'ರಿಷಭ್ ಪಂತ್ ಬುದ್ಧಿವಂತಿಕೆ ಬಳಸಿದರು': ವಿಕೆಟ್ ಕೀಪರ್ ಬ್ಯಾಟರ್ ಜಾಣತನವನ್ನು ಹಾಡಿ ಹೊಗಳಿದ ರೋಹಿತ್ ಶರ್ಮಾ!

ಪಂತ್ ಅವರ ಬುದ್ಧಿವಂತ ನಡೆಯು ಭಾರತದತ್ತ ಪಂದ್ಯದ ಗತಿಯನ್ನು ತಿರುಗಿಸಲು ಹೇಗೆ ಅವಕಾಶ ನೀಡಿತು ಎಂಬುದನ್ನು ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ.
Rohit Sharma
ರೋಹಿತ್ ಶರ್ಮಾ
Updated on

ದಕ್ಷಿಣ ಆಫ್ರಿಕಾ ತಂಡವು ಐಸಿಸಿ ಟಿ20 ವಿಶ್ವಕಪ್ 2024ರ ಫೈನಲ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದರಿಂದ, ಐಸಿಸಿ ಕಾರ್ಯಕ್ರಮವೊಂದರಲ್ಲಿ ಟೀಂ ಇಂಡಿಯಾ ಮತ್ತೊಂದು ಸಂಕಷ್ಟಕ್ಕೆ ಹತ್ತಿರವಾಗುತ್ತಿರುವಂತೆ ತೋರುತ್ತಿತ್ತು. 30 ಎಸೆತಗಳಲ್ಲಿ 30 ರನ್‌ಗಳು ಬೇಕಾಗಿದ್ದವು. ಆಗ ದಕ್ಷಿಣ ಆಫ್ರಿಕಾ ಪಂದ್ಯವನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ಇನ್ನೇನು ಸೋಲು ಕಣ್ಮುಂದೆ ಕಾಣಿಸುತ್ತಿದೆ ಎನ್ನುವಾಗ ರಿಷಭ್ ಪಂತ್ ಅವರ ನಡೆ ಭಾರತಕ್ಕೆ ಪಂದ್ಯವನ್ನು ತಿರುಗಿಸುವಲ್ಲಿ ಯಶಸ್ವಿಯಾಯಿತು. ರಿಷಭ್ ಪಂತ್ ಅವರ ಈ ತಂತ್ರದಿಂದಲೇ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳ ಮೊಮೆಂಟಮ್ ಮುರಿಯುವಂತಾಯಿತು.

ಭಾರತದ ಟಿ20 ವಿಶ್ವಕಪ್ 2024ರ ವಿಜಯದ ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ನಡೆದ ಮಾತುಕತೆಯಲ್ಲಿ ಪಂತ್ ಅವರ ಬುದ್ಧಿವಂತ ನಡೆಯು ಭಾರತದತ್ತ ಪಂದ್ಯದ ಗತಿಯನ್ನು ತಿರುಗಿಸಲು ಹೇಗೆ ಅವಕಾಶ ನೀಡಿತು ಎಂಬುದನ್ನು ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ.

'ದಕ್ಷಿಣ ಆಫ್ರಿಕಾಕ್ಕೆ 30 ಎಸೆತಗಳಲ್ಲಿ 30 ರನ್‌ಗಳು ಬೇಕಾಗಿದ್ದಾಗ, ಒಂದು ಸಣ್ಣ ವಿರಾಮ ಸಿಕ್ಕಿತು. ಪಂತ್ ತನ್ನ ಬುದ್ಧಿವಂತಿಕೆಯಿಂದ ಆಟಕ್ಕೆ ಬ್ರೇಕ್ ನೀಡಿದರು. ಇದು ಆಟವನ್ನು ನಿಧಾನಗೊಳಿಸಲು ಸಹಾಯ ಮಾಡಿತು. ಏಕೆಂದರೆ, ಆಟ ವೇಗವಾಗಿತ್ತು ಮತ್ತು ಆ ಕ್ಷಣದಲ್ಲಿ, ಬ್ಯಾಟ್ಸ್‌ಮನ್ ಬಯಸುವುದು ಚೆಂಡನ್ನು ಬೇಗ ಎಸೆಯಲಿ ಎಂಬುದು. ಆದರೆ ನಾವು ಆ ಲಯವನ್ನು ಮುರಿಯಬೇಕಾಗಿತ್ತು. ನಾನು ಫೀಲ್ಡ್ ಸೆಟ್ ಮಾಡುತ್ತಾ ಬೌಲರ್‌ಗಳೊಂದಿಗೆ ಮಾತನಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಪಂತ್ ನೆಲದ ಮೇಲೆ ಬಿದ್ದಿರುವುದನ್ನು ನಾನು ನೋಡಿದೆ. ಆಗ ಫಿಜಿಯೋಥೆರಪಿಸ್ಟ್‌ ಬಂದರು ಮತ್ತು ಅವರ ಮೊಣಕಾಲಿಗೆ ಟೇಪ್ ಸುತ್ತಿದರು. ಕ್ಲಾಸೆನ್ ಪಂದ್ಯ ಮತ್ತೆ ಪ್ರಾರಂಭವಾಗಲು ಕಾಯುತ್ತಿದ್ದರು. ಆದರೆ, ಅದೊಂದೇ ಕಾರಣ ಎಂದು ನಾನು ಹೇಳುತ್ತಿಲ್ಲ. ಆದರೆ, ಅದು ಕೂಡ ಅವುಗಳಲ್ಲಿ ಒಂದಾಗಿರಬಹುದು. ಪಂತ್ ಸಾಹಬ್ ತಮ್ಮ ಬುದ್ಧಿವಂತಿಕೆ ಬಳಸಿದರು ಮತ್ತು ವಿಷಯಗಳು ನಮ್ಮ ಪರವಾಗಿ ಕೆಲಸ ಮಾಡಿದವು' ಎಂದು ಅವರು ಹೇಳಿದರು.

Rohit Sharma
ರೋಹಿತ್ ಶರ್ಮಾ ಜೊತೆ ಹಂಚಿಕೊಂಡಿದ್ದ ಹೋಟೆಲ್ ರೂಂಗೆ ಗರ್ಲ್‌ಫ್ರೆಂಡ್ ಕರೆದೊಯ್ದಿದ್ದ ಶಿಖರ್ ಧವನ್! ಹಿಟ್‌ಮ್ಯಾನ್ ಪ್ರತಿಕ್ರಿಯೆ...

ಪಂತ್ ಕೆಳಗೆ ಬಿದ್ದಾಗ ತನಗೆ ತಾನೇ ಗಾಯ ಮಾಡಿಕೊಂಡಿರಬಹುದು. ಬಹುಶಃ ಕಾರು ಅಪಘಾತದ ಗಾಯಗಳು ಮಧ್ಯದಲ್ಲಿ ಅವರ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿರಬಹುದು ಎಂದು ನಾನು ಭಾವಿಸಿದೆ ಎಂದು ರೋಹಿತ್ ತಿಳಿಸಿದರು.

'ನೋಡಿ, ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ಬಂದಿದ್ದಾರೆ. ಹಾಗಾಗಿ, ನಾವು ಏನು ಮಾಡಬೇಕೆಂದು ಹಾರ್ದಿಕ್ ಜೊತೆ ಚರ್ಚಿಸುತ್ತಿದ್ದೆವು. ಮೊದಲು ಏನಾಯಿತು ಎಂದು ನನಗೆ ತಿಳಿದಿರಲಿಲ್ಲ. ಅವರಿಗೆ (ಪಂತ್) ಏನೋ ಆಗಿದೆ ಎಂದು ನಾನು ನಿಜವಾಗಿಯೂ ಭಾವಿಸಿದೆ. ಅವರಿಗೆ ಆಗಿದ್ದ ಅಪಘಾತದಿಂದಾಗಿ ಮತ್ತೆ ಸಮಸ್ಯೆಯಾಗಿರಬಹುದು ಎಂದು ನಾನು ಭಾವಿಸಿದೆ. ಆದರೆ ವಾಸ್ತವವಾಗಿ, ಅದು ಆಟವನ್ನು ಸ್ವಲ್ಪ ನಿಲ್ಲಿಸಲು ಮಾತ್ರವಾಗಿತ್ತು. ಮೊಮೆಂಟಮ್ ಅನ್ನು ಮುರಿಯುವುದು ಬಹಳ ಮುಖ್ಯವಾಗಿತ್ತು. ಹೀಗಾಗಿಯೇ ನಾವು ಪಂದ್ಯಕ್ಕೆ ಮರಳಿದೆವು ಎಂದು ನಾನು ಭಾವಿಸುತ್ತೇನೆ. ಅಂತಿಮವಾಗಿ, ಹಾರ್ದಿಕ್ ಕ್ಲಾಸೆನ್‌ರನ್ನು ಔಟ್ ಮಾಡಿದರು' ಎಂದು ಭಾರತದ ಏಕದಿನ ನಾಯಕ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com