
ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯ 2ನೇ ಸೆಮಿ ಫೈನಲ್ ನಲ್ಲಿ ನ್ಯೂಜಿಲೆಂಡ್ ತಂಡ ಅಬ್ಬರ ಬ್ಯಾಟಿಂಗ್ ಪ್ರದರ್ಶನಕ್ಕೆ ಏಕದಿನ ಕ್ರಿಕೆಟ್ ಇತಿಹಾಸದ ಹಲವು ದಾಖಲೆಗಳು ಪುನರ್ ಪರಿಷ್ಕರಣೆಗೊಂಡಿವೆ.
ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ಪೇರಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 362 ರನ್ ಗಳಿಸಿತು.
ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ ಮತ್ತು ರಚಿನ್ ರವೀಂದ್ರ ಅಬ್ಬರ ಶತಕ ಸಿಡಿಸಿದರು. ಆ ಮೂಲಕ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 363 ರನ್‌ಗಳ ಗುರಿಯನ್ನು ನೀಡಿದೆ. ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ ಕೇವಲ 101 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 13 ಬೌಂಡರಿಗಳ ನೆರವಿನಿಂದ 108 ಪೇರಿಸಿದರೆ, 94 ಎಸೆತಗಳನ್ನು ಎದುರಿಸಿದ ಕೇನ್ ವಿಲಿಯಮ್ಸನ್ 2 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ 102 ರನ್ ಕಲೆಹಾಕಿದರು.
ಅಂತೆಯೇ ಈ ಜೋಡಿ ತಮ್ಮ ವೈಯುಕ್ತಿಕ ಶತಕಗಳ ಮೂಲಕ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದು, ಈ ದಾಖಲೆಗಳ ಪಟ್ಟಿ ಇಂತಿದೆ.
ರಚಿನ್ ರವೀಂದ್ರ-ಕೇನ್ ವಿಲಿಯಮ್ಸನ್ ಎಲೈಟ್ ಗ್ರೂಪ್ ಸೇರ್ಪಡೆ
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಮತ್ತು ರಚಿನ್ ರವೀಂದ್ರ ಶತಕಗಳನ್ನು ಸಿಡಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಇತಿಹಾಸದ ಎಲೈಟ್ ಗ್ರೂಪ್ ಗೆ ಸೇರ್ಪಡೆಯಾದರು. ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಒಂದೇ ಇನ್ನಿಂಗ್ಸ್ ನಲ್ಲಿ 2 ಶತಕ ಸಿಡಿಸಿದ 6ನೇ ಜೋಡಿ ಎಂಬ ಕೀರ್ತಿಗೆ ಕೇನ್ ವಿಲಿಯಮ್ಸನ್ ಮತ್ತು ರಚಿನ್ ರವೀಂದ್ರ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2002ರಲ್ಲಿ ಭಾರತದ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಈ ದಾಖಲೆ ನಿರ್ಮಿಸಿದ್ದರು.
Multiple individual hundreds in an innings in CT
2 - Virender Sehwag & Sourav Ganguly (IND) vs ENG, Colombo RPS, 2002
2 - Chris Gayle & Dwayne Bravo (WI) vs ENG, Ahmedabad, 2006
2 - Ricky Ponting & Shane Watson (AUS) vs ENG, Centurion, 2009 SF
2 - Shakib Al Hasan & Mahmudullah (BAN) vs NZ, Cardiff, 2017
2 - Will Young & Tom Latham (NZ) vs PAK, Karachi, 2025
2 - Rachin Ravindra & Kane Williamson (NZ) vs SA, Lahore, 2025 SF
ಐಸಿಸಿ ಈವೆಂಟ್ ನ ನಾಕೌಟ್ ನಲ್ಲಿ 3ನೇ ಗರಿಷ್ಠ ಮೊತ್ತ
ಇನ್ನು ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಕಲೆಹಾಕಿದ 362 ರನ್ ಗಳು ಐಸಿಸಿ ಟೂರ್ನಿಗಳ ನಾಕೌಟ್ ಪಂದ್ಯಗಳಲ್ಲಿ ದಾಖಲಾದ 3ನೇ ಗರಿಷ್ಠ ಮೊತ್ತವಾಗಿದೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ಭಾರತ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 397ರನ್ ಕಲೆ ಹಾಕಿತ್ತು. ಇದು ಐಸಿಸಿ ಏಕದಿನ ಟೂರ್ನಿಯ ನಾಕೌಟ್ ಹಂತದ ಪಂದ್ಯದಲ್ಲಿ ದಾಖಲಾದ ತಂಡವೊಂದರ ಗರಿಷ್ಠ ಮೊತ್ತವಾಗಿದೆ.
