
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅಪರೂಪದ ದಾಖಲೆ ನಿರ್ಮಿಸಿದ್ದು, ಆ ಮೂಲಕ ಮಾಜಿ ದಿಗ್ಗಜರಾದ ನವಜೋತ್ ಸಿಂಗ್ ಸಿಧು ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ.
ಹೌದು.. ದುಬೈ ಅಂತರರಾಷ್ಟ್ರ್ಯೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 265 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 48.1 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ಕಲೆ ಹಾಕಿ 4 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು.
ಈ ಪಂದ್ಯದಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ 98 ಎಸೆತಗಳಲ್ಲಿ 5 ಬೌಂಡರಿ ಸಹಿತ 84 ರನ್ ಕಲೆಹಾಕಿದರು. ಆ ಮೂಲಕ ಪಂದ್ಯದ ಗೆಲುವಿನ ರೂವಾರಿಯಾದರು.
ಕನ್ನಡಿಗ ರಾಹುಲ್ ಭರ್ಜರಿ ಬ್ಯಾಟಿಂಗ್
ಇನ್ನು ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 34 ಎಸೆತಗಳನ್ನು ಎದುರಿಸಿದ ರಾಹುಲ್ 2 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ ಅಜೇಯ 42 ರನ್ ಸಿಡಿಸಿದರು. ಆ ಮೂಲಕ ಕೊನೆಯವರೆಗೂ ಕ್ರೀಸ್ ನಲ್ಲಿ ನಿಂತಿದ್ದು ಮಾತ್ರವಲ್ಲದೇ ಗೆಲುವಿನ ಸಿಕ್ಸರ್ ಸಿಡಿಸಿ ಭಾರತಕ್ಕೆ ಅಮೋಘ ಗೆಲುವು ತಂದಿತ್ತರು.
Kohli ಅಬ್ಬರದ ನಡುವೆ ಮರೆಯಾದ KL Rahul ದಾಖಲೆ
ಇನ್ನು ಇದೇ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತೊಂದು ಅಪರೂಪದ ದಾಖಲೆ ನಿರ್ಮಿಸಿದ್ದು, ಭಾರತದ ಪರ ಏಕದಿನ ಕ್ರಿಕೆಟ್ ನಲ್ಲಿ 3 ಸಾವಿರ ರನ್ ಕಲೆಹಾಕಿದ ಸಾಧನೆ ಮಾಡಿದರು. ಆ ಮೂಲಕ ಕಡಿಮೆ ಇನ್ನಿಂಗ್ಸ್ ನಲ್ಲಿ 3 ಸಾವಿರ ರನ್ ಕಲೆಹಾಕಿದ ಭಾರತದ 3ನೇ ಆಟಗಾರ ಎಂಬ ಕೀರ್ತಿಗೆ ಕೆಎಲ್ ರಾಹುಲ್ ಭಾಜನರಾದರು.
ಈ ಪಟ್ಟಿಯಲ್ಲಿ ಈ ಪಟ್ಟಿಯಲ್ಲಿ ಶಿಖರ್ ಧವನ್ ಅಗ್ರಸ್ಥಾನದಲ್ಲಿದ್ದಾರೆ. ಧವನ್ ಒಟ್ಟು 72 ಇನ್ನಿಂಗ್ಸ್ ಗಳಲ್ಲಿ 3 ಸಾವಿರ ರನ್ ಸಾಧನೆ ಮಾಡಿದ್ದು, ಕೆಎಲ್ ರಾಹುಲ್ 78 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿ 3ನೇ ಸ್ಥಾನದಲ್ಲಿದ್ದಾರೆ. 75 ಇನ್ನಿಂಗ್ಸ್ ಗಳಲ್ಲಿ 3 ಸಾವಿರ ರನ್ ಕಲೆಹಾಕಿದ್ದ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.
ಗಂಗೂಲಿ, ಸಿಧು ರೆಕಾರ್ಡ್ ಪತನ!
ಅಂತೆಯೇ ಇದೇ ಅಮೋಘ ಇನ್ನಿಂಗ್ಸ್ ಮೂಲಕ ಕೆಎಲ್ ರಾಹುಲ್ ಮಾಜಿ ಕ್ರಿಕೆಟಿಗರಾದ ನವಜೋತ್ ಸಿಂಗ್ ಸಿಧು ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಸಿಧು 3 ಸಾವಿರ ರನ್ ಕಲೆಹಾಕಲು 79 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, ಸೌರವ್ ಗಂಗೂಲಿ 82 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
Least innings to 3000 ODI runs (India)
72 - Shikhar Dhawan
75 - Virat Kohli
78 - KL Rahul
79 - Navjot Singh Sidhu
82 - Sourav Ganguly
Advertisement