
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫೈನಲ್ ಗೇರಿರುವ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದೆ.
ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಸೆಮಿಫೈನಲ್ ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು 4 ವಿಕೆಟ್ ಗಳ ಅಂತರದಲ್ಲಿ ಮಣಿಸಿ ಟೂರ್ನಿಯ ಫೈನಲ್ ಗೇರಿತು. ಆ ಮೂಲಕ ಐಸಿಸಿ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ ರನ್ ಚೇಸ್ ಮಾಡಿ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಈ ಹಿಂದೆ 1998ರಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧ 282ರನ್ ಚೇಸ್ ಮಾಡಿ ಗೆದ್ದಿತ್ತು. ಆ ಬಳಿಕ 265ರನ್ ಗಳನ್ನು ಚೇಸ್ ಮಾಡಿ ಗೆದ್ದ 2ನೇ ತಂಡ ಎಂಬ ಕೀರ್ತಿಗೆ ಮತ್ತು ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ ರನ್ ಚೇಸ್ ಮಾಡಿ ಗೆದ್ದ ತಂಡ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
Highest targets chased down in Champions Trophy knockouts
282 - SA vs ENG, Dhaka, 1998 QF
265 - NZ vs IND, Nairobi, 2000 Final
265 - IND vs BAN, Edgbaston, 2017 SF
265 - IND vs AUS, Dubai, 2025 SF
ಜಗತ್ತಿನ ಏಕೈಕ ಕ್ರಿಕೆಟ್ ತಂಡ
ಅಲ್ಲದೆ ಐಸಿಸಿ ಏಕದಿನ ಟೂರ್ನಿಯ ನಾಕೌಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ತಂಡವೊಂದು ಯಶಸ್ವಿಯಾಗಿ ಬೆನ್ನಟ್ಟಿದ ಅತ್ಯಧಿಕ ಗುರಿ 265 ಆಗಿದೆ. ಇದಕ್ಕೂ ಮೊದಲು ಭಾರತವೂ ಸಹ ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. 2011 ರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಭಾರತ 261 ರನ್ ಚೇಸ್ ಮಾಡಿತ್ತು. ಆ ಮೂಲಕ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಐಸಿಸಿ ಟೂರ್ನಿಯ ನಾಕೌಟ್ ಪಂದ್ಯದಲ್ಲಿ ಗರಿಷ್ಠ ರನ್ ಚೇಸ್ ಮಾಡಿದ ಮೊದಲ ತಂಡವಾಗಿದೆ.
265 is also the highest target successfully chased down by a team against Australia in ICC ODI tournaments knockouts; the previous was also by India: 261 in the CWC 2011 quarterfinal in Ahmedabad.
ಐದು ಬಾರಿ ಫೈನಲ್ ಗೆ
ಇನ್ನು ಇಂದಿನ ಗೆಲುವಿನೊಂದಿಗೆ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯ ಒಂಬತ್ತು ಆವೃತ್ತಿಗಳಲ್ಲಿ ಐದು ಬಾರಿ ಫೈನಲ್ ತಲುಪಿದಂತಾಗಿದೆ. ಭಾರತದ ನಂತರದ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಇದ್ದು, 3 ಫೈನಲ್ ಆಡಿದೆ. ಆದರೆ ವಿಪರ್ಯಾಸವೆಂದರೆ ಈ ಬಾರಿ ವೆಸ್ಟ್ ಇಂಡೀಸ್ ತಂಡವೇ ಟೂರ್ನಿಯಲ್ಲಿರಲಿಲ್ಲ.
India have now made it to the finals of the Champions Trophy in five out of nine editions, the next best is West Indies (3 finals).
ಸೋಲೇ ಇಲ್ಲದೆ ಗರಿಷ್ಠ ಜಯ, 2ನೇ ಸ್ಥಾನದಲ್ಲಿ ಭಾರತ
ಇನ್ನು ಇಂದು ಭಾರತ ಆಸಿಸ್ ವಿರುದ್ಧ ಗೆಲ್ಲುವ ಮೂಲಕ ಒಂದು ಮೈದಾನದಲ್ಲಿ ಸೋಲೇ ಇಲ್ಲದೆ ಸತತ ಪಂದ್ಯಗಳನ್ನು ಗೆದ್ದ ದಾಖಲೆ ಮಾಡಿದ್ದು, ಇಂದು ನಡೆದ ದುಬೈ ಮೈದಾನದಲ್ಲಿ ಭಾರತ ತನ್ನ ಸತತ 9ನೇ ಜಯ ತನ್ನದಾಗಿಸಿಕೊಂಡಿತು. ಈ ಮೈದಾನದಲ್ಲಿ ಭಾರತ 10 ಪಂದ್ಯಗಳನ್ನಾಡಿದ್ದು, ಒಂದು ಪಂದ್ಯ ಟೈ ಆಗಿದ್ದರೆ ಬಾಕಿ 9 ಪಂದ್ಯಗಳನ್ನು ಭಾರತ ಗೆದ್ದಿದೆ. ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದ್ದು, ಕಿವೀಸ್ ಪಡೆ ಡ್ಯುನೆಡಿನ್ ಮೈದಾನದಲ್ಲಿ ಸತತ 10 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದೆ.
Most ODI wins without a defeat at a venue
10 - New Zealand, Dunedin
9 - India, Dubai (10 matches, 1 tied)
7 - India, Indore
7 - Pakistan, Hyderabad (Niaz Stadium, Pakistan)
Advertisement