
ದುಬೈ: ಐಸಿಸಿ ಟೂರ್ನಿಗಳಲ್ಲಿ ಭಾರತಕ್ಕಿದ್ದ ಆಸ್ಟ್ರೇಲಿಯಾ ಭಯ ಕೊನೆಗೂ ಅಂತ್ಯವಾಗಿದ್ದು, ಈ ಬಾರಿ ಭಾರತ ತಂಡವೇ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಐಸಿಸಿ ಟೂರ್ನಿಯಿಂದ ಹೊರದಬ್ಬಿದೆ.
ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಸೆಮಿಫೈನಲ್ ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು 4 ವಿಕೆಟ್ ಗಳ ಅಂತರದಲ್ಲಿ ಮಣಿಸಿ ಟೂರ್ನಿಯ ಫೈನಲ್ ಗೇರಿತು.
ಅಂತೆಯೇ ಐಸಿಸಿ ಟೂರ್ನಿಗಳಲ್ಲಿ ಆಸಿಸ್ ವಿರುದ್ಧ ಸೋತು ಸುಣ್ಣವಾಗುತ್ತಿದ್ದ ಭಾರತದ ಕುಖ್ಯಾತ ದಾಖಲೆಗೂ ಇಂದು ಬ್ರೇಕ್ ಬಿದ್ದಿದ್ದು, ಈ ಬಾರಿ ಭಾರತವೇ ಆಸ್ಟ್ರೇಲಿಯಾವನ್ನು ಬಗ್ಗು ಬಡಿದು ಟೂರ್ನಿಯಿಂದ ಹೊರದಬ್ಬಿದೆ. ಆ ಮೂಲಕ 2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಸೇಡನ್ನು ತೀರಿಸಿಕೊಂಡಿದೆ.
IND vs AUS in Champions Trophy knockouts
Won by 44 runs, Dhaka, 1998 QF
Won by 20 runs, Nairobi, 2000 QF
Won by 4 wickets, Dubai, 2025 SF
ನಾಕೌಟ್ ನಲ್ಲಿ ಭಾರತ-ಆಸಿಸ್ ಮುಖಾಮುಖಿ
ಇನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ನಾಕೌಟ್ ಹಂತದಲ್ಲಿ ಭಾರತ ತನ್ನ ದಾಖಲೆ ಉತ್ತಮ ಪಡಿಸಿಕೊಂಡಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಐಸಿಸಿ ಈವೆಂಟ್ ನ 7 ನಾಕೌಟ್ ಪಂದ್ಯಗಳ ಪೈಕಿ 4ರಲ್ಲಿ ಆಸ್ಟ್ರೇಲಿಯಾ ಗೆದ್ದಿದ್ದು, 3ರಲ್ಲಿ ಭಾರತ ಗೆದ್ದಿದೆ.
ಈ ಪೈಕಿ 4 ಏಕದಿನ ವಿಶ್ವಕಪ್ ಟೂರ್ನಿ ಪಂದ್ಯಗಳು ಸೇರಿದ್ದು, ಇದರಲ್ಲಿ 3ರಲ್ಲಿ ಆಸ್ಟ್ರೇಲಿಯಾ 1ರಲ್ಲಿ ಭಾರತ ಗೆದ್ದಿದೆ. ಅಂತೆಯೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ 2 ಪಂದ್ಯಗಳ ಪೈಕಿ ಎರಡರಲ್ಲೂ ಭಾರತವೇ ಗೆದ್ದಿದೆ. ಅಂತೆಯೇ ಒಂದು ಟಿ20 ವಿಶ್ವಕಪ್ ನಲ್ಲಿ ಭಾರತ ಗೆದ್ಜಿದ್ದರೆ, 1 ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಆಸ್ಟ್ರೇಲಿಯಾ ಗೆದ್ದಿದೆ.
India and Australia have faced each other in 7 ICC knockout matches, in which Australia holds a slight edge.
Advertisement