'ಅಣ್ಣಾ ನಿನ್ ಪಾದ XEROX', 'ಬಾಲ್ ಹಿಡಿ ಅಂದ್ರೆ ತಡಕಾಡ್ತೀಯಲ್ಲೋ': ಮೈದಾನದಲ್ಲಿ Virat Kohli ಮಿಮಿಕ್ರಿ, ನಕ್ಕು ನಕ್ಕು ಪ್ರೇಕ್ಷಕರು ಸುಸ್ತು!, Video Viral
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಜಯ ಸಾಧಿಸಿದ್ದು ಮಾತ್ರವಲ್ಲ ಈ ಪಂದ್ಯದಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ತಮ್ಮ ಆಟದಿಂದ ಮಾತ್ರವಲ್ಲ ತಮ್ಮ ಚೇಷ್ಟಗಳಿಂದಲೂ ವ್ಯಾಪಕ ಸುದ್ದಿಗೆ ಗ್ರಾಸವಾದರು.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 249 ರನ್ ಕಲೆಹಾಕಿ ನ್ಯೂಜಿಲೆಂಡ್ ಗೆ ಗೆಲ್ಲಲು 250ರನ್ ಗುರಿ ನೀಡಿತ್ತು. ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ 45.3 ಓವರ್ ನಲ್ಲಿ 205 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ 44 ರನ್ ಗಳ ಅಂತರದಲ್ಲಿ ಪಂದ್ಯ ಸೋತಿತು.
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ ಭರ್ಜರಿ ಬ್ಯಾಟಿಂದ್ ಪ್ರದರ್ಶನ ನೀಡಿದರು. ಕೇನ್ ವಿಲಿಯಮ್ಸನ್ ಭಾರತೀಯ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು. 120 ಎಸೆತಗಳನ್ನು ಎದುರಿಸಿದ ವಿಲಿಯಮ್ಸನ್ 7 ಬೌಂಡರಿಗಳ ನೆರವಿನಿಂದ 81 ರನ್ ಗಳಿಸಿದರು. ಆದರೆ ಅವರಿಗೆ ಇತರೆ ಆಟಗಾರರಿಂದ ಸೂಕ್ತ ಸಾಥ್ ದೊರೆಯಲಿಲ್ಲ.
'ಅಣ್ಣಾ ನಿನ್ ಪಾದ XEROX'
ಒಂದು ಹಂತದಲ್ಲಿ 81 ರನ್ ಗಳಿಸಿ ಅಪಾಯಕಾರಿಯಾಗಿದ್ದ ವಿಲಿಯಮ್ಸನ್ ರನ್ನು 41ನೇ ಓವರ್ ನ ಅಂತಿಮ ಎಸೆತದಲ್ಲಿ ಅಕ್ಸರ್ ಪಟೇಲ್ ಔಟ್ ಮಾಡಿದರು. ಈ ವಿಕೆಟ್ ಗೂ ಮುನ್ನ ಭಾರತದ ಪಾಳಯದಲ್ಲಿ ನಗುವೇ ಇರಲಿಲ್ಲ. ಈ ಹಂತದಲ್ಲಿ ಅಕ್ಸರ್ ಪಟೇಲ್ ವಿಕೆಟ್ ಪಡೆಯುತ್ತಲೇ ಪಕ್ಕದಲ್ಲೇ ಇದ್ದ ವಿರಾಟ್ ಕೊಹ್ಲಿ ವಿಕೆಟ್ ಸಂಭ್ರಮಿಸಿದರು. ಬಳಿಕ ಅಕ್ಸರ್ ಪಟೇಲ್ ರ ಕಾಲಿಗೆ ಎರಗಿ ಅಪಾಯಕಾರಿ ವಿಲಿಯಮ್ಸನ್ ರನ್ನು ಔಟ್ ಮಾಡಿದ್ದಕ್ಕೆ ಧನ್ಯವಾದ ಹೇಳಿದರು. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
'ಬಾಲ್ ಹಿಡಿ ಅಂದ್ರೆ ತಡಕಾಡ್ತೀಯಲ್ಲೋ'
ಇದೇ ಪಂದ್ಯದಲ್ಲಿ ತಮ್ಮ ಚೇಷ್ಟೇ ಮೂಲಕವೇ ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ರನ್ನು ತರಾಟೆಗೆ ತೆಗೆದುಕೊಂಡರು. ಶ್ರೇಯಸ್ ಅಯ್ಯರ್ ಮಿಸ್ ಫೀಲ್ಡ್ ನಿಂದಾಗಿ ನ್ಯೂಜಿಲೆಂಡ್ 1 ಹೆಚ್ಚುವರಿ ರನ್ ಪಡೆಯಿತು. ಅಯ್ಯರ್ ತಮ್ಮತ್ತ ಬಂದ ಚೆಂಡನ್ನು ಗುರುತಿಸುವಲ್ಲಿ ವಿಫಲರಾದರು. ಈ ವೇಳೆ ಶ್ರೇಯಸ್ ಅಯ್ಯರ್ ಬಳಿ ಬಂದ ಕೊಹ್ಲಿ ಅವರು ಮಾಡಿದ್ ಮಿಸ್ ಫೀಲ್ಡ್ ಅನ್ನೇ ಅನುಕರಣೆ ಮಾಡಿ ತೋರಿಸಿದರು. ಈ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ನಗೆಯ ಅಲೆ ಎದ್ದಿತು. ಶ್ರೇಯಸ್ ಅಯ್ಯರ್ ಕೂಡ ನಗುತ್ತಲೇ ಅದನ್ನು ಸ್ವೀಕರಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