೆಗೆ ವೇಗಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್ ಮೂಲಕವೂ ನೆರವಾದರು. ಆ ಮೂಲಕ ಹಲವು ದಾಖಲೆಗಳಲ್ಲಿ ಭಾಗಿಯಾದರು.
ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಫೈನಲ್ ಪಂದ್ಯ ನಿರ್ಣಾಯಕ ಘಟ್ಟ ತಲುಪಿದ್ದು, ದಕ್ಷಿಣ ಆಫ್ರಿಕಾಗೆ ಗೆಲ್ಲಲು ಆಸ್ಟ್ರೇಲಿಯಾ ತಂಡ 282 ರನ್ ಗಳ ಸವಾಲಿನ ಗುರಿ ನೀಡಿದೆ.
2ನೇ ಇನ್ನಿಂಗ್ಸ್ ನಲ್ಲಿ ಒಂದು ಹಂತದಲ್ಲಿ ಕೇವಲ 73 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮಿಚೆಸ್ ಸ್ಟಾರ್ಕ್ ನೆರವಾದರು. 136 ಎಸೆತಗಳಲ್ಲಿ 58 ರನ್ ಕಲೆಹಾಕಿದರು. ಪ್ರಮುಖವಾಗಿ ಜೋಶ್ ಹೇಜಲ್ ವುಡ್ ಜೊತೆ ಸೇರಿ 10ನೇ ವಿಕೆಟ್ ನಲ್ಲಿ ದಾಖಲೆಯ 59 ರನ್ ಗಳ ಜೊತೆಯಾಟವಾಡಿದರು.
ಅಂತಿಮವಾಗಿ ಆಸ್ಟ್ರೇಲಿಯಾ ತಂಡ 207 ರನ್ ಗಳಿಗೆ ಆಲೌಟ್ ಆಗಿ ದಕ್ಷಿಣ ಆಫ್ರಿಕಾಗೆ ಗೆಲ್ಲಲು 282ರನ್ ಗುರಿ ನೀಡಿದೆ.
ಹಲವು ದಾಖಲೆಗಳ ನಿರ್ಮಾಣ
ಇನ್ನು ಈ ಪಂದ್ಯದ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ತಂಡ ಅಪರೂಪದ ದಾಖಲೆಗೆ ಪಾತ್ರವಾಗಿದೆ. 75 ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೇ 7 ವಿಕೆಟ್ ಕಳೆದುಕೊಂಡು 200ಕ್ಕೂ ಅಧಿಕ ಗುರಿ ನೀಡಿದ 3ನೇ ನಿದರ್ಶನ ಇದಾಗಿದೆ. ಈ ಹಿಂದೆ 1967ರಲ್ಲಿ ದಿ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ಕೇವಲ 53 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಬಳಿಕ 255 ರನ್ ಕಲೆಹಾಕಿತ್ತು.
ನಂತರ 2022ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ತಂಡ ಕ್ವೀನ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ 67 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು 200 ರನ್ ಕಲೆಹಾಕಿತ್ತು. ಇದೀಗ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿ 73 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು 207 ರನ್ ಗುರಿ ನೀಡಿದೆ.
200-plus totals after being 7 down for < 75 in Tests
53/7 to 255 - PAK vs ENG, The Oval, 1967
67/7 to 200 - ENG vs WI, Queen’s Park (Grenada), 2022
73/7 to 207 - AUS vs SA, Lord’s, 2025
ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್ ದಾಖಲೆ
ಇನ್ನು ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಅಜೇಯ ಅರ್ಧಶತಕ ಗಳಿಸಿದ ಮಿಚೆಲ್ ಸ್ಟಾರ್ಕ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಆಫ್ರಿಕಾ ವಿರುದ್ಧ ಸ್ಟಾರ್ಕ್ 136 ಎಸೆತಗಳಲ್ಲಿ 58 ರನ್ ಕಲೆಹಾಕಿದರು. ಅದೂ ಕೂಡ 9ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದು ಅತೀ ಹೆಚ್ಚು ಅರ್ಧಶತಕ ಸಿಡಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಸ್ಟಾರ್ಕ್ ಪಾತ್ರರಾಗಿದ್ದಾರೆ. ಸ್ಟಾರ್ಕ್ ಈವರೆಗೂ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದು 8 ಬಾರಿ ಅರ್ಧಶತಕ ಸಿಡಿಸಿದ್ದಾರೆ.
ಈ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡ ಸ್ಟುವರ್ಟ್ ಬ್ರಾಡ್ ಮತ್ತು ನ್ಯೂಜಿಲೆಂಡ್ ನ ಡೇನಿಯವ್ ವೆಟ್ಟೋರಿ ತಲಾ 6 ಬಾರಿ ಅರ್ಧಶತಕ ಸಿಡಿಸಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ತಲಾ 5 ಬಾರಿ ಅರ್ಧಶತಕಗಳಿಸಿರುವ ಮೈಕಲ್ ಹೋಲ್ಡಿಂಗ್, ಭಾರತದ ಕಿರಣ್ ಮೋರೆ ಮತ್ತು ಗ್ರೇಮ್ ಸ್ವಾನ್ 3ನೇ ಸ್ಥಾನದಲ್ಲಿದ್ದಾರೆ.
Most 50-plus scores from No.9 or below in Tests
8 - Mitchell Starc
6 - Stuart Broad
6 - Daniel Vettori
5 - Michael Holding
5 - Kiran More
5 - Tim Southee
5 - Graeme Swann
10ನೇ ಕ್ರಮಾಂಕದಲ್ಲಿ ಗರಿಷ್ಠ ಜೊತೆಯಾಟ, ಸ್ಟಾರ್ಕ್-ಹೇಜಲ್ ವುಡ್ ದಾಖಲೆ
ಇನ್ನು ಇದೇ ಪಂದ್ಯದಲ್ಲಿ 10ನೇ ಕ್ರಮಾಂಕದಲ್ಲಿ ಜೋಶ್ ಹೇಜಲ್ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಜೊತೆಯಾಟದಲ್ಲಿ ದಾಖಲೆ ಬರೆದಿದ್ದಾರೆ. ಈ ಜೋಡಿ 10ನೇ ಕ್ರಮಾಂಕದಲ್ಲಿ 58 ರನ್ ಕಲೆಹಾಕಿದ್ದು, ಇದು ಲಾರ್ಡ್ಸ್ ನಲ್ಲಿ 10ನೇ ಕ್ರಮಾಂಕದಲ್ಲಿ ಬಂದ 5ನೇ ಗರಿಷ್ಠ ರನ್ ಗಳ ಜೊತೆಯಾಟವಾಗಿದೆ.
1884ರಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾದ ಹ್ಯಾರಿ ಬೋಯ್ಲೆ-ಟುಪ್ ಸ್ಕಾಟ್ 10ನೇ ವಿಕೆಟ್ ಗೆ 69ರನ್ ಕಲೆಹಾಕಿದ್ದರು. ಇದಾದ ಬಳಿಕ 1975ರಲ್ಲಿ ಮತ್ತೆ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾದ ಡೆನ್ನಿಸ್ ಲಿಲ್ಲಿ-ಆ್ಯಶ್ಲೆ ಮಲ್ಲೆಟ್ 10ನೇ ಕ್ರಮಾಂಕದಲ್ಲಿ 69 ರನ್ ಕಲೆಹಾಕಿದ್ದರು.
Highest partnerships by visiting 10th wicket pairs at Lord’s
69 - Harry Boyle, Tup Scott (AUS) vs ENG, 1884
69 - Dennis Lillee, Ashley Mallett (AUS) vs ENG, 1975
64 - Graeme Labrooy, Ravi Ratnayeke (SL) vs ENG, 1988
63 - Ajit Agarkar, Ashish Nehra (IND) vs ENG, 2002
59 - Josh Hazlewood, Mitchell Starc (AUS) vs SA, 2025
ಕಗಿಸೋ ರಬಾಡಾ ದಾಖಲೆ
ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಗಳಿಂದ ಕಗಿಸೋ ರಬಾಡಾ 9 ವಿಕೆಟ್ ಕಬಳಿಸಿದ್ದು, ಆ ಮೂಲಕ ಆಸ್ಟ್ರೇಲಿಯಾ ವಿರುದ್ಧ ತಮ್ಮ ವಿಕೆಟ್ ಗಳಿಕೆಯನ್ನು 58ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಟ ವಿಕೆಟ್ ಕಬಳಿಸಿದ 3ನೇ ಬೌಲರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಅಗ್ರಸ್ಥಾನದಲ್ಲಿದ್ದು ಸ್ಟೇಯ್ನ್ ಒಟ್ಟು 70 ವಿಕೆಟ್ ಕಬಳಿಸಿದ್ದಾರೆ. 64 ವಿಕೆಟ್ ಕಬಳಿಸಿರುವ ಹ್ಯೂ ಟೇಫೀಲ್ಡ್ 2ನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಕಗಿಸೋ ರಬಾಡ (58), ಮಾರ್ನೆ ಮಾರ್ಕೆಲ್ ಮತ್ತು ಮಖಾಯ ಎನ್ಟಿನಿ ತಲಾ 58 ವಿಕೆಟ್ ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
Most Test wickets for SA vs AUS
70 - Dale Steyn (SR: 46.2)
64 - Hugh Tayfield (SR: 94.1)
58 - Kagiso Rabada (SR: 37.2)
58 - Morne Morkel (SR: 57.1)
58 - Makhaya Ntini (SR: 59.2)
Advertisement