IPL 2025: ಇಂಗ್ಲೆಂಡ್‌ ಸ್ಫೋಟಕ ಆಲ್‌ರೌಂಡರ್ RCB ತಂಡಕ್ಕೆ ಸೇರ್ಪಡೆ

ಗಾಯದಿಂದಾಗಿ ಭಾರತ ವಿರುದ್ಧದ ಏಕದಿನ ಸರಣಿ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದ ಬೆಥೆಲ್ ಅವರು ಲೀಗ್‌ಗೆ ಮರಳುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು.
ಜಾಕೋಬ್ ಬೆಥೆಲ್
ಜಾಕೋಬ್ ಬೆಥೆಲ್
Updated on

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (2025) ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಎಲ್ಲ ತಂಡಗಳು ತಮ್ಮ ಆಟಗಾರರನ್ನು ಕರೆಸಿಕೊಳ್ಳುತ್ತಿವೆ. ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಜಾಕೋಬ್ ಬೆಥೆಲ್ ಬೆಂಗಳೂರಿಗೆ ಆಗಮಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಐಪಿಎಲ್) ತಂಡವನ್ನು ಸೇರಿಕೊಂಡಿದ್ದಾರೆ.

ಗಾಯದಿಂದಾಗಿ ಭಾರತ ವಿರುದ್ಧದ ಏಕದಿನ ಸರಣಿ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದ ಬೆಥೆಲ್ ಅವರು ಲೀಗ್‌ಗೆ ಮರಳುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಚಾಂಪಿಯನ್ಸ್ ಟ್ರೋಫಿಗಾಗಿ ಇಂಗ್ಲೆಂಡ್‌ನ ತಾತ್ಕಾಲಿಕ ತಂಡದಲ್ಲಿ ಬೆಥೆಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಫೆಬ್ರುವರಿ 6 ರಂದು ನಾಗ್ಪುರದಲ್ಲಿ ಭಾರತ ವಿರುದ್ಧದ ಮೊದಲ ಏಕದಿನ ಸೋಲಿನ ಸಮಯದಲ್ಲಿ ಮಂಡಿ ಸೆಳೆತದಿಂದಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದರು.

ಆದಾಗ್ಯೂ, ಆರ್‌ಸಿಬಿ ಈಗ ಎಲ್ಲ ಊಹಾಪೋಹಗಳಿಗೆ ಅಂತ್ಯ ಹಾಡಿದೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಉದ್ಘಾಟನಾ ಪಂದ್ಯಕ್ಕೂ ಮುನ್ನ ಬೆಥೆಲ್ ಬೆಂಗಳೂರಿಗೆ ಆಗಮಿಸಿದ್ದು, ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ.

ಕಳೆದ ವರ್ಷ ಆರಂಭವಾದ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಬೆಥೆಲ್ ಇಂಗ್ಲೆಂಡ್ ಪರ ಮೂರು ಸ್ವರೂಪಗಳನ್ನು ಆಡಿದ್ದಾರೆ. ಇಲ್ಲಿಯವರೆಗೆ 10 ಟಿ20 ಪಂದ್ಯಗಳನ್ನು ಆಡಿದ್ದು, ಒಂಬತ್ತು ಇನಿಂಗ್ಸ್‌ಗಳಲ್ಲಿ 32.66 ಸರಾಸರಿ ಮತ್ತು 147.36 ಸ್ಟ್ರೈಕ್ ರೇಟ್‌ನಲ್ಲಿ 196 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಆದಾಗ್ಯೂ, ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಬೆಥೆಲ್ 10, 6 ಮತ್ತು 7 ರನ್‌ ಗಳಿಸಿದ್ದರು.

ಬೆಥೆಲ್ 63 ಟಿ20 ಪಂದ್ಯಗಳು ಮತ್ತು 57 ಇನಿಂಗ್ಸ್‌ಗಳಲ್ಲಿ 1,127 ರನ್ ಗಳಿಸಿದ್ದಾರೆ. 136.77 ಸ್ಟ್ರೈಕ್ ರೇಟ್‌ನಲ್ಲಿ ಏಳು ಅರ್ಧಶತಕ ಗಳಿಸಿದ್ದಾರೆ. ಸ್ಪಿನ್ ಬೌಲಿಂಗ್‌ನಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ.

ಬ್ಯಾಟರ್ಸ್: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಟಿಮ್ ಡೇವಿಡ್, ಮನೋಜ್ ಭಾಂಡಗೆ, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ.

ವಿಕೆಟ್ ಕೀಪರ್ಸ್: ಫಿಲ್ ಸಾಲ್ಟ್, ಜಿತೇಶ್ ಶರ್ಮಾ

ಆಲ್‌ರೌಂಡರ್‌ಗಳು: ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಮೋಹಿತ್ ರಾಠಿ

ಸ್ಪಿನ್ನರ್‌ಗಳು: ಸುಯೇಶ್ ಶರ್ಮಾ, ಅಭಿನಂದನ್ ಸಿಂಗ್

ವೇಗದ ಬೌಲರ್‌ಗಳು: ಜೋಶ್ ಹೇಜಲ್‌ವುವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ರಸಿಖ್ ಸಲಾಂ, ನುವಾನ್ ತುಷಾರ, ಲುಂಗಿ ಎಂಗಿಡಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com