
ಇಂಗ್ಲೆಂಡ್ ವಿರುದ್ಧದ ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ನಾಲ್ಕು ಕ್ಯಾಚ್‌ಗಳನ್ನು ಕೈಬಿಡಲು ಯಶಸ್ವಿ ಜೈಸ್ವಾಲ್ ಕಾರಣರಾಗಿರಬಹುದು, ಆದರೆ ಅವರು ಸಾಮಾನ್ಯವಾಗಿ ಉತ್ತಮ ಫೀಲ್ಡರ್ ಎಂಬುದು ನಿಜ. ಆದ್ದರಿಂದ, ತಪ್ಪುಗಳ ಹೊರತಾಗಿಯೂ, ಮುಂದಿನ ಪಂದ್ಯದಲ್ಲಿ ಅವರು ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡಲು ಮತ್ತಷ್ಟು ವಿಶ್ವಾಸ ಹೊಂದಿರಬೇಕಾಗುತ್ತದೆ. ಹೌದು, ಆ ಕ್ಯಾಚ್ ಡ್ರಾಪ್‌ಗಳಿಗೆ ಭಾರತ ದೊಡ್ಡ ಬೆಲೆ ತೆರಬೇಕಾಯಿತು. ಆದರೆ, ಈಗ ಆ ಲೋಪಗಳ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ.
ಯಶಸ್ವಿ ಜೈಸ್ವಾಲ್ ಒಬ್ಬ ಬಲಿಷ್ಠ ಫೀಲ್ಡರ್
ಮೊದಲ ಟೆಸ್ಟ್ ಪಂದ್ಯದ ಸಮಯದಲ್ಲಿ ತೋರಿಸಲಾದ ಅಂಕಿಅಂಶಗಳ ಪ್ರಕಾರ, ಯಶಸ್ವಿ ಜೈಸ್ವಾಲ್ 20 ಕ್ಯಾಚ್‌ಗಳನ್ನು ಹಿಡಿದಿದ್ದಾರೆ ಮತ್ತು 8 ಕ್ಯಾಚ್‌ಗಳನ್ನು ಬಿಟ್ಟಿದ್ದಾರೆ. ಆದ್ದರಿಂದ, ಕಳೆದ ವಾರ ಆ ದುರದೃಷ್ಟಕರ ಮಿಸ್‌ಗಳು ಸಂಭವಿಸದಿದ್ದರೆ, ಅವರು ನಿಜವಾಗಿಯೂ ತಂಡದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರಾಗುತ್ತಿದ್ದರು. ಸ್ಲಿಪ್ ಕಾರ್ಡನ್‌ನಲ್ಲಿ ಕ್ಯಾಚ್ ದಕ್ಷತೆ ಬಗ್ಗೆ ಹೇಳುವುದಾದರೆ, ಭಾರತ ಒಟ್ಟಾರೆ 2023 ರಿಂದ ಕ್ಯಾಚಿಂಗ್ ದಕ್ಷತೆಯ ವಿಷಯದಲ್ಲಿ ಅತ್ಯುತ್ತಮ ತಂಡವಾಗಿ ಉಳಿದಿದೆ.
ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಹಿಂದಿಕ್ಕಿ ಭಾರತದ ಕ್ಯಾಚಿಂಗ್ ದಕ್ಷತೆಯಲ್ಲಿ ಮೊದಲ ಸ್ಥಾನದಲ್ಲಿದೆ. ಸದ್ಯ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಆಸ್ಟ್ರೇಲಿಯಾ ಮುಖಾಮುಖಿಯಲ್ಲಿ, ಆಸ್ಟ್ರೇಲಿಯಾದ ಎರಡನೇ ಇನಿಂಗ್ಸ್‌ನಲ್ಲಿ ಆತಿಥೇಯರು ಏಳು ಕ್ಯಾಚ್‌ಗಳನ್ನು ಕೈಚೆಲ್ಲಿದರು. ಇದು ಆಸಿಸ್‌ಗೆ ಚೇತರಿಸಿಕೊಳ್ಳಲು ಅವಕಾಶ ನೀಡಿತು.
ಭಾರತ ಅತ್ಯುತ್ತಮ ಫೀಲ್ಡಿಂಗ್ ತಂಡ
ಅಂಕಿಅಂಶಗಳನ್ನು ನೋಡಿದರೆ, 2023 ರಿಂದ ಭಾರತವು ಸ್ಲಿಪ್ ಕಾರ್ಡನ್ ಮತ್ತು ಗಲ್ಲಿಯಲ್ಲಿ ಶೇ 80.6 ರಷ್ಟು ಕ್ಯಾಚಿಂಗ್ ದಕ್ಷತೆಯನ್ನು ಹೊಂದಿದೆ. ಈ ಅವಧಿಯಲ್ಲಿ ಯಾವುದೇ ತಂಡವು ಪಡೆದ ಅತ್ಯುತ್ತಮ ಕ್ಯಾಚಿಂಗ್ ಇದಾಗಿದೆ. ಶೇ 78.5 ರೊಂದಿಗೆ ನ್ಯೂಜಿಲೆಂಡ್, 78.3 ರೊಂದಿಗೆ ಶ್ರೀಲಂಕಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಆಶ್ಚರ್ಯಕರ ಸಂಗತಿಯೆಂದರೆ, ಉಸ್ಮಾನ್ ಖವಾಜಾ, ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಶೇನ್ ಅವರಂತಹವರು ಅಗ್ರ ತಂಡಗಳಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಅವರ ಕ್ಯಾಚಿಂಗ್ ದಕ್ಷತೆಯು ಶೇ 72.3 ಕ್ಕೆ ಇಳಿದಿದೆ.
ಪಾಕಿಸ್ತಾನ ಶೇ 68 ದಕ್ಷತೆಯೊಂದಿಗೆ ಕಳಪೆಯಾಗಿದೆ. ಆದರೆ, ಟೆಸ್ಟ್ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಅವರು ಯಾವುದೇ ರೇಸ್‌ನಲ್ಲಿಲ್ಲ. ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ಕೊನೆಯ ಎರಡು ಸ್ಥಾನಗಳನ್ನು ಪಡೆದಿವೆ.
ತಂಡಗಳ ಕ್ಯಾಚ್ ದಕ್ಷತೆ
ಭಾರತ - ಶೇ 80.6
ನ್ಯೂಜಿಲೆಂಡ್- ಶೇ 78.5
ಶ್ರೀಲಂಕಾ- 78.3
ದಕ್ಷಿಣ ಆಫ್ರಿಕಾ- ಶೇ 75
ಇಂಗ್ಲೆಂಡ್- ಶೇ 74.5
ಆಸ್ಟ್ರೇಲಿಯಾ- 72.3
ಪಾಕಿಸ್ತಾನ- 68
ಬಾಂಗ್ಲಾದೇಶ- 67.2
ವೆಸ್ಟ್ ಇಂಡೀಸ್- 64.7
Advertisement