Highest scores in ICC ODI tournaments knockouts
397/4 - IND vs NZ, Mumbai WS, CWC 2023 SF
393/6 - NZ vs WI, Wellington, CWC 2015 QF
362/6 - NZ vs SA, Lahore, CT 2025 SF
359/2 - AUS vs IND, Johannesburg, CWC 2003 Final
338/4 - PAK vs IND, The Oval, CT 2017 Final
ಅಂತೆಯೇ ಏಕದಿನ ಪಂದ್ಯಗಳಲ್ಲಿ ಎರಡು ಬಾರಿ ಮಾತ್ರ ಇದಕ್ಕಿಂತ ಅಂದರೆ 360ಕ್ಕಿಂತ ಹೆಚ್ಚಿನ ಗುರಿಯನ್ನು ಬೆನ್ನಟ್ಟಲಾಗಿದೆ. ಈ ಹಿಂದೆ 2006 ರಲ್ಲಿ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ವಿರುದ್ಧ 435 ಮತ್ತು 2016 ರಲ್ಲಿ ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ 372 ರನ್ ಗಳನ್ನು ಯಶಸ್ವಿಯಾಗಿ ಬೆನ್ನು ಹತ್ತಿತ್ತು.
Only twice has a higher target been chased in ODIs - both by South Africa against Australia - 435 at the Wanderers, Johannesburg in 2006 and 372 at Kingsmead, Durban in 2016.
ಚಾಂಪಿಯನ್ಸ್ ಟ್ರೋಫಿಯ ಒಂದೇ ಟೂರ್ನಿಯಲ್ಲಿ ನ್ಯೂಜಿಲೆಂಡ್ ಗರಿಷ್ಟ ಶತಕ
ಇನ್ನು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಒಂದೇ ಟೂರ್ನಿಯಲ್ಲಿ ಅತೀ ಹೆಚ್ಚು ಶತಕಗಳನ್ನು ಸಿಡಿಸಿದ ತಂಡ ಎಂಬ ಕೀರ್ತಿಗೆ ನ್ಯೂಜಿಲೆಂಡ್ ಭಾಜನವಾಗಿದೆ. ಈ ಪಂದ್ಯದಲ್ಲಿನ 2 ಶತಕಗಳೊಂದಿಗೆ ನ್ಯೂಜಿಲೆಂಡ್ ಹಾಲಿ ಟೂರ್ನಿಯಲ್ಲಿ ಈ ವರೆಗೂ ಒಟ್ಟು 5 ಶತಕಗಳನ್ನು ಸಿಡಿಸಿದೆ. ಇದು ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಯಾವುದೇ ಒಂದು ಟೂರ್ನಿಯಲ್ಲಿ ತಂಡವೊಂದು ಕಲೆಹಾಕಿದ ಗರಿಷ್ಛ ಶತಕಗಳಾಗಿದೆ. ಈ ಹಿಂದೆ 2006ರಲ್ಲಿ ವೆಸ್ಟ್ ಇಂಡೀಸ್ ತಂಡ 4 ಶತಕಗಳನ್ನು ಕಲೆಹಾಕಿತ್ತು. ಇದೀಗ ಈ ದಾಖಲೆಯನ್ನು ನ್ಯೂಜಿಲೆಂಡ್ ಹಿಂದಿಕ್ಕಿದೆ.
Most individual hundreds for a team in a CT edition
5 - New Zealand in 2025
4 - West Indies in 2006
3 - Australia in 2009
3 - Bangladesh in 2017
3 - India in 2002
ಐಸಿಸಿ ಏಕದಿನ ಟೂರ್ನಿಯಲ್ಲಿ ಗರಿಷ್ಠ ಶತಕ
ಇನ್ನು ನ್ಯೂಜಿಲೆಂಡ್ ರಚಿನ್ ರವೀಂದ್ರ ಇಂದಿನ ತಮ್ಮ ಶತಕದ ಮೂಲಕ ತಮ್ಮದೇ ಶತಕಗಳ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಈ ಹಿಂದೆ ನ್ಯೂಜಿಲೆಂಡ್ ಪರ ಐಸಿಸಿ ಏಕದಿನ ಟೂರ್ನಿಗಳಲ್ಲಿ ಗರಿಷ್ಛ ಶತಕ ಸಿಡಿಸಿದ ದಾಖಲೆಯನ್ನು ಹೊಂದಿದ್ದ ರಚಿನ್ ರವೀಂದ್ರ ಇಂದು ಮತ್ತೊಂದು ಶತಕ ಸಿಡಿಸಿ ತಮ್ಮದೇ ದಾಖಲೆಯನ್ನು ಹಿಂದಿಕ್ಕಿದ್ದಾರೆ. ರಚಿನ್ ರವೀಂದ್ರ ಐಸಿಸಿ ಏಕದಿನ ಟೂರ್ನಿಗಳಲ್ಲಿ ತಮ್ಮ ಶತಕಗಳನ್ನು 5ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ. ಅಂತೆಯೇ ಇಂದು ಮತ್ತೊಂದು ಶತಕ ಸಿಡಿಸಿದ ಕೇನ್ ವಿಲಿಯಮ್ಸನ್ ಕೂಡ ಐಸಿಸಿ ಏಕದಿನ ಟೂರ್ನಿಗಳಲ್ಲಿ ತಮ್ಮ ಶತಕಗಳ ಸಂಖ್ಯೆಯನ್ನು 4ಕ್ಕೆ ಏರಿಕೆ ಮಾಡಿಕೊಂಡರು.
Most hundreds for NZ in ICC ODI tournaments
5 - Rachin Ravindra
4 - Kane Williamson
3 - Nathan Astle
ಒಂದೇ ತಂಡದ ವಿರುದ್ದ ಗರಿಷ್ಠ ಶತಕ
ಇನ್ನು ಇಂದು ಮತ್ತೊಂದು ಶತಕ ಸಿಡಿಸಿದ ಕೇನ್ ವಿಲಿಯಮ್ಸನ್ ಐಸಿಸಿ ಏಕದಿನ ಟೂರ್ನಿಗಳಲ್ಲಿ ತಮ್ಮ ಶತಕಗಳ ಸಂಖ್ಯೆಯನ್ನು 4ಕ್ಕೆ ಏರಿಕೆ ಮಾಡಿಕೊಂಡರು. ಅಲ್ಲದೆ ಒಂದೇ ತಂಡದ ವಿರುದ್ಧ ಗರಿಷ್ಠ ಶತಕ ಸಿಡಿಸಿದ ನ್ಯೂಜಿಲೆಂಡ್ ತಂಡದ 3ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ನಾಥನ್ ಆಸ್ಟ್ಲೆ ಭಾರತದ ವಿರುದ್ಧ 5 ಶತಕ ಸಿಡಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಇಂಗ್ಲೆಂಡ್ ವಿರುದ್ಧ ರಾಸ್ ಟೇಲರ್ 5 ಶತಕಗಳನ್ನು ಸಿಡಿಸಿದ್ದಾರೆ.
ಅಂತೆಯೇ ಇದೇ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಪರ ಸಚಿನ್ ಮತ್ತು ವಿರಾಟ್ ಕೊಹ್ಲಿ ತಲಾ ಶತಕ ಸಿಡಿಸಿದ್ದು, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕೂಡ 5 ಶತಕ ಸಿಡಿಸಿದ್ದಾರೆ.
NZ batters with most ODI hundreds against a team
5 - Nathan Astle vs India
5 - Ross Taylor vs England
4 - Kane Williamson vs South Africa
Only Sachin Tendulkar, Virat Kohli and David Warner have more ODI tons against South Africa (5 each).
Advertisement