IPL 2025: RCB ಕಾರ್ಯಕ್ರಮದ ವೇಳೆ ವಿರಾಟ್ ಕೊಹ್ಲಿ ಸಿಟ್ಟು!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಆವೃತ್ತಿ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಶಿಬಿರವನ್ನು ಸೇರಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ವಿಶ್ವದ ಅತ್ಯಂತ ಪ್ರಭಾವಶಾಲಿ ಕ್ರೀಡಾಪಟುಗಳಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಕೂಡ ಒಬ್ಬರು. ಅವರ ಮಾತುಗಳು, ವಯಕ್ತಿಕ ಜೀವನದ ಕುರಿತು ಅಭಿಮಾನಿಗಳಿಗೆ ಯಾವಾಗಲೂ ಕುತೂಹಲ ಸಹಜವಾಗಿರುತ್ತದೆ. ಕ್ರಿಕೆಟ್ ಕಾರ್ಯಕ್ರಮಗಳಲ್ಲಿಯೂ ಸಹ, ವಿರಾಟ್ ಕೊಹ್ಲಿ ಅವರ ಕ್ರಿಕೆಟ್‌ಗೆ ಸಂಬಂಧಿಸಿದ ಮತ್ತು ಸಂಬಂಧಿಸಿಲ್ಲದ ಹಲವಾರು ವಿಚಾರಗಳು ಆಗ್ಗಾಗ್ಗೆ ಚರ್ಚೆಯಾಗುತ್ತಲೇ ಇರುತ್ತವೆ. ವಿರಾಟ್ ಕೊಹ್ಲಿ ಈ ವರ್ಷದ ಆರಂಭದಲ್ಲಿ ರಣಜಿ ಟ್ರೋಫಿಗೆ ಮರಳಿದಾಗ, ಊಟದ ಸಮಯದಲ್ಲಿ ಅವರು ತಮ್ಮ ತಂಡದ ಸದಸ್ಯರೊಂದಿಗೆ ಸೇವಿಸಿದ ಆಹಾರ ಕೂಡ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ವಿರಾಟ್ ಕೊಹ್ಲಿ ಅವರಿಗೆ ಛೋಲೆ ಭಟೂರೆ ಎಂದರೆ ತುಂಬಾ ಪ್ರೀತಿ. ಆದರೆ, ಫಿಟ್ನೆಸ್ ಕಾಯ್ದುಕೊಳ್ಳಲು ಅದನ್ನು ತ್ಯಜಿಸಿದ್ದಾರೆ. ಈ ಬಗ್ಗೆ ಹಲವರು ಕೊಹ್ಲಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಯೋಜಿಸಿದ್ದ ಇನ್ನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಸಮಿಟ್‌ನಲ್ಲಿ ಕೂಡ ಸಂದರ್ಶಕರಿಂದ ಇಂತದ್ದೇ ಪ್ರಶ್ನೆ ಎದುರಾಗಿದೆ. ಆಗ ವಿರಾಟ್ ಕೊಹ್ಲಿ, ಪ್ರಸಾರಕರು ಭಾರತವನ್ನು ಕ್ರೀಡಾ-ಮುಂದುವರೆದ ರಾಷ್ಟ್ರವಾಗಲು ಸಹಾಯ ಮಾಡುವತ್ತ ಹೆಚ್ಚು ಗಮನಹರಿಸಬೇಕು. ಕ್ರೀಡಾಪಟುಗಳು ಸೇವಿಸುವ ಛೋಲೆ ಭಟೂರೆ ಬಗ್ಗೆ ಅಲ್ಲ. ಬದಲಾಗಿ ಅವರು ಏನು ಮಾಡುತ್ತಾರೆ ಮತ್ತು ಅವರು ಹೇಗೆ ತಯಾರಿ ನಡೆಸುತ್ತಾರೆ ಎಂಬುದರ ಕುರಿತಾದ ಕಥೆಗಳನ್ನು ಹೈಲೈಟ್ ಮಾಡಬೇಕು ಎಂದಿದ್ದಾರೆ.

'ಭಾರತವನ್ನು ಮುಂದುವರೆದ ಕ್ರೀಡಾ ಕ್ಷೇತ್ರವನ್ನಾಗಿ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುವವರು ಅಥವಾ ಹಣವನ್ನು ಹೂಡಿಕೆ ಮಾಡುವವರು ಮಾತ್ರವಲ್ಲದೆ, ಅದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಸಾಮೂಹಿಕ ಪ್ರಯತ್ನದ ಅಗತ್ಯವಿದೆ. ಕ್ರೀಡಾಪಟುಗಳು, ಹೂಡಿಕೆದಾರರು ಮತ್ತು ಸಂಸ್ಥೆಗಳ ಜೊತೆಗೆ, ಕ್ರೀಡೆಗಳನ್ನು ಬೆಂಬಲಿಸುವ ಮತ್ತು ಉತ್ತೇಜಿಸುವಲ್ಲಿ ವೀಕ್ಷಕರ ಪಾತ್ರವೂ ಪ್ರಮುಖವಾಗಿದೆ. ನಮಗೆ ಶಿಕ್ಷಣದ ಅಗತ್ಯವಿದೆ' ಎಂದು ಕೊಹ್ಲಿ ಹೇಳಿದರು.

ವಿರಾಟ್ ಕೊಹ್ಲಿ
ಬೆಂಗಳೂರು: ನಿವೃತ್ತಿ ವದಂತಿ ತಳ್ಳಿಹಾಕಿದ ವಿರಾಟ್ ಕೊಹ್ಲಿ; ಹೇಳಿದ್ದು ಹೀಗೆ....

'ಯಾವುದೇ ಪ್ರಸಾರ ಕಾರ್ಯಕ್ರಮವು ಆಟದ ಬಗ್ಗೆ ಮಾತನಾಡಬೇಕೇ ಹೊರತು ನಿನ್ನೆ ನಾನು ಊಟಕ್ಕೆ ಏನು ತಿಂದೆ ಅಥವಾ ದೆಹಲಿಯಲ್ಲಿ ನನ್ನ ನೆಚ್ಚಿನ ಛೋಲೆ ಭಟೂರೆ ಸ್ಥಳ ಯಾವುದು ಎಂಬುದರ ಬಗ್ಗೆ ಅಲ್ಲ. ಕ್ರಿಕೆಟ್ ಪಂದ್ಯಗಳಲ್ಲಿ ನೀವು ಅದನ್ನು ಹೊಂದಲು ಸಾಧ್ಯವಿಲ್ಲ. ಬದಲಿಗೆ, ಒಬ್ಬ ಕ್ರೀಡಾಪಟು ಏನನ್ನು ಎದುರಿಸುತ್ತಿದ್ದಾನೆ ಎಂಬುದರ ಬಗ್ಗೆ ನೀವು ಮಾತನಾಡಬಹುದು' ಎಂದು ಅವರು ಹೇಳಿದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಆವೃತ್ತಿ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಶಿಬಿರವನ್ನು ಸೇರಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳ ನಡುವೆಯೇ ರಜತ್ ಪಾಟೀದಾರ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ನಾಳೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com