
ಬೆಂಗಳೂರು: ಕ್ರಿಕೆಟ್ ಆಟವನ್ನು ಎಂಜಾಯ್ ಮಾಡುತ್ತಿದ್ದು, ಸದ್ಯಕ್ಕೆ ನಿವೃತ್ತಿ ಯೋಚನೆ ಇಲ್ಲ ಎಂದು ಆರ್ ಸಿಬಿಯ ವಿರಾಟ್ ಕೊಹ್ಲಿ ಹೇಳಿದ್ದಾರೆ. ದುಬೈನಲ್ಲಿ ಇತ್ತೀಚಿಗೆ ನಡೆದ ಚಾಂಫಿಯನ್ಸ್ ಟ್ರೋಫಿ ಗೆದ್ದ ನಂತರ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸುವರು ಎಂಬ ಮಾತುಗಳು ಕೇಳಿಬಂದಿದ್ದವು.
ಶನಿವಾರ ಆರ್‌ಸಿಬಿ ಇನ್ನೋವೇಶನ್ ಲ್ಯಾಬ್‌ನಲ್ಲಿ ನಡೆದ ಟಾಕ್ ಸೆಷನ್‌ನಲ್ಲಿ ಮಾತನಾಡಿದ ಕೊಹ್ಲಿ, ಯಾರೂ ಉದ್ವೇಗಕ್ಕೆ ಒಳಗಾಗಬೇಡಿ. ನಾನು ಯಾವುದೇ ಘೋಷಣೆ ಮಾಡುತ್ತಿಲ್ಲ. ಸದ್ಯಕ್ಕೆ ಎಲ್ಲವೂ ಸರಿಯಾಗಿದೆ. ನಾನು ಆಟವನ್ನು ಆಡಲು ಇಷ್ಟಪಡುತ್ತೇನೆ. ಕ್ರಿಕೆಟ್ ಆಟವನ್ನು ಆನಂದಿಸುತ್ತೇನೆ ಎಂದರು.
ಮುಂದೆ ಯಾವುದೇ ಮೈಲಿಗಲ್ಲು ಸಾಧಿಸುವ ಆಸೆ ಇಲ್ಲ. ನನ್ನೊಳಗೆ ಸ್ಪರ್ಧಾತ್ಮಕ ಪ್ರವೃತ್ತಿ ಇನ್ನೂ ಇದೆ. ಅದು ಜೀವಂತ ಇರುವವರೆಗೂ ನಾನು ಆಟವಾಡುತ್ತೇನೆ. ನಾನು ಯಾವುದೇ ಸಾಧನೆಗಾಗಿ ಆಡುತ್ತಿಲ್ಲ ಎಂದು ಅವರು ಹೇಳಿದರು.
ಸ್ಪರ್ಧಾತ್ಮಕ ಪ್ರವೃತ್ತಿ ಒಬ್ಬ ಕ್ರೀಡಾಪಟುವಿಗೆ ಆಟದಿಂದ ದೂರ ಸರಿಯಲು ಸರಿಯಾದ ಸಮಯ ತೆಗೆದುಕೊಳ್ಳಲು ಕಠಿಣಗೊಳಿಸುತ್ತದೆ (ನಿವೃತ್ತಿಯ ಪ್ರಶ್ನೆ).ಈ ಬಗ್ಗೆ ರಾಹುಲ್ ದ್ರಾವಿಡ್ ಅವರೊಂದಿಗೆ ಈ ಬಗ್ಗೆ ಬಹಳ ಕುತೂಹಲದಿಂದ ಮಾತನಾಡಿದ್ದೇನೆ. ನೀವು ಯಾವಾಗಲೂ ಆತ್ಮಬಲದೊಂದಿಗೆ ಇರಬೇಕಾಗುತ್ತದೆ. ಯಾವಾಗ ಸ್ಪರ್ಧಾತ್ಮಕ ಮನೋಭಾವ ಕಡಿಮೆಯಾಗುತ್ತದೆಯೋ ಆಗ ವಿದಾಯ ಹೇಳಬೇಕಾಗುತ್ತದೆ. ಆದರೆ, ಈಗ ನಾನು ಸಂತೋಷವಾಗಿರುವುದಾಗಿ ವಿವರಿಸಿದರು.
20ರ ವಯಸ್ಸಿನಲ್ಲಿ ನೀವು ಮಾಡಬಹುದಾದಷ್ಟು ಕೆಲಸಗಳನ್ನು ನಿಮ್ಮ 30ರ ವಯಸ್ಸಿನಲ್ಲಿ ಮಾಡಲು ಸಾಧ್ಯವಿಲ್ಲ. ನಾನು ವೃತ್ತಿ ಜೀವನದ ವಿಭಿನ್ನ ಹಂತದಲ್ಲಿ ಇದ್ದೇನೆ. ವೈಫಲ್ಯಗಳಿಗೆ ಮಾನಸಿಕವಾಗಿ ಹೊಂದಿಕೊಂಡಿರುವುದಾಗಿ 36 ವರ್ಷದ ಕೊಹ್ಲಿ ಹೇಳಿದರು. ಚಾಂಪಿಯನ್ಸ್ ಟ್ರೋಫಿಗೂ ಮುನ್ನಾ ಅವರು ಕಳಪೆ ಫಾರ್ಮ್ ನಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು.
Advertisement