'25-30 ರನ್ ಗಳಿಸಿದ್ದಕ್ಕೆ ನೀವು ಸಂತೋಷಪಡಬಾರದು': ರೋಹಿತ್ ಶರ್ಮಾ ಸಮರ್ಥನೆಗೆ ಸುನೀಲ್ ಗವಾಸ್ಕರ್ ಕಿಡಿ

2025ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಜಯಗಳಿಸಿದ ನಂತರ, ಮುಖ್ಯ ಕೋಚ್ ಗೌತಮ್ ಗಂಭೀರ್, ರೋಹಿತ್ ಅವರ ಬ್ಯಾಟಿಂಗ್ ವೈಖರಿಯನ್ನು ಸಮರ್ಥಿಸಿಕೊಂಡರು.
ಸುನಿಲ್ ಗವಾಸ್ಕರ್ - ರೋಹಿತ್ ಶರ್ಮಾ
ಸುನಿಲ್ ಗವಾಸ್ಕರ್ - ರೋಹಿತ್ ಶರ್ಮಾ
Updated on

ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಭಾರತ ಮಾರ್ಚ್ 9ರಂದು ನಡೆಯಲಿರುವ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಆಡಿರುವ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೂ ಕೆಲ ಆಟಗಾರರು ರನ್ ಗಳಿಸಲು ಹೆಣಗಾಡುತ್ತಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಟೀಂ ಇಂಡಿಯಾದ ಮಾಜಿ ಆಟಗಾರ ಸುನೀಲ್ ಗವಾಸ್ಕರ್, ರೋಹಿತ್ ಶರ್ಮಾ ಅವರು ತಂಡಕ್ಕೆ ತ್ವರಿತ ಆರಂಭ ನೀಡುವತ್ತ ಗಮನಹರಿಸುವ ಬದಲು ಹೆಚ್ಚು ಸಮಯ ಬ್ಯಾಟಿಂಗ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

2025ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಜಯಗಳಿಸಿದ ನಂತರ, ಮುಖ್ಯ ಕೋಚ್ ಗೌತಮ್ ಗಂಭೀರ್, ರೋಹಿತ್ ಅವರ ಬ್ಯಾಟಿಂಗ್ ವೈಖರಿಯನ್ನು ಸಮರ್ಥಿಸಿಕೊಂಡರು. ಸ್ಟಾರ್ ಬ್ಯಾಟರ್ ಅನ್ನು ಅವರು ಗಳಿಸುವ ರನ್ ಮೇಲೆ ಅಳೆಯಲು ಆಗುವುದಿಲ್ಲ, ಅವರು ಆಟದ ಮೇಲೆ ಬೀರುವ ಇಂಪ್ಯಾಕ್ಟ್ ಮೇಲೆ ನಿರ್ಣಯಿಸಲಾಗುತ್ತದೆ ಎಂದಿದ್ದರು. ರೋಹಿತ್‌ನಂತಹ ಬ್ಯಾಟ್ಸ್‌ಮನ್ 25 ರಿಂದ 30 ಓವರ್‌ಗಳ ಕಾಲ ಕ್ರೀಸ್‌ನಲ್ಲಿ ಇದ್ದರೆ, ಅವರು ಎದುರಾಳಿಗಳಿಂದ ಪಂದ್ಯವನ್ನು ಕಸಿದುಕೊಳ್ಳುತ್ತಾರೆ. ಇದನ್ನು ಪ್ರತಿಯೊಬ್ಬ ಆಟಗಾರರು ತಮ್ಮ ಆಟದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.

'ಕಳೆದ ಎರಡು ವರ್ಷಗಳಿಂದ ಅವರು ಇದೇ ವಿಧಾನವನ್ನು ಅನುಸರಿಸುತ್ತಿದ್ದು, ಭಾರತದಲ್ಲಿ ನಡೆದ ವಿಶ್ವಕಪ್ ವೇಳೆ ಇದು ಪ್ರಾರಂಭವಾಯಿತು. ಅವರು ಆ ಸೂತ್ರಕ್ಕೆ ಬದ್ಧರಾಗಿದ್ದಾರೆ. ಅವರು ಸ್ವಲ್ಪ ಯಶಸ್ಸನ್ನು ಕಂಡಿದ್ದಾರೆ. ಆದರೂ, ಇದು ಅವರ ಪ್ರತಿಭೆಗೆ ಸೂಕ್ತವಾದುದಲ್ಲ. ಅವರು ಆಟದಲ್ಲಿ ಇತರ ಅನೇಕರು ಹೊಂದಿರದ ಭರ್ಜರಿ ಬ್ಯಾಟಿಂಗ್ ಮಾಡುವ ಅರ್ಹತೆಯನ್ನು ಹೊಂದಿದ್ದಾರೆ. ಅವರು ಪ್ರತಿಭಾನ್ವಿತ ಆಟಗಾರ' ಎಂದು ಗವಾಸ್ಕರ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಸುನಿಲ್ ಗವಾಸ್ಕರ್ - ರೋಹಿತ್ ಶರ್ಮಾ
ICC ODI Rankings: ರ‍್ಯಾಂಕಿಂಗ್ ನಲ್ಲಿ ಪುಟಿದೆದ್ದ Virat Kohli, ಶುಭ್ ಮನ್ ಗಿಲ್ ಅಗ್ರ ಸ್ಥಾನ ಅಬಾಧಿತ, 2 ಸ್ಥಾನ ಕುಸಿದ Rohit Sharma

'ಆದ್ದರಿಂದ, ನಾನು ಪ್ರೇಕ್ಷಕರನ್ನು ಮೆಚ್ಚಿಸುವ ದೃಷ್ಟಿಕೋನದಿಂದ ಅಥವಾ ತಂಡದ ದೃಷ್ಟಿಕೋನದಿಂದ ಮಾತ್ರ ಮಾತನಾಡುತ್ತಿಲ್ಲ. ಅವರು 25 ಓವರ್‌ಗಳಾದರೂ ಬ್ಯಾಟಿಂಗ್ ಮಾಡಿದರೆ ಭಾರತ ಸುಮಾರು 180-200 ರನ್ ಗಳಿಸುತ್ತದೆ. ಆ ಹೊತ್ತಿಗೆ ಅವರು ಕೇವಲ ಒಂದೆರಡು ವಿಕೆಟ್‌ಗಳನ್ನು ಕಳೆದುಕೊಂಡಿದ್ದರೆ ಊಹಿಸಿ; ಅವರು ಏನು ಮಾಡಬಹುದು ಎಂದು ಯೋಚಿಸಿ. ಟೀಂ ಇಂಡಿಯಾ 350 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಬಹುದು' ಎಂದರು.

ರೋಹಿತ್ ಶರ್ಮಾ ಅವರು ಕೇವಲ 25-30 ರನ್ ಗಳಿಸಿದ್ದಕ್ಕೆ ಸಂತೋಷಪಡಬಾರದು. ಅವರಿಂದ ತಂಡಕ್ಕೆ ಪ್ರಭಾವವು ಇನ್ನೂ ಹೆಚ್ಚಾಗಿರಬೇಕು. ಅವರು ಸ್ವಲ್ಪ ಯೋಚಿಸಬೇಕು. ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವುದು ಉತ್ತಮ ವಿಷಯ. ಆದರೆ, 25-30 ಓವರ್‌ಗಳವರೆಗೆ ಬ್ಯಾಟಿಂಗ್ ಮಾಡುವತ್ತ ಗಮನಹರಿಸಬೇಕು. ಅವರು ಹಾಗೆ ಮಾಡಿದರೆ, ಅವರು ಎದುರಾಳಿಗಳಿಂದ ಪಂದ್ಯವನ್ನು ಕಸಿದುಕೊಳ್ಳುತ್ತಾರೆ ಎಂದು ಗವಾಸ್ಕರ್ ಹೇಳಿದರು.

ಸುನಿಲ್ ಗವಾಸ್ಕರ್ - ರೋಹಿತ್ ಶರ್ಮಾ
ICC Champions Trophy 2025: ಭಾರತ ಇಲ್ಲಿಯವರೆಗೆ 'ಪರಿಪೂರ್ಣ ಆಟ' ಆಡಿಲ್ಲ! ಗೌತಮ್ ಗಂಭೀರ್ ಅಚ್ಚರಿ ಹೇಳಿಕೆ

'ಆ ರೀತಿಯ ಆಟವು ಪಂದ್ಯ ಗೆಲ್ಲಲು ಸಹಕಾರಿಯಾಗಿರುತ್ತದೆ. ಒಬ್ಬ ಬ್ಯಾಟ್ಸ್‌ಮನ್ ಆಗಿ, ನೀವು 25-30 ರನ್ ಗಳಿಸಿದ್ದಕ್ಕೆ ಸಂತೋಷವಾಗಿದ್ದೀರಾ? ನೀವು ಸಂತೋಷಪಡಬಾರದು! ಹಾಗಾಗಿ ನಾನು ಅವರಿಗೆ ಹೇಳುವುದು ಅದನ್ನೇ: ನೀವು ಕೇವಲ ಏಳು, ಎಂಟು ಅಥವಾ ಒಂಬತ್ತು ಓವರ್‌ಗಳ ಬದಲಿಗೆ 25 ಓವರ್‌ಗಳಿಗೆ ಬ್ಯಾಟಿಂಗ್ ಮಾಡಿದರೆ ತಂಡದ ಮೇಲೆ ನಿಮ್ಮ ಪ್ರಭಾವ ಇನ್ನೂ ಹೆಚ್ಚಾಗುತ್ತದೆ' ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com