
ಶನಿವಾರ ನಡೆದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಂದು ಭಾರತದ ಇತರ ಬೌಲರ್‌ಗಳ ಕಳಪೆ ಪ್ರದರ್ಶನದ ನಂತರ ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವುದು ಕಂಡುಬಂತು. ಇಂಗ್ಲೆಂಡ್ ಇನಿಂಗ್ಸ್‌ನಲ್ಲಿ ಎರಡನೇ ದಿನದ ಅಂತ್ಯಕ್ಕೆ ಬುಮ್ರಾ ಮಾತ್ರ ಮೂರು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಭಾರತದ ಇತರ ಬೌಲರ್‌ಗಳು ವಿಕೆಟ್ ಕಬಳಿಸಲು ಹೆಣಗಾಡಿದರು. ಗಂಭೀರ್ ಮತ್ತು ಬುಮ್ರಾ ನಡುವಿನ ಚರ್ಚೆಯ ಚಿತ್ರ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್ ಇನಿಂಗ್ಸ್‌ನ 40ನೇ ಓವರ್‌ನಲ್ಲಿ ಬುಮ್ರಾ ಮೈದಾನದಿಂದ ಹೊರನಡೆದಾಗ ಈ ಘಟನೆ ಸಂಭವಿಸಿದೆ. ಶಾರ್ದೂಲ್ ಠಾಕೂರ್ ಬೌಲಿಂಗ್ ಮಾಡುತ್ತಿದ್ದಾಗ ಕ್ಯಾಮೆರಾ ಭಾರತೀಯ ಡ್ರೆಸ್ಸಿಂಗ್ ಕೋಣೆಯತ್ತ ತಿರುಗಿತು. ಅಲ್ಲಿ ಬುಮ್ರಾ ಗಂಭೀರ್ ಜೊತೆಗೆ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿತು.
ಇಂಗ್ಲೆಂಡ್ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಓಲಿ ಪೋಪ್ ತಮ್ಮ ಒಂಬತ್ತನೇ ಟೆಸ್ಟ್ ಶತಕವನ್ನು ಬಾರಿಸಿದರು ಮತ್ತು ಅಜೇಯರಾಗುಳಿದರು. ಶನಿವಾರ ಹೆಡಿಂಗ್ಲಿಯಲ್ಲಿ ನಡೆದ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್‌ನ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 49 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಭಾರತಕ್ಕಿಂತ 262 ರನ್‌ಗಳ ಹಿಂದಿದೆ.
ಶುಭಮನ್ ಗಿಲ್ ಅವರ ವೃತ್ತಿಜೀವನದ ಅತ್ಯುತ್ತಮ 147 ರನ್ ಮತ್ತು ರಿಷಭ್ ಪಂತ್ ಅವರು ಟೆಸ್ಟ್ ಕ್ರಿಕೆಟ್‌ನ ತಮ್ಮ ಏಳನೇ ಶತಕ ಸಿಡಿಸುವ ಮೂಲಕ ಕೊನೆಗೆ 134 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಗಿಲ್ ನಿರ್ಗಮಿಸಿದ ನಂತರ, ಭಾರತವು ಕೇವಲ 41 ರನ್‌ಗಳಿಗೆ ಕೊನೆಯ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು. 113 ಓವರ್‌ಗಳಲ್ಲಿಯೇ 471 ರನ್‌ಗಳಿಗೆ ಆಲೌಟ್ ಆಯಿತು.
Advertisement