ಶ್ರೇಯಸ್ ಅಯ್ಯರ್ ಅವರ ಟೆಸ್ಟ್ ಕ್ರಿಕೆಟ್‌ ಭವಿಷ್ಯ ಮುಗಿದಿಲ್ಲ, ಸ್ವಲ್ಪ ಕಾಯಬೇಕಷ್ಟೆ; ಭಾರತದ ಮಾಜಿ ಆರಂಭಿಕ ಆಟಗಾರ

ಶ್ರೇಯಸ್ ರಣಜಿ ಟ್ರೋಫಿಯ ಏಳು ಇನಿಂಗ್ಸ್‌ಗಳಲ್ಲಿ 68ರ ಸರಾಸರಿಯಲ್ಲಿ 480 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 90ಕ್ಕಿಂತ ಹೆಚ್ಚಿತ್ತು. ನಂತರ ಅವರು ಬ್ಯಾಟ್ಸ್‌ಮನ್ ಆಗಿ ಐಪಿಎಲ್‌ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
Shreyas Iyer
ಶ್ರೇಯಸ್ ಅಯ್ಯರ್
Updated on

ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಮೊದಲೇ, ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆಯುವುದಿಲ್ಲ ಎಂದು ಸೂಚಿಸುವ ಹಲವಾರು ವರದಿಗಳು ಬಂದವು. ಅಷ್ಟೇ ಅಲ್ಲದೆ, ಟೆಸ್ಟ್ ಸರಣಿಗೂ ಮುನ್ನ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಭಾರತ ಎ ತಂಡಕ್ಕೂ ಅವರನ್ನು ಆಯ್ಕೆ ಮಾಡಿರಲಿಲ್ಲ.

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಶ್ರೇಯಸ್ ಅಯ್ಯರ್ ಅವರು ನಿಜವಾಗಿಯೂ ಸ್ಪರ್ಧೆಯಲ್ಲಿದ್ದಾರೆಯೇ ಮತ್ತು ಅವರು ಭವಿಷ್ಯದಲ್ಲಿ ಸ್ಪರ್ಧೆಯಲ್ಲಿರುತ್ತಾರೆಯೇ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿತು. ಇದರ ಹೊರತಾಗಿಯೂ, 30 ವರ್ಷದ ಅಯ್ಯರ್ ಕಳೆದ ವರ್ಷ ದೇಶೀಯ ಕ್ರಿಕೆಟ್‌ನಾದ್ಯಂತ ಉತ್ತಮ ಪ್ರದರ್ಶನ ನೀಡಿದರು ಮತ್ತು ಭಾರತದ ಚಾಂಪಿಯನ್ಸ್ ಟ್ರೋಫಿ ವಿಜೇತ ಅಭಿಯಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು.

ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ, ಶ್ರೇಯಸ್ ಅಯ್ಯರ್ ಅವರ ಸಮಯವು ಬಂದೇ ಬರುತ್ತದೆ. ಆದರೆ, ಅವರು ಖಂಡಿತವಾಗಿಯೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಬೆರಳೆಣಿಕೆಯಷ್ಟು ಸ್ಥಾನಗಳಿಗೆ ಮಾತ್ರ ದೀರ್ಘ ಕ್ಯೂ ಇದೆ. ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರಂತಹವರು ಪ್ರದರ್ಶನ ನೀಡಿದರೂ ತಂಡಕ್ಕೆ ಪ್ರವೇಶಿಸುವುದು ಕಷ್ಟಕರವಾಗಿದೆ ಎಂದು ಅವರು ಹೇಳಿದರು.

'ಶ್ರೇಯಸ್ ಅಯ್ಯರ್ ಅವರಿಗೆ ಈಗ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಕಡಿಮೆ, ಏಕೆಂದರೆ ಇನ್ನೂ ಅನೇಕ ಅರ್ಹ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕರುಣ್ ನಾಯರ್ ಅವರಿಗೆ ಈಗಷ್ಟೇ ಅವಕಾಶ ಸಿಕ್ಕಿದೆ. ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರಂತಹ ಆಟಗಾರರು ಇನ್ನೂ ಕಾಯುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಅವರು ಈ ಕಾಯುತ್ತಿರುವ ಆಟಗಾರರ ನಡುವೆಯೂ ಸ್ಥಾನ ಪಡೆಯದಿದ್ದರೆ, ಮುಂದೆ ಅವರನ್ನು ಆಯ್ಕೆಗೆ ಹೇಗೆ ಪರಿಗಣಿಸಬಹುದು?' ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

Shreyas Iyer
'ನಾನು ಆಯ್ಕೆದಾರನಲ್ಲ': ಭಾರತ ಟೆಸ್ಟ್ ತಂಡದಿಂದ ಶ್ರೇಯಸ್ ಅಯ್ಯರ್ ಔಟ್; ಮೌನ ಮುರಿದ ಕೋಚ್ ಗೌತಮ್ ಗಂಭೀರ್!

ಶ್ರೇಯಸ್ ರಣಜಿ ಟ್ರೋಫಿಯ ಏಳು ಇನಿಂಗ್ಸ್‌ಗಳಲ್ಲಿ 68ರ ಸರಾಸರಿಯಲ್ಲಿ 480 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 90ಕ್ಕಿಂತ ಹೆಚ್ಚಿತ್ತು. ನಂತರ ಅವರು ಬ್ಯಾಟ್ಸ್‌ಮನ್ ಆಗಿ ಐಪಿಎಲ್‌ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆಡಿರುವ 17 ಪಂದ್ಯಗಳಲ್ಲಿ 604 ರನ್ ಗಳಿಸಿದ್ದಾರೆ.

'ಅವರು ಉತ್ತಮ ಪ್ರಥಮ ದರ್ಜೆ ಆವೃತ್ತಿಯನ್ನು ಹೊಂದಿದ್ದರು ಎಂದು ನನಗೆ ತಿಳಿದಿದೆ. ಅವರು ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶ ನೀಡಿದ್ದಾರೆ. ನಾಯಕನಾಗಿ ಪಂಜಾಬ್ ಕಿಂಗ್ಸ್ ಅನ್ನು ಫೈನಲ್‌ಗೆ ಕೊಂಡೊಯ್ದರು. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಸಮಯ ಬರುತ್ತದೆ. ಅವರು ಸ್ವಲ್ಪ ಕಾಯಬೇಕಾಗುತ್ತದೆ' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com